ಸೋಮಿನಕೊಪ್ಪ ಸಮೀಪ ಟ್ರೈನ್‌ಗೆ ಸಿಲುಕಿ ಯುವಕನ ಸಾವು! ನಡೆದಿದ್ದೇನು?

Train runs over man at Sominakoppa. Incident

ಸೋಮಿನಕೊಪ್ಪ ಸಮೀಪ ಟ್ರೈನ್‌ಗೆ ಸಿಲುಕಿ ಯುವಕನ ಸಾವು! ನಡೆದಿದ್ದೇನು?
Talaguppa Train

SHIVAMOGGA | MALENADUTODAY NEWS |  Apr 22, 2024  

ಶಿವಮೊಗ್ಗ ಸೋಮಿನಕೊಪ್ಪದ ಸಮೀಪ ವ್ಯಕ್ತಿಯೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ತಾಳಗುಪ್ಪ-ಬೆಂಗಳೂರು ಇಂಟರ್‌ ಸಿಟಿ ಟ್ರೈನ್‌ಗೆ ಸಿಲುಕಿ ಅವರು ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೆ ಸ್ಪಷ್ಟ ಮಾಹಿತಿ ಸಿಗಬೇಕಿದೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಸ್ನೇಹಿತರು ಕಳೆದುಕೊಂಡ ಮೊಬೈಲ್‌ ಹುಡುಕುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. 

ಶಿವಮೊಗ್ಗ ನಗರದ ನಿವಾಸಿ ಹೇಮಂತ್‌ ಎಂಬವರು ಮೃತಪಟ್ಟಿದ್ದು ಅವರ ವಯಸ್ಸು 24. ನಿನ್ನೆ ರಾತ್ರಿ ಸೋಮಿನಕೊಪ್ಪ ಬಳಿ ಪಶುವೈದ್ಯಕೀಯ ಕಾಲೇಜಿನ ಸಮೀಪ ಸಿಗುವ ರೈಲ್ವೆ ಬ್ರಿಡ್ಜ್‌ ಸಮೀಪ ಘಟನೆ ಸಂಭವಿಸಿದೆ.  ರೈಲ್ವೆ ಟ್ರ್ಯಾಕ್‌ ಬಳಿಯಲ್ಲಿ ಹೇಮಂತ್‌ ಹಾಗೂ ಅವರ ಸ್ನೇಹಿತರಿದ್ದರು. ಅಲ್ಲಿ ಸಾಗರದ ಕಡೆಗೆ ಹೋಗುವ ಟ್ರೈನ್‌ ಬಂದಿದೆ. ಈ ವೇಳೆ ಹೇಮಂತ್‌ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.