ಶಿವಮೊಗ್ಗ ಗ್ಯಾಂಗ್‌ ವಾರ್‌ | ಪೊಲೀಸರಿಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಖಡಕ್‌ ಸೂಚನೆ |

Shimoga Gang War | in-charge Minister Madhu Bangarappa instructed the police

ಶಿವಮೊಗ್ಗ ಗ್ಯಾಂಗ್‌ ವಾರ್‌ | ಪೊಲೀಸರಿಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಖಡಕ್‌ ಸೂಚನೆ |
Shimoga Gang War

SHIVAMOGGA | MALENADUTODAY NEWS | May 12, 2024  

ಶಿವಮೊಗ್ಗ  ಗ್ಯಾಂಗ್‌ ವಾರ್‌ ಬಗ್ಗೆ ಶಿವಮೊಗ್ಗ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದಾರೆ. ಈ ಸಂಬಂಧ ನಿನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂದಿದ್ದಾರೆ. ಶಿವಮೊಗ್ಗ ನಗರದಲ್ಲಿ   ನಡೆದ ಮೂವರ ಹತ್ಯೆ ಪ್ರಕರಣದ ಬಗ್ಗೆ ಮಾಹಿತಿಯನ್ನು ಪಡೆದಿರುವೆ. 

ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವ ಎಲ್ಲ ಅಧಿಕಾರ ಮತ್ತು ಸ್ವಾತಂತ್ರ್ಯ ರಕ್ಷಣಾ ಇಲಾಖೆಗೆ ಇದೆ. ಯಾವುದೇ ವ್ಯಕ್ತಿಗಳು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಗಾಂಜಾ ಸೇವನೆ ಮತ್ತು ದಂಧೆಯಲ್ಲಿ ತೊಡಗಿದ್ದರವರನ್ನು ಮಟ್ಟ ಹಾಕಲು ಸೂಚನೆ ನೀಡಲಾಗಿದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೇಕು. ಸಮಾಜವಿರೋಧಿ ಕೃತ್ಯಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.