Shivamogga Train users / ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ! DEMU ಟ್ರೈನ್ MEMU ರೈಲುಗಳಾಗಿ ಪರಿವರ್ತನೆ !
Good news for Shimoga railway passengers! DEMU train converted into MEMU trains! Do you know when?
SHIVAMOGGA | Jan 17, 2024 | DEMU train converted into MEMU ಅಂದುಕೊಂಡಂತೆ ಆಗಿದ್ದರೇ ತುಮಕೂರು-ಶಿವಮೊಗ್ಗ ಡೆಮು ಟ್ರೈನ್ ನ್ನ ಮೆಮು ಟ್ರೈನ್ ಆಗಿ ಮಾರ್ಪಾಡು ಮಾಡುವ ಕೆಲಸ ಆಗಬೇಕಿತ್ತು. ಈ ಸಂಕ್ರಾತಿಯಿಂದ ಮೆಮು (ಮೈನ್ ಲೈನ್ ಎಲೆಕ್ಟಿಕ್ ಮಲ್ಟಿಪಲ್ ಯೂನಿಟ್) ಟ್ರೈನ್ ಸಂಚಾರ ಆರಂಭಿಸಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಈ ಪ್ರಕ್ರಿಯೆ ಮುಂದಕ್ಕೆ ಹೋಗಿದೆ. ಈ ಸಂಬಂಧ ಪ್ರಕಟಣೆಯನ್ನು ಸಹ ನೀಡಲಾಗಿದೆ.
ಡೆಮು (DEMU) ರೈಲುಗಳ ಪರಿವರ್ತನೆಯ ದಿನಾಂಕ ಪರಿಷ್ಕರಣೆ
ನೈಋತ್ಯ ರೈಲ್ವೆಯ (SWR) ಇತ್ತೀಚಿನ ಅಪ್‌ಡೇಟ್‌ನಲ್ಲಿ, ಕಾಯ್ದಿರಿಸದ DEMU ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು MEMU (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳಿಗೆ ನಿಗದಿತ ರೂಪಾಂತರಕ್ಕೆ ಹೊಂದಾಣಿಕೆಗಳನ್ನು ಮಾಡಲಾಗಿದೆ.
ಶಿವಮೊಗ್ಗ ಟ್ರೈನ್ Shimoga Train
ರೈಲು ಸಂಖ್ಯೆ 06511/06512 ಬಾಣಸವಾಡಿ- ತುಮಕೂರು ಅನ್‌ರಿಸರ್ವ್ಡ್ DEMU ಎಕ್ಸ್‌ಪ್ರೆಸ್ ವಿಶೇಷ ಮತ್ತು ರೈಲು ಸಂಖ್ಯೆ 06513/06514 ತುಮಕೂರು-ಶಿವಮೊಗ್ಗ ಟೌನ್-ತುಮಕೂರು ಕಾಯ್ದಿರಿಸದ DEMU ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಜನವರಿ 15, 2024 ರಿಂದ ಮೆಮು (ಮೈನ್ ಲೈನ್ ಎಲೆಕ್ಟಿಕ್ ಮಲ್ಟಿಪಲ್ ಯೂನಿಟ್) ರೈಲುಗಳಾಗಿ ಪರಿವರ್ತಿಸಲಾಗುವುದು ಎಂದು ಈ ಹಿಂದೆ ತಿಳಿಸಲಾಗಿತ್ತು,
ಆದರೆ ಕೆಲವು ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ, ಈ ರೈಲುಗಳ ಪರಿವರ್ತನೆಯ ದಿನಾಂಕವನ್ನು ಮಾರ್ಚ್ 1, 2024 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.