200 ವರ್ಷಗಳ ಹಿಂದೆ ಕಟ್ಟಿದ್ದ ಮನೆ ಬೆಂಕಿಗೆ ಆಹುತಿ | 50 ಲಕ್ಷ ನಷ್ಟ? | ಹಳೆಯ ಮನೆಯಲ್ಲಿ ಆಗಿದ್ದೇನು?

A house built 200 years ago was destroyed | What happened to the old house? . Sagar Taluk, Kargal Police Station, Sagar News, Backodu, 200 Years Old House,

200 ವರ್ಷಗಳ ಹಿಂದೆ ಕಟ್ಟಿದ್ದ ಮನೆ ಬೆಂಕಿಗೆ ಆಹುತಿ | 50 ಲಕ್ಷ ನಷ್ಟ? | ಹಳೆಯ ಮನೆಯಲ್ಲಿ ಆಗಿದ್ದೇನು?
Sagar Taluk, Kargal Police Station, Sagar News, Backodu, 200 Years Old House,

SHIVAMOGGA | MALENADUTODAY NEWS | Apr 28, 2024    ‌

 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಬ್ಯಾಕೋಡು ಸಮೀಪದ ಹುರುಳಿಯ ಮಹಾವೀರ ಜೈನ್ ಎಂಬುವರ ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಬಗ್ಗೆ ವರದಿಯಾಗಿದೆ. ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟಿದೆ. ಸುಮಾರು ಇನ್ನೂರು ವರ್ಷಗಳ ಹಳೆ ಮನೆ ಇದಾಗಿದ್ದು, ಮನೆಯವರು ಬೇರಾಳದ ಚಂದ್ರನಾಥ ಬಸದಿಯಲ್ಲಿ ನಡೆಯುತ್ತಿರುವ ಪಂಚ ಕಲ್ಯಾಣ ಮಹೋತ್ಸವಕ್ಕೆ ತೆರಳಿದ್ದರು. ಈ ವೇಳೆ ಅವಘಡ ಸಂಭವಿಸಿದೆ.

 

ಇನ್ನೂ ಮನೆಯಿಂದ ಹೊಗೆ ಬರುತ್ತಿರುವುದು ಕಂಡು ಸುತ್ತಮುತ್ತಲಿನವರು ಬಾಗಿಲು ಒಡೆದು ಬೆಂಕಿ ಆರಿಸಿದ್ದಾರೆ. ಬೆಂಕಿಯಲ್ಲಿ ಸಿಪ್ಪೆ ಗೋಟು, ಕೆಂಪಡಕೆ, ಕಾಳುಮೆಣಸು, ಲವಂಗ, ಜಾಯಿಕಾಯಿ ಹಾಗೂ ಬೆಲೆಬಾಳುವ ಪೀಠೋಪಕರಣಗಳು, ಸುಟ್ಟುಹೋಗಿವೆ. ಅಂದಾಜು 50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಈ ಸಂಬಂಧ  ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 

Sagar Taluk, Kargal Police Station, Sagar News, Backodu, 200 Years Old House,