ಕೆರೆಯ ಸಮೀಪ ಗೋಣಿಚೀಲದಲ್ಲಿ ಬಾಲಕಿ ಶವ ಪತ್ತೆ | 302 ಕೇಸ್‌

A girl's body was found in a sack near the lake 302 case

ಕೆರೆಯ ಸಮೀಪ ಗೋಣಿಚೀಲದಲ್ಲಿ ಬಾಲಕಿ ಶವ ಪತ್ತೆ | 302 ಕೇಸ್‌
302 case

SHIVAMOGGA | MALENADUTODAY NEWS | Apr 22, 2024  

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ನಲ್ಲಿ ಬಾಲಕಿಯೊಬ್ಬಳ ಮೃತದೇಹವೊಂದು ಗೋಣಿಚೀಲದಲ್ಲಿ ಕಟ್ಟಿ ಬಿಸಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೇರೆ ಎಲ್ಲಿಯೋ ಕೊಲೆ ಮಾಡಿ ಆಕೆಯನ್ನು ಗೋಣಿಚೀಲದಲ್ಲಿ ತುಂಬಿ ಕೆರೆಗೆ ಎಸೆದಿರುವು ಸಾಧ್ಯತೆ ಇದೆ. ಪ್ರಕರಣ ಸೂಕ್ಷ್ಮವಾಗಿದ್ದು ಗಂಭೀರ ಸ್ವರೂಪ ಪಡೆದುಕೊ‍ಳ್ಳುವ ಸಾಧ್ಯತೆ ಇದೆ 

ಶಿಕಾರಿಪುರ ತಾಲ್ಲೂಕು ಕಲ್ಮನೆ ಸಮೀಪದ ಕೊಪ್ಪದಕರೆಯಲ್ಲಿ ನಿನ್ನೆ ಸಂಜೆ ಅಂದರೆ ಭಾನುವಾರ ಸಾಯಂಕಾಲ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಶವವು ಗೋಣಿ ಚೀಲದಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಸಮೀಪದ ಗ್ರಾಮವೊಂದರ ನಿವಾಸಿ ಎಂದು ಗುರುತಿಸಲಾಗಿದೆ. ಇನ್ನೂ ಸ್ಥಳೀಯರು ಈ ಬಗ್ಗೆ  ಅನುಮಾನ ವ್ಯಕ್ತಪಡಿಸಿದ್ದು, ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ನಲ್ಲಿ ಈ ಸಂಬಂಧ ಫೋಷಕರು ದೂರು ದಾಖಲಿಸಿದ್ದಾರೆ. ಐಪಿಸಿ 302 ಅಡಿ  302 case ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.