ಕೆಎಸ್‌ ಈಶ್ವರಪ್ಪ ವಿಡಿಯೋ ವಿಚಾರ | ಬಿವೈ ರಾಘವೇಂದ್ರ ಹೇಳಿದ್ದೇನು ? | ಎಲೆಕ್ಷನ್‌ ಬಗ್ಗೆ ದೊಡ್ಡ ಮಾತು

KS Eshwarappa video issue What did BY Raghavendra say? | BIG reaction about the election

ಕೆಎಸ್‌ ಈಶ್ವರಪ್ಪ ವಿಡಿಯೋ ವಿಚಾರ | ಬಿವೈ ರಾಘವೇಂದ್ರ ಹೇಳಿದ್ದೇನು ? | ಎಲೆಕ್ಷನ್‌ ಬಗ್ಗೆ ದೊಡ್ಡ ಮಾತು
KS Eshwarappa video issue ,BY Raghavendra

SHIVAMOGGA | MALENADUTODAY NEWS | May 8, 2024  

ಕಳೆದ ಚುನಾವಣೆಯ ಲೀಡ್ ಗಿಂತ ಈ ಬಾರಿ ಹೆಚ್ಚಿನ ಲೀಡ್ ನಲ್ಲಿ ಗೆಲ್ಲುವುದಾಗಿ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾನ ಮಾಡಿದ ಕ್ಷೇತ್ರದ ಜನತೆಗೆ ರಾಘವೇಂದ್ರ ಧನ್ಯವಾದ ತಿಳಿಸಿದ ಅವರು,  ಶಿವಮೊಗ್ಗ ಕ್ಷೇತ್ರ ಚುನಾವಣೆ ಯಶಸ್ವಿಯಾಗಿ ನಡೆದಿದೆ. ಈ ಬಾರಿಯ ಚುನಾವಣೆ ಅನೇಕ ವಿಶೇಷತೆಗಳಿಂದ ಕೂಡಿತ್ತು.  ಮತ್ತೊಮ್ಮೆ ಮೋದಿ ಸರ್ಕಾರ ಘೋಷಣೆ ಅಡಿಯಲ್ಲಿ ಚುನಾವಣೆ ನಡೆದಿದೆ. ಭಾರತದ ಏಳಿಗೆಯನ್ನು ಸಹಿಸದ ವಿಚಿತ್ರ ಶಕ್ತಿ ಗಳು ಮತ್ತೊಮ್ಮೆ ತಲೆ ಎತ್ತದಂತೆ ಮಾಡಲು ಮತದಾರರು ಸಹಕಾರ ನೀಡಿದ್ದಾರೆ. ಚುನಾವಣೆಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಶಿವಮೊಗ್ಗ ಮತದಾರರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಮೊದಲ ಬಾರಿಗೆ ಅತಿ ಹೆಚ್ಚು ಮತದಾನ ನಮ್ಮ ಜಿಲ್ಲೆಯಲ್ಲಿ ಆಗಿದೆ. ಸುಡು ಬಿಸಿಲು ಲೆಕ್ಕಿಸದೇ ಜನ ಮತದಾನ ಮಾಡಿದ್ದಾರೆ. ಶಾಂತಿಯುತವಾಗಿ ಮತದಾನ ನಡೆದಿದೆ. ಜೆಡಿಎಸ್ ನಾಯಕರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ. 

ನಮ್ಮ ನಾಯಕರೇ?

ನಮ್ಮ ನಾಯಕರೇ ನಮ್ಮಿಂದ ದೂರವಾಗಿ ಚುನಾವಣೆ ಸ್ಪರ್ಧಿಸಿದರು. ಇದನ್ನು ಸವಾಲಾಗಿ ಸ್ವೀಕರಿಸಿ ನಾವು ಚುನಾವಣೆ ಎದುರಿಸಿದ್ದೇವೆ. ಮೂರು ಬಾರಿ ಸಂಸದನಾಗಿ ಮಾಡಿದ ಕೆಲಸದ ಮೌಲ್ಯಮಾಪನ ಜನ ಮಾಡಿದ್ದಾರೆ. ಕಳೆದ ಬಾರಿಯ ಲೀಡ್ ಗಳಿಗಿಂತ ಹೆಚ್ಚಿನ ಲೀಡ್ ನಲ್ಲಿ ಗೆಲ್ಲುತ್ತೇನೆ ಎಂದು ರಾಘವೇಂದ್ರ ಹೇಳಿದ್ದಾರೆ. ಮೋದಿ ಗ್ಯಾರಂಟಿಯನ್ನು ಜನ ನಂಬಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಸೀಮಿತವಾದ ಗ್ಯಾರಂಟಿ. ಮೋದಿ ಅವರ ಹಿಂದುತ್ವ ಮತ್ತು ಮೋದಿ‌ ಗ್ಯಾರಂಟಿ ನಮಗೆ ಯಶಸ್ಸು ನೀಡುತ್ತೆ. 

ಕೆಎಸ್‌ ಈಶ್ವರಪ್ಪರ ವಿಡಿಯೋ ವಿಚಾರ

ಇನ್ನು ರಾಘವೇಂದ್ರ ಬೆಂಬಲಿಸಿ ಎಂಬ ಈಶ್ವರಪ್ಪರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರೀಯಿಸಿ ಮಾತನಾಡಿದ ರಾಘವೇಂದ್ರ  ನನಗೂ ಈ ಸುದ್ದಿ ಕೇಳಿ ಆಶ್ಚರ್ಯ ಆಯ್ತು. ಅವರ ಕಡೆಯವರೇ ಮಾಡಿದ್ದಾರಾ ನೋಡಬೇಕು . ನಾವಂತೂ ಫೇಕ್ ನ್ಯೂಸ್ ಮಾಡಿಲ್ಲ ಎಂದು ಹೇಳಿದ್ದಾರೆ.

ಆರಗ ಜ್ಞಾನೇಂದ್ರ 

ಇವ್ವು ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರಕ್ಕೆ ಪ್ರತಿಕ್ರೀಯಿಸಿ ಮಾತನಾಡಿದ  ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. .ಅಪರಾಧ ಮಾಡಿದವರನ್ನು ದಂಢಿಸಬೇಕು. ಈ ಪ್ರಕರಣವನ್ನು ಎಸ್ಐಟಿಗೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪೇನ್ ಡ್ರೈವ್ ವಿತರಣೆ ಮಾಡಿದವರು ಕೂಡ ಅಷ್ಟೇ ದೊಡ್ಡ ಅಪರಾಧಿಗಳು. ಪೇನ್ ಡ್ರೈವ್ ಹಂಚಿದವರನ್ನು ಈ ಸರ್ಕಾರ ಗಮನಿಸುತ್ತಿಲ್ಲ. ಇಂತಹ ಪ್ರಕರಣವನ್ನು ರಾಜಕೀಯ ವಾಗಿ ಬಳಸಿಕೊಳ್ಳುತ್ತಿದೆ. ಇದು ನಾಚೀಗೇಡು, ಹೇಸಿಗೆಯ ರಾಜಕೀಯ ಇದು.  ದೇವೇಗೌಡರಿಗೆ ನೋವುಂಟು ಮಾಡಬೇಕು ಎನ್ನುವುದು ಇದರ ಹಿಂದೆ ಇದೆ. ಒಕ್ಕಲಿಗ ನಾಯಕತ್ವದ ಪ್ರಶ್ನೆ ಈ ಪ್ರಕರಣದ ಹಿಂದೆ ಇದೆ ಎಂದು ಆರಗಾ ಜ್ಞಾನೇಂದ್ರ ಹೇಳಿದ್ದಾರೆ. ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ ಸಿಎಂ,ಡಿಸಿಎಂ ಮಾರ್ಗದರ್ಶನದಲ್ಲಿ ಈ ತನಿಖೆ ನಡೆಯುತ್ತಿದೆ. ಕೂಡಲೇ ಸಿಬಿಐಗೆ ಈ ತನಿಖೆಯನ್ನು ವಹಿಸಬೇಕು. ಸರಿಯಾದ ತನಿಖೆ ಆಗುತ್ತಿಲ್ಲ. ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ ನಡೆಯುತ್ತಿದೆ. ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್, ಹಾಗೂ ಸಿದ್ದರಾಮಯ್ಯ ಇದ್ದಾರೆ. ಇದನ್ನು ಆ ಕಮ್ಯೂನಿಟಿ ಒಪ್ಪಲ್ಲ. ಪೇನ್ ಡ್ರೈವ್ ಹೊರಗಡೆ ಬಿಟ್ಟಿದ್ದು ಸಹ ಅಷ್ಟೇ ದೊಡ್ಡ ತಪ್ಪು.ಎಸ್ಐಟಿ ಒತ್ತಡದಲ್ಲಿ ತನಿಖೆ ಮಾಡುತ್ತಿದೆ . ಪೇನ್ ಡ್ರೈವ್ ಪ್ರಕರಣ ಪಾರದರ್ಶವಾಗಿ ನಡೆಯುತ್ತಿಲ್ಲ ಎಂದು ದೂರಿದರು.