ಮತ್ತೆ ಕೆರಳಿದ ಕೆಎಸ್ ಈಶ್ವರಪ್ಪ | ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ಕೆಂಡ | ಶಿವಮೊಗ್ಗದಲ್ಲಿಯು ಹೆಲ್ಪ್‌ಲೈನ್!
KS Eshwarappa expressed condolences to the family of Chandrashekhar, a Walmiki Development Corporation officer who committed suicide. Eshwarappa also criticized the police department's alleged involvement in illegal activities and questioned their integrity.
SHIVAMOGGA | MALENADUTODAY NEWS | May 31, 2024 ಮಲೆನಾಡು ಟುಡೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಮನೆಗೆ ಭೇಟಿಕೊಟ್ಟ ಕೆಎಸ್ ಈಶ್ವರಪ್ಪ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆ ಬಳಿಕ ಮಾತನಾಡಿದ ಅವರು, ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ನೋವು ಮತ್ತೊಂದು ಸಂತೋಷ ನೋವು ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡನಲ್ಲ ಎಂದು. ಸಂತೋಷ ಯಾಕೆ ಅಂದ್ರೆ ದೊಡ್ಡ ಹುದ್ದೆ ಇದ್ದರೂ ಅವನ ಪತ್ನಿ ಒಡವೆ ಅಡವಿಟ್ಟು 20 ಲಕ್ಷ ಸಾಲ ತೆಗೆದುಕೊಂಡಿದ್ದಾರೆ.
ಅಂತಹ ಪ್ರಾಮಾಣಿಕ ಅಧಿಕಾರಿಯ ಓದುತ್ತಿರುವ ಮಕ್ಕಳಿಗೆ ಓದಿಸಲು ನೆರವು ಕೊಡಬೇಕು, ಅವರ ಕುಟುಂಬಕ್ಕೆ ನೌಕರಿ ಕೊಡಬೇಕು. ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ತಕ್ಷಣ ಕೊಡಬೇಕು. ಈ ಮನೆ ನಮಗೆ ಬಹಳ ಮೊದಲಿನಿಂದಲೂ ಹತ್ತಿರದ ಮನೆ, ಇದರಲ್ಲಿ ರಾಜಕಾರಣ ಬೆರೆಸಲು ಇಷ್ಟಪಡಲ್ಲ, ಸರಕಾರ ಪರಿಹಾರ ಕೊಡದಿದ್ದರೆ ಶಿವಮೊಗ್ಗ ನಗರದಲ್ಲಿ ಹಣ ಸಂಗ್ರಹ ಮಾಡಿ ಪರಿಹಾರ ಕೊಡುವ ಪ್ರಯತ್ನ ನಡೆಸಲಾಗುವುದು ಎಂದಿದ್ದಾರೆ.
ಇನ್ನೂ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡ್ತಾ ಕೆಎಸ್ ಈಶ್ವರಪ್ಪ ಮೃತ ಅಧಿಕಾರಿಯ ಮನೆಯವರಿಗೆ ಹಣಕಾಸಿನ ಸಮಸ್ಯೆ ಇದೆ ಅಂತ ಮೂರು ಲಕ್ಷ ಕೊಟ್ಟಿದ್ದೇನೆ, ಅವರ ಕುಟುಂಬಕ್ಕೆ ನೀತಿ ಸಂಹಿತೆ ಮುಗಿದ ಮೇಲೆ ಸರ್ಕಾರ 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು. ಗೃಹ ಸಚಿವರು ನನ್ನ ಕೇಸ್ ಅನ್ನು ಹೊಲಿಕೆ ಮಾಡಿದ್ದಾರೆ, ಅದು ಬೇರೆ ಇದು ಬೇರೆ ಹೇಗೆ ಆಗುತ್ತೆ ನನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಇಲ್ಲೂ ಸಹ ಮಂತ್ರಿಗಳ ಮೌಖಿಕ ಆದೇಶದ ಮೂಲಕ ಅಂತ ಡೆತ್ ನೋಟ್ ಬರೆದಿದ್ದಾನೆಇಷ್ಟು ಪರಿಜ್ಞಾನ ಬೇಡವಾ ಗೃಹ ಮಂತ್ರಿಗಳಿಗೆ ಎಂದು ಪ್ರಶ್ನಿಸಿದ ಕೆಎಸ್ ಈಶ್ವರಪ್ಪ ನನ್ನ ಪ್ರಕರಣದಲ್ಲಿ ನಾನೇ ರಾಜೀನಾಮೆ ಕೊಟ್ಟೆ ಈ ಸಂದರ್ಭದಲ್ಲಿ ಆಗಿನ ವಿರೋಧ ಪಕ್ಷ ಬೃಹತ್ ಪ್ರತಿಭಟನೆ ಮಾಡಿತ್ತು. ಈಗ ಯಾಕೇ ಡಬಲ್ ಸ್ಟ್ಯಾಂಡರ್ಡ್ ಕಾಂಗ್ರೆಸ್ ನವರದ್ದು, ಆಗಿನ ವಿರೋಧದ ಪಕ್ಷದ ನಾಯಕ ಈಗಿನ ಸಿಎಂ. ಅವರೀಗ ಯಾಕೇ ರಾಜೀನಾಮೆ ತಗೊತಿಲ್ಲಭಂಡತನದ ಹೇಳಿಕೆ ಮುಖ್ಯಮಂತ್ರಿಗಳದ್ದು ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಂತಲ್ಲವೆ ಇದು ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲ್ಲಾ ಮಂತ್ರಿಗಳು ಈಗ ಭ್ರಷ್ಟಾಚಾರ ಪ್ರಾರಂಭಿಸುತ್ತಾರೆ. ಸಿಎಂ ಸಿದ್ದರಾಮಯ್ಯರ ಮಾತು ಮಂತ್ರಿಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಂತೆ ಅಲ್ಲವೆ, ಹಾಗಾದರೆ ಎಲ್ಲರೂ ಬರೆದಿಟ್ಟು ಸಾಯಿಬೇಕಾ? ಇದು ಒಳ್ಳೆಯ ಲಕ್ಷಣ ಅಲ್ಲ. ಪರಿಶಿಷ್ಟ ವರ್ಗದ ಉದ್ದಾರಕರು ಅಂತ ಹೇಳುತ್ತಿರಾ? ಕೂಡಲೇ ಮಂತ್ರಿಗಳ ರಾಜೀನಾಮೆಯನ್ನು ಸಿಎಂ ಪಡೆಯಬೇಕು. ರಾಜೀನಾಮೆ ತಗೊಳೊವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು. 6 ತಾರೀಖು ಒಳಗೆ ಫಲಿತಾಂಶ ಹೊರಬರುತ್ತೆ, 10 ನೇ ತಾರೀಖಿನೊಳಗೆ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕುಮಂತ್ರಿಯನ್ನು ಉಳಿಸುವ ಪ್ರಯತ್ನವನ್ನು ದೇವರು ಮೆಚ್ಚುತ್ತಾನಾ ಮುಖ್ಯಮಂತ್ರಿಗಳೇ ಎಂದು ಈಶ್ವರಪ್ಪ ಪ್ರಶ್ನಿಸಿದ್ದು, ರಾಜ್ಯದ ಮರ್ಯಾದೆ ಪ್ರಶ್ನೆ ಇದು ಭ್ರಷ್ಟಾಚಾರ ಮುಕ್ತ ಮಾಡಲು ಸಿಕ್ಕ ಸಮಯ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಇದರ ಹಿಂದೆ ದೊಡ್ಡ ಜಾಲ ಇದೆ. ಕೇವಲ ಒಂದು ಇಲಾಖೆಯಲ್ಲಿ ನಡೆದಿಲ್ಲ ಎಲ್ಲಾ ಇಲಾಖೆಯಲ್ಲೂ ನಡೆದಿದೇಯಾ ಎಂದು ತನಿಖೆ ಮಾಡಬೇಕು ಎಂದರು.
ಇದೇ ವೇಳಿ ಶಿವಮೊಗ್ಗಕ್ಕೆ ಗೃಹ ಸಚಿವರು ಪೋಟೋ ಪೋಸ್ ಕೊಡೋಕೆ ಬಂದಿದ್ದರಾ ಎಂದು ಪ್ರಶ್ನಿಸಿದ ಕೆಎಸ್ ಈಶ್ವರಪ್ಪ ರಾಜ್ಯದಲ್ಲಿ ಪೋಲಿಸರಿಗೆ ರಕ್ಷಣೆ ಇಲ್ಲದಂತಾಗಿದೆ ಪೊಲೀಸ್ ಠಾಣೆಗೆ ರಕ್ಷಣೆ ಕೊಡುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ ಯಾಕೇ ಅಂದರೆ ರಾಜ್ಯ ಸರ್ಕಾರ ಮುಸ್ಲಿಂಮರ ಪರವಾಗಿದೆ ರಸ್ತೆ ಮೇಲೆ ನಮಾಜ್ ಮಾಡಿದ್ದಾರೆ ಯಾರ ಭಯವಿಲ್ಲ, ಆದರೆ ಸರ್ಕಾರಮ ಅಧಿಕಾರಿ ಸೂಮೋಟೋ ಕೇಸ್ ಹಾಕಿದಕ್ಕೆ ಕಡ್ಡಾಯ ರಜೆ ನೀಡಿದೆ ರಾಜ್ಯದಲ್ಲಿ ಇರೋದು ಮುಸ್ಲಿಂ ಸರ್ಕಾರ, ಕರ್ನಾಟಕ ರಾಜ್ಯ ಮುಸಲ್ಮಾನ ರಾಜ್ಯ ಅಂತ ಘೋಷಣೆ ಮಾಡಿ ಎಂದು ವ್ಯಂಗ್ಯವಾಡಿದ್ರು.
ಇದೇ ವೇಳೆ ನೂರಕ್ಕೆ ನೂರು ಪ್ರಮೋದ್ ಮುತಾಲಿಕ್ ಸಹಾಯವಾಣಿ ತೆರೆದಿರೋದನ್ನು ಬೆಂಬಲಿಸುತ್ತೇನೆ ಬನ್ನಿ ನಾನು ಶಿವಮೊಗ್ಗದಲ್ಲೇ ಎಷ್ಟು ಲವ್ ಜಿಹಾದ್ ನಡೆಯುತ್ತಿದೆ ಅಂತ ತೋರಿಸುತ್ತೇನೆ ಪ್ರಮೋದ್ ಮುತಾಲಿಕ್ ಗೆ ಅಭಿನಂದನೆ ತಿಳಿಸುತ್ತೇನೆ ಸಹಾಯ ಬೇಕಾದರೆ ಮಾಡುತ್ತೇನೆ ಲವ್ ಜಿಹಾದ್ ಹೆಸರಿನಲ್ಲಿ ಎಲ್ಲಿ ಕರೆದುಕೊಂಡು ಮಾರುತ್ತಾರೋ ಗೊತ್ತಿಲ್ಲಶಿವಮೊಗ್ಗದಲ್ಲಿ ಬೇಕಾದರೆ ಒಂದು ಸಹಾಯವಾಣಿ ತೆಗೆಯುತ್ತೇವೆ ಎಂದರು.
ಎಲ್ಲಿ ತನಕ ಪೊಲೀಸ್ ಇಲಾಖೆಗೂ ಗಾಂಜಾ ಮಾರಾಟಗಾರ ಸಂಬಂಧ ಇರುತ್ತೋ ಅಲ್ಲಿಯವರೆಗೆ ಪರಿಸ್ಥಿತಿ ಹಾಗೇ ಇರುತ್ತೆ ಮಟ್ಕಾ ದುಡ್ಡಲ್ಲಿ ಅವರ ಹೆಂಡತಿಯರಿಗೆ ಸೀರೆ ತರ್ತಾರೆ, ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ ಈ ಜಗತ್ತಿನಲ್ಲಿ ಯಾರು ಸತ್ಯಹರಿಶ್ಚಂದ್ರ ಇಲ್ಲ. ಮಟ್ಕಾ ದುಡ್ಡಲ್ಲಿ ಜೀವನ ನಡೆಸುತ್ತೇನೆ ಅಂತ ಪೊಲೀಸ್ ಅಂದ್ರೆ ಸರಿಯಲ್ಲ, ಎಲ್ಲಾ ವಿಷಯಗಳು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೊತ್ತಿಲ್ವ ಎಂದು ಪ್ರಶ್ನಿಸಿದ ಈಶ್ವರಪ್ಪ ಗಾಂಜಾ ಹೆಸರಲ್ಲಿ ದುಡ್ಡು ತಿನ್ನಬೇಡಿ ಎಂದು ಪೊಲೀಸ್ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ರು.
KS Eshwarappa expressed condolences to the family of Chandrashekhar, a Walmiki Development Corporation officer who committed suicide. Eshwarappa also criticized the police department's alleged involvement in illegal activities and questioned their integrity.