ಎಲೆಕ್ಷನ್‌ ಮ್ಯಾಚ್‌ನಲ್ಲಿ ಶಾಹಿ ಗಾರ್ಮೆಂಟ್ಸ್‌ ಬೌನ್ಸರ್‌! ಬೇಳೂರು, ಆಯನೂರು ಕೌಂಟರ್‌ಗೆ ರಾಘವೇಂದ್ರ FIRE

Shahi Garments bouncer in an election match! Raghavendra FIRE at Belur, Ayanur counters

ಎಲೆಕ್ಷನ್‌ ಮ್ಯಾಚ್‌ನಲ್ಲಿ ಶಾಹಿ ಗಾರ್ಮೆಂಟ್ಸ್‌ ಬೌನ್ಸರ್‌!  ಬೇಳೂರು, ಆಯನೂರು ಕೌಂಟರ್‌ಗೆ ರಾಘವೇಂದ್ರ FIRE
Belur Gopalakrishna, Ayanur Manjunath, BY Raghavendra, Shahi Garments,ಬೇಳೂರು ಗೋಪಾಲಕೃಷ್ಣ, ಆಯನೂರು ಮಂಜುನಾಥ್‌, ಬಿವೈ ರಾಘವೇಂದ್ರ , ಶಾಹಿ ಗಾರ್ಮೆಂಟ್ಸ್‌

Shivamogga  Apr 5, 2024  ಲೋಕಸಭಾ ಚುನಾವಣೆ  2024 ರ ಹಿನ್ನೆಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ದಿನಕ್ಕೊಂದು ವಿಚಾರ ಹೊರಕ್ಕೆ ಬರುತ್ತಿದೆ. ಡಮ್ಮಿ, ಕಮ್ಮಿ, ಬಸ್‌ಸ್ಟ್ಯಾಂಡ್‌, 420, ಪುಗಸಟ್ಟೆ, ಹಡಿಬಿಟ್ಟಿ ಸೇರಿದಂತೆ ಇತ್ಯಾದಿ ಪದ ಬಳಕೆ ಮಾಡಿದ ರಾಜಕಾರಣಿಗಳು ಪರಸ್ಪರ ವಾಗ್ದಾಳಿ ನಡೆಸ್ತಿದ್ದರು. 

ಶಾಹಿ ಗಾರ್ಮೆಂಟ್ಸ್‌

ಎಲೆಕ್ಷನ್‌ ಅಂದಮೇಲೆ ಇದೆಲ್ಲಾ ಇದ್ದಿದ್ದೆ ಮಾಮೂಲಿನ ಸಂಗತಿ..ನಾಯಕರು ಬೈದಾಡುವುದನ್ನ ನೋಡಿ ಜನರು ಆಲ್‌ರೈಟ್‌ ಅನ್ನೋಕ್ಕೆ ಸಿಗೋದು ಇದೊಂದೆ ಟೇಂ ಅಂತಾ ಎಲೆಕ್ಷನ್‌ ಮ್ಯಾಚ್‌ ನೋಡ್ತಿರುವ ತಜ್ಞರು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಶಿವಮೊಗ್ಗ ಜಿಲ್ಲಾ ರಾಜಕಾರಣದ ಅಂಗಳದಲ್ಲಿ  ಶಾಹಿ ಗಾರ್ಮೆಂಟ್ಸ್‌ ವಿಚಾರ ಪ್ರಸ್ತಾಪವಾಗಿದೆ.

ಬೇಳೂರು ಗೋಪಾಲಕೃಷ್ಣ

ಈ ಸಂಬಂಧ ವಿಷಯ ತೆಗೆದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ಕಾನೂನುಬಾಹಿರವಾಗಿ ನೀಡಿದ 240 ಎಕರೆ ಜಮೀನಿನನಲ್ಲಿ 230 ಎಕರೆ ವಾಪಸ್ ಪಡೆಯಬೇಕು...ಇಲ್ಲದಿದ್ದರೆ ಉಗ್ರ ಹೋರಾಟ ಮಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ ಎಂದಿದ್ದಾರೆ.

ಆಯನೂರು ಮಂಜುನಾಥ್‌ 

ಇನ್ನೊಂದೆಡೆ ಇದೇ ವಿಚಾರವನ್ನು ಮುಂದುವರಿದು ಪ್ರಸ್ತಾಪಿಸಿದ ಕಾಂಗ್ರೆಸ್‌ ವಕ್ತಾರ ಆಯನೂರು ಮಂಜುನಾಥ್‌ ಶಾಹಿ ಗಾರ್ಮೆಂಟ್ಸ್‌ನ ಹಗರಣ ಬಹುದೊಡ್ಡ ಹಗರಣವಾಗಿದೆ. ಬೇಳೂರು ಗೋಪಾಲಕೃಷ್ಣ ಅವರಿಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು. ಅದನ್ನು ನಾನು ಕೊಡುತ್ತೇನೆ. ಯಾರೋ ಒಬ್ಬನಿಗೆ 250 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಕೊಡುವುದು ಅಂದರೆ ಏನು ಅರ್ಥ ಎಂದು ಅವರು ಪ್ರಶ್ನಿಸಿದ್ದಾರೆ. 

250 ಎಕರೆಗೆ ಕೇವಲ 25 ಕೋಟಿ ರೂ.ಗೆ ಕೊಟ್ಟು ಮತ್ತು ಸಬ್ಸಿಡಿಯ ರೂಪದಲ್ಲಿ 25 ಕೋಟಿಯನ್ನು ಆತನಿಗೆ ವಾಪಾಸ್ಸು ಕೊಟ್ಟು, ಯಾವುದೇ ಹಣವಿಲ್ಲದೇ ಆತನಿಗೆ ಕೊಟ್ಟಂತೆ ಆಗಿದೆ ಎಂದ ಅವರು, ಈ ಬಗ್ಗೆ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರೊಬ್ಬರು ಹೋರಾಟಕ್ಕೆ ಸಿದ್ಧವಾಗಿದ್ದರು. ಅವರನ್ನು ಸುಮ್ಮನಿರಿಸಲಾಯಿತು ಎಂದರು. ಇದರ ಹಿಂದೆ ಯಾರು ಸೈಲೆಂಟ್ ಪಾರ್ಟ್ನರ್ ಇದ್ದಾರೆ ಎಂಬುವುದು ಹೊರಗೆ ಬರಬೇಕು ಎಂದು ಒತ್ತಾಯಿಸಿದ್ರು. 

ಬಿವೈ ರಾಘವೇಂದ್ರ 

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಬಿವೈ ರಾಘವೇಂದ್ರ ಯಾವುದನ್ನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ಯಾವುದೇ ತನಿಖೆ ಸಿದ್ಧವಿರುವುದಾಗಿ ಸವಾಲು ಹಾಕಿದ್ದಾರೆ.  ಉದ್ಯಮಿಗಳು ಬರುವುದು ಅವರಿಗೆ ಇಷ್ಟ ಇಲ್ಲ, ವಿಮಾನ ನಿಲ್ದಾಣವನ್ನು ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಒಳ್ಳೆಯ ವಿಮಾನ ನಿಲ್ದಾಣವಾಗ ಬೇಕಾದರೆ ಹೆಚ್ಚು ಜಾಗಬೇಕಾಗುತ್ತದೆ. ಮುಂದಿನ ಐವತ್ತು ವರ್ಷಗಳ ಗುರಿಯನ್ನ ಇಟ್ಟುಕೊಂಡು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದಿದ್ದಾರೆ.