ಚಂಡೆ, ಡೊಳ್ಳು, ವಾದ್ಯಮೇಳದೊಂದಿಗೆ ಹೊರಟ ಓಂ ಗಣಪತಿ! ಮೆರವಣಿಗೆ ಹೇಗೆ ಸಾಗಲಿದೆ? ಇಲ್ಲಿದೆ ವಿವರ

Om Ganapati procession has started in Shimoga cityಶಿವಮೊಗ್ಗ ನಗರದ ಓಂ ಗಣಪತಿಯ ಮೆರವಣಿಗೆ ಆರಂಭವಾಗಿದೆ

ಚಂಡೆ, ಡೊಳ್ಳು,  ವಾದ್ಯಮೇಳದೊಂದಿಗೆ ಹೊರಟ ಓಂ ಗಣಪತಿ! ಮೆರವಣಿಗೆ ಹೇಗೆ ಸಾಗಲಿದೆ? ಇಲ್ಲಿದೆ ವಿವರ

KARNATAKA NEWS/ ONLINE / Malenadu today/ Sep 30, 2023 SHIVAMOGGA NEWS’ ಶಿವಮೊಗ್ಗ: ನಗರದ ಅಶೋಕ ರಸ್ತೆಯ ಅಶೋಕ ಯುವಕರ ಸೇವಾ ಸಂಘದಿಂದ  ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ವಿಸರ್ಜನಾಪೂರ್ವಕ ಮೆರವಣಿಗೆ ಆರಂಭಗೊಂಡಿದೆ. 

ಓಂ ಗಣಪತಿಯ  ರಾಜಬೀದಿ ಉತ್ಸವ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಬಿ.ಎಚ್‌.ರಸ್ತೆ, ಕೋಟೆ ರಸ್ತೆ ಮೂಲಕ ಸಾಗಲಿದೆ. ಬಳಿಕ ರಾಜಬೀದಿ ಉತ್ಸವದೊಂದಿಗೆ ಕೋರ್ಪಲಯ್ಯನ ಛತ್ರದ ಬಳಿ ತುಂಗಾ ನದಿಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. 

ರಾಜಬೀದಿ ಉತ್ಸವದಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಚಂಡೆ, ತಟ್ಟಿರಾಯ, ವೀರಗಾಸೆ, ಕೀಲು ಕುದುರೆ, ಭಜನಾ ತಂಡಗಳು ಭಾಗವಹಿಸಿವೆ. 

ಇನ್ನೂ ಬಂದೋಬಸ್ತ್ ಹಿನ್ನೆಲೆಯಲ್ಲಿ  ಸುಮಾರು ಎರಡು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಎಎಸ್‌ಪಿ, ಪಿಎಸ್‌ಐ, ಸಿಪಿಐ, ಡಿವೈಎಸ್ಪಿ, ಗೃಹ ರಕ್ಷಕ ದಳದ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. 

ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಅನೇಕ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಮೆರವಣಿಗೆ ಮಾರ್ಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. 

ಓಂ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಪೂರಕವಾಗಿ ವಿವಿಧ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಅದರ ವಿವರ ಇಲ್ಲಿದೆ ಓದಿ : ಓಂ ಗಣಪತಿ ಮೆರವಣಿಗೆಯ ಮಾರ್ಗ ಯಾವುದು? ಎಲ್ಲೆಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ! ವಿವರ ಇಲ್ಲಿದೆ

ಗಣೇಶ ಮೂರ್ತಿ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.


ಇನ್ನಷ್ಟು ಸುದ್ದಿಗಳು 

  1. ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಬೆಳಗಿನ ಜಾವ ಧಗಧಗ ಹೊತ್ತಿ ಉರಿದ ಮರ! ಏನಿದು ಘಟನೆ

  2. ವಿಐಎಸ್​ಎಲ್​​ ಆವರಣದಲ್ಲಿ ಕಾಣಿಸಿಕೊಳ್ತು ಮತ್ತೊಂದು ಚಿರತೆ!

  3. ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬೆಂಗಳೂರಿಗೆ ಹೋಗುತ್ತಿದ್ದಾಗ ಶಾಕ್! ಸೂಡೂರು ಸಮೀಪ ಆಕ್ಸಿಡೆಂಟ್!