Shivamogga airport ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಮತ್ತೊಂದು ಗುಡ್‌ ನ್ಯೂಸ್‌! ಏನದು ಗೊತ್ತಾ?

Another good news for Shivamogga airport! Do you know what it is?

Shivamogga airport ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಮತ್ತೊಂದು ಗುಡ್‌ ನ್ಯೂಸ್‌! ಏನದು ಗೊತ್ತಾ?
Shivamogga airport

Shivamogga Mar 20, 2024 ಬಸ್​ ನಿಲ್ದಾಣ, ರೈಲ್ವೆ ನಿಲ್ದಾಣ ನಿರ್ಮಿಸಿದಂತೆ ವಿಮಾನ ನಿಲ್ದಾಣ ನಿರ್ವಹಿಸುವುದು ಕಷ್ಟ. ಇದಕ್ಕೆ ಸಾಕ್ಷಿಯಾಗಿ ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ಹಾರಾಟ ಬಂದ್ ಮಾಡಿ ಕುಳಿತಿರುವುದನ್ನ ಗಮನಿಸಿಬಹುದು. ಆದರೆ ಈ ನಿಟ್ಟಿನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಗುರುತರ ಸಾಧನೆ ಮಾಡಿ ಆರು ತಿಂಗಳಿನಲ್ಲಿ ತನ್ನದೆ ಮೈಲುಗಲ್ಲು ಸಾದಿಸಿದೆ

ರಾಷ್ಟ್ರೀಯ ಮಾಧ್ಯಮವೊಂದರ ಪ್ರಕಾರ, ಶಿವಮೊಗ್ಗ ವಿಮಾನ ನಿಲ್ದಾಣವು ತನ್ನ ಮೊದಲ ಆರು ತಿಂಗಳ ಕಾರ್ಯಾಚರಣೆಯಲ್ಲಿ  ಬರೋಬ್ಬರಿ 26,086 ಪ್ರಯಾಣಿಕರನ್ನು ಅವರವರ ಗಮ್ಯವನ್ನು ತಲುಪಿಸಿದೆ. ನಾಲ್ಕು ಮಾರ್ಗಗಳ ಪೈಕಿ ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರು ಓಡಾಟ ನಡೆಸಿದ್ದಾರೆ. 

ಅಂಕಿ ಅಂಶಗಳನ್ನು ನೋಡುವುದಾದರೆ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ₹449.22 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಾಣಿಜ್ಯ ವಿಮಾನಗಳನ್ನು ನಿರ್ವಹಿಸುವ ಕರ್ನಾಟಕದ ಒಂಬತ್ತನೇ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27, 2023 ರಂದು ಉದ್ಘಾಟಿಸಿದರು. ಸೋಗಾನೆಯಲ್ಲಿನ ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರು ಇಡಬೇಕು ಎಂದು ಪ್ರಸ್ತಾವಿಸಲಾಗಿದೆ. ಇದುವರೆಗೂ ನಾಮಕರಣ ಆಗಿಲ್ಲ. ಇನ್ನೂ ಈ ಏರ್‌ಪೋರ್ಟ್‌ ಕಳೆದ ವರ್ಷ ಅಂದರೆ  ಆಗಸ್ಟ್ 31, 2023 ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು,  ರನ್‌ವೇಯಲ್ಲಿ ಎ320 ವಿಮಾನಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.



 ಇಂಡಿಗೋ ಬೆಂಗಳೂರು-ಶಿವಮೊಗ್ಗ ವಲಯದಲ್ಲಿ ವಿಮಾನ ಸೇವೆಗಳನ್ನು ಒದಗಿಸುತ್ತಿದೆ. ಸ್ಟಾರ್‌ ಏರ್‌ಲೈನ್‌ ಕಳೆದ ನವೆಂಬರ್ 21 ರಿಂದ ಹೈದರಾಬಾದ್, ಗೋವಾ ಮತ್ತು ತಿರುಪತಿ ಮೂರು ಮಾರ್ಗಗಳಿಗೆ ವಿಮಾನ ಓಡಿಸುತ್ತಿದೆ.  Directorate General of Civil Aviations (DGCA) ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ ಮಾಸಿಕ ಅಂಕಿ ಅಂಶಗಳ ಪ್ರಕಾರ,  ಕಳೆದ  ಆಗಸ್ಟ್ 31, 2023 ರಿಂದ ಜನವರಿ 31, 2024 ರವರೆಗೆ ಸುಮಾರು 15,485 ಪ್ರಯಾಣಿಕರು ಬೆಂಗಳೂರು ಶಿವಮೊಗ್ಗ ಮಾರ್ಗದಲ್ಲಿ  ಪ್ರಯಾಣಿಸಿದ್ದಾರೆ  

ಇನ್ನೂ ಶಿವಮೊಗ್ಗ-ಗೋವಾ ಸೆಕ್ಟರ್‌ನಲ್ಲಿ ಸುಮಾರು 2,983 ಪ್ರಯಾಣಿಕರು ಮತ್ತು ಶಿವಮೊಗ್ಗ-ಹೈದರಾಬಾದ್ ಸೆಕ್ಟರ್‌ನಲ್ಲಿ 4,259 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಶಿವಮೊಗ್ಗ-ತಿರುಪತಿ ಸೆಕ್ಟರ್‌ನಲ್ಲಿ 3,359 ಪ್ರಯಾಣಿಕರು ಪ್ರಯಾಣಿಸಿದ್ದಾರೆ.. ಆಗಸ್ಟ್ 31, 2023 ಮತ್ತು ಜನವರಿ 31, 2024 ರ ನಡುವೆ 560 ವಿಮಾನಗಳ ಓಡಾಟಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಸಾಕ್ಷಿಯಾಗಿದೆ.