ಆಗುಂಬೆ | ನಿಂತಿದ್ದ ಟಿಪ್ಪರ್‌ಗೆ ಟ್ರಕ್‌ ಡಿಕ್ಕಿ | ಮೊಟ್ಟೆ ವ್ಯಾಪಾರಿ ಸಾವು | ನಡೆದಿದ್ದೇನು?

Agumbe | A truck collided with a standing tipper Death of an egg trader what happened | Tirthahalli News, Shimoga News, Agumbe News, Truck, Tipper,

ಆಗುಂಬೆ | ನಿಂತಿದ್ದ ಟಿಪ್ಪರ್‌ಗೆ ಟ್ರಕ್‌ ಡಿಕ್ಕಿ | ಮೊಟ್ಟೆ ವ್ಯಾಪಾರಿ ಸಾವು | ನಡೆದಿದ್ದೇನು?
Tirthahalli News, Shimoga News, Agumbe News, Truck, Tipper,

SHIVAMOGGA | MALENADUTODAY NEWS | May 10, 2024  

 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪ ಇವತ್ತು ಅಪಘಾತವೊಂದು ಸಂಭವಿಸಿದೆ. ಆಗುಂಬೆ ಹೋಟೆಲ್‌ವೊಂದರ ಬಳಿ ನಿಂತಿದ್ದ ಟಿಪ್ಪರ್‌ಗೆ ಟ್ರಕ್‌ವೊಂದು ಗುದ್ದಿದೆ. ಘಟನೆಯಲ್ಲಿ ಟ್ರಕ್‌ನಲ್ಲಿದ್ದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬನ  ಸ್ಥಿತಿ ಗಂಭೀರವಾಗಿದೆ. 

 

ಹೇಗಾಯ್ತು ಘಟನೆ 

 

ಹೆಬ್ರಿಯಿಂದ ಮೊಟ್ಟೆ ತುಂಬಿಕೊಂಡು ಟ್ರಕ್‌ವೊಂದು ಆಗುಂಬೆ ಘಟ್ಟ ಹತ್ತಿಕೊಂಡು ಮೇಲೆಕ್ಕೆ ಬಂದಿತ್ತು ಆಗುಂಬೆ ಚೆಕ್‌ ಪೋಸ್ಟ್‌ ದಾಟಿ ಬಂದ ಟ್ರಕ್‌, ಅಲ್ಲಿಯೆ ಹೋಟೆಲ್‌ ವೊಂದರ ಬಳಿ ಸೈಡ್‌ಗೆ ಹಾಕಿದ್ದ ಟಿಪ್ಪರ್‌ವೊಂದಕ್ಕ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಸಂದರ್ಭದಲ್ಲಿ  ಟ್ರಕ್‌ ಸ್ಪೀಡ್‌ ಆಗಿತ್ತು ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಡಿಕ್ಕಿಯಾದ ರಭಸಕ್ಕೆ ಟ್ರಕ್‌ನ ಮುಂಭಾಗ ಪೂರ್ತಿ ಜಖಂ ಆಗಿದೆ. 

malenadutoday

 

ಇನ್ನೂ ಟ್ರಕ್‌ನಲ್ಲಿ ಇಬ್ಬರು ಚಾಲಕರಿದ್ದು ಓರ್ವ ದೊಡ್ಡಮನೆ ಕೇರಿಯ ಸಲ್ಮಾನ್‌ ಎಂದು ಗುರುತಿಸಲಾಗಿದೆ. ಆತ ಇನ್ನೊಬ್ಬನಿಗೆ ಡ್ರೈವಿಂಗ್‌ ಮಾಡಲು ಅವಕಾಶ ಕೊಟ್ಟು ಅಲ್ಲಿಯೇ ಮಲಗಿದ್ದ. ಇನ್ನೊಬ್ಬ ಡ್ರೈವರ್‌ ವಾಹನ ಚಲಾಯಿಸಿಕೊಂಡು ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಸಲ್ಮಾನ್‌ ‍ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೇ, ಇನ್ನೊಬ್ಬನ ಸ್ಥಿತಿಯು ಗಂಭೀರವಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆ ಮಣಿಪಾಲ್‌ಗೆ ಕರೆದೊಯ್ಯಲಾಗಿದೆ.