ಮನೆಯಲ್ಲಿ ಜಿಂಕೆ ಮಾಂಸ ಬೇಯುತ್ತಿದ್ದಾಗಲೇ ಪೊಲೀಸರಿಗೆ ಫೋನ್‌ ಕಾಲ್!‌ ಆಗದವರು ಹಾಕಿಕೊಟ್ಟಿದ್ದಕ್ಕೆ ಸಿಕ್ಕಿಬಿತ್ತು ಕಾಡಿನ ಶಿಕಾರಿ

Police get phone call while deer meat is being cooked at home

ಮನೆಯಲ್ಲಿ ಜಿಂಕೆ ಮಾಂಸ ಬೇಯುತ್ತಿದ್ದಾಗಲೇ ಪೊಲೀಸರಿಗೆ ಫೋನ್‌ ಕಾಲ್!‌ ಆಗದವರು ಹಾಕಿಕೊಟ್ಟಿದ್ದಕ್ಕೆ ಸಿಕ್ಕಿಬಿತ್ತು ಕಾಡಿನ ಶಿಕಾರಿ
Police

Shivamogga  Apr 16, 2024 Police ಮಲ್ನಾಡ್‌ನಲ್ಲಿ ಶಿಕಾರಿ ನಡೆಯುತ್ತಿದೆಯಾ? ಹೀಗಂದರೆ ಕೇಳುವುದು ಕಷ್ಟ! ಹೇಳುವುದು ಕಷ್ಟ! ಏಕೆಂದರೆ ಕಾಡಿನ ಶಿಕಾರಿ ಮಲೆನಾಡಿನಲ್ಲಿ ತನ್ನದೇ ಅಂಡರ್‌ ವರ್ಲ್ಡ್‌ ಹೊಂದಿದೆ. ವಿಚಿತ್ರ ಅಂದರೆ, ಈ ಕಾಡಿನ ಶಿಕಾರಿ ವೈಯಕ್ತಿಕ ದ್ವೇಷಕ್ಕೂ ಕೆಲವೊಮ್ಮೆ ಬಳಕೆಯಾಗುತ್ತದೆ. ಯಾರದ್ದೋ ಮನೆಯಲ್ಲಿ  ಗುಟ್ಟಿನಲ್ಲಿ ನಡೆಯುವ ವಹಿವಾಟನ್ನ ಆತನಿಗೆ ಆಗದಿದ್ದವರೇ ಹಚ್ಚಿ ಹಾಕುತ್ತಾರೆ. ಅಷ್ಟೆ ಮಾಡಿದ ತಪ್ಪು ಆಡಿದವರ ಬಾಯಲ್ಲಿ ಸಿಲುಕಿ ಆರೋಪಿ ಜೈಲಿನಲ್ಲಿರುತ್ತಾನೆ. 

ಸದ್ಯ ಇದಕ್ಕೆ ಹೋಲುವ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ತಾಲ್ಲೂಕು ನಲ್ಲಿ ನಡೆದಿದೆ. ಇಲ್ಲಿನ ಸ್ಟೇಷನ್‌ ಒಂದರ ವ್ಯಾಪ್ತಿಯಲ್ಲಿ ಪೊಲೀಸರಿಗೆ ನಮ್ಮ ಮನೆ ಹತ್ತಿರ ಒಬ್ಬರು ಜಿಂಕೆ ಮಾಂಸದ ಅಡುಗೆ ಮಾಡ್ತಿದ್ದಾರೆ ಎಂಬ ಕರೆಯೊಂದು ಬಂದಿದೆ. ತಕ್ಷಣವೇ ವಿಚಾರವನ್ನ ಅಟೆಂಡ್‌ ಮಾಡಿದ ಪೊಲೀಸರು ಸ್ಥಳಕ್ಕೆ ಹೋಗಿ ರೇಡ್‌ ಮಾಡಿದ್ದಾರೆ. ಅಲ್ಲದೆ ಅರಣ್ಯ ಇಲಾಖೆಯವರಿಗೆ ವಿಷಯ ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.