ಓಂ ಗಣಪತಿ ಮೆರವಣಿಗೆಯ ಮಾರ್ಗ ಯಾವುದು? ಎಲ್ಲೆಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ! ವಿವರ ಇಲ್ಲಿದೆ

What is the route of Om Ganapati procession? Wherever traffic has been changed! Here is the detailಓಂ ಗಣಪತಿ ಮೆರವಣಿಗೆಯ ಮಾರ್ಗ ಯಾವುದು? ಎಲ್ಲೆಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ! ವಿವರ ಇಲ್ಲಿದೆ

ಓಂ ಗಣಪತಿ ಮೆರವಣಿಗೆಯ ಮಾರ್ಗ ಯಾವುದು? ಎಲ್ಲೆಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Sep 24, 2023 SHIVAMOGGA NEWS’

ಶಿವಮೊಗ್ಗ ನಗರದಲ್ಲಿ ಪ್ರತಿಷ್ಠಾಪಿಸಿರುವ ಓಂ ಗಣಪತಿ ವಿಸರ್ಜನಾ ಮೆರವಣಿಗೆ ದಿನಾಂಕ:30.09.2023 ರಂದು ಅಶೋಕ ರಸ್ತೆಯಿಂದ ಪ್ರಾರಂಭವಾಗಿ ಎಸ್,ಪಿ.ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್ ಮುಖ್ಯ ರಸ್ತೆ ,ಎಸ್ ಎನ್ ಸರ್ಕಲ್,ಬಿ.ಹೆಚ್ ರಸ್ತೆ ಮುಖಾಂತರ ಕರ್ನಾಟಕ ಸಂಘ ಪೊಲೀಸ್ ಕಾರ್ನರ್ ಮುಖಾಂತರವಾಗಿ ಅಶೋಕ ರಸ್ತೆಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ,ದೇವಸ್ಥಾನದಿಂದ ತುಂಗಾನದಿಯಲ್ಲಿ ವಿಸರ್ಜನೆಯಾಗಲಿದೆ 

ಈ ಹಿನ್ನೆಲೆಯಲ್ಲಿ  ಸಂಚಾರ ಸುಗಮಗೊಳಿಸುವ ಸಲುವಾಗಿ ಈ ಕೆಳಕಂಡ ಸ್ಥಳಗಳಲ್ಲಿ ವಾಹನ ಸಂಚಾರ ನಿಷೇಧ,ನಿಲುಗಡೆ ಹಾಗೂ ವಾಹನಗಳ ಮಾರ್ಗ ಬದಲಾವಣೆ ಮಾಡಲು ಜಿಲ್ಲಾಡಳಿತ ಆದೇಶವೊಂದನ್ನ ಹೊರಡಿಸಿದೆ. 

ದಿನಾಂಕ: 30.09.2023 ರಂದು ಓಂ ಗಣಪತಿ ವಿಸರ್ಜನಾ ಮೆರವಣಿಗೆ ಮಾರ್ಗ ಪ್ರಾರಂಭ

ಅಶೋಕ ರಸ್ತೆಯಿಂದ ಪ್ರಾರಂಭವಾಗಿ ಎಸ್,ಪಿ,ಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್ ಮುಖ್ಯ ರಸ್ತೆ ,ಎಸ್ ಎನ್ ಸರ್ಕಲ್,ಬಿ.ಹೆಚ್ ರಸ್ತೆ ಮುಖಾಂತರ ಕರ್ನಾಟಕ ಸಂಘ ಪೊಲೀಸ್ ಕಾರ್ನರ್ ಮುಖಾಂತರವಾಗಿ ಅಶೋಕ ರಸ್ತೆಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾದ ರಸ್ತೆಯಲ್ಲಿ ಹೋಗಿ ತುಂಗಾನದಿಯಲ್ಲಿ ವಿಸರ್ಜನೆ ಮಾಡಲಾಗುವುದು.

1. ಮೇಲ್ಕಂಡ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತ ಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದೆ. 



2, ಭದ್ರಾವತಿ, ಬೆಂಗಳೂರು ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ ಗಳು ಎಂ.ಆರ್.ಎಸ್ ಮೂಲಕ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

3, ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ, ಮತ್ತು ಬಸ್ ಗಳು: ಎಂ.ಆರ್ .ಎಸ್.ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು,

4. ಹೊನ್ನಾಳಿ, ಹರಿಹರ, ದಾವಣಗೆರೆಯಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್ ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಶಂಕರಮಠ ಸರ್ಕಲ್ ಹೊಳೆಹೊನ್ನೂರು ಸರ್ಕಲ್‌, ವಿದ್ಯಾನಗರ ಎಂ.ಆರ್. ಎಸ್. ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರವಾಗಿ ಹೋಗುವುದು.

5. ಕೋಟೆ ರಸ್ತೆ ಮತ್ತು ಓಲ್ಡ್ ಬಾರ್ ಲೈನ್ ರಸ್ತೆ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು.

6. ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಶಿಕಾರಿಪುರ ಸೊರಬ, ಹರಿಹರ, ದಾವಣಗೆರೆ ಕಡೆ ಹೋಗುವ ಎಲ್ಲಾ ಬಸ್ ಗಳು ಮತ್ತು ಭಾರಿ ಸರಕು ವಾಹನಗಳು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್-ಅಯ್ಯೋಳ ಸರ್ಕಲ್‌- ಪೊಲೀಸ್ ಚೌಕಿ- ರಾಜ್ ಕುಮಾರ್ ಸರ್ಕಲ್ ಬೊಮ್ಮನಕಟ್ಟೆ ಮುಖಾಂತರ ಸವಳಂಗ ರಸ್ತೆಗೆ ಹೋಗುವುದು.

7. ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂ.ಆರ್.ಎಸ್ ಸರ್ಕಲ್ ಕಡೆಗೆ ಹೋಗುವುದು,

8. ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು ಅಂಬುಲೆನ್ಸ್‌ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತ ಹೊರತುಪಡಿಸಿರುತ್ತದೆ.


ಇನ್ನಷ್ಟು ಸುದ್ದಿಗಳು