ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ! ಟೆಂಡರ್​ ಆಹ್ವಾನ! ಈ ಕೆಲಸವೇ ವಿಶೇಷ, ಎಲ್ಲರೂ ಮಾಡಲಾಗದು! ಎನದು ಓದಿ

Job opportunities at Shimoga airport Tender Invite! This work is special, not everyone can do it! Read what

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ! ಟೆಂಡರ್​ ಆಹ್ವಾನ! ಈ ಕೆಲಸವೇ ವಿಶೇಷ, ಎಲ್ಲರೂ ಮಾಡಲಾಗದು! ಎನದು ಓದಿ
Shimoga airport

Shivamogga Feb 16, 2024 | Shimoga airport   ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಾಗಿ ಈಗಲೂ ಹಲವರು ಪ್ರಕಟಣೆಯ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ಏರ್​ಪೋರ್ಟ್​ನಲ್ಲಿ ಕೆಲಸಕ್ಕಾಗಿ ಟೆಂಡರ್ ಕರೆಯಲಾಗಿದೆ. ಆದರೆ ಈ ಕೆಲಸ ತುಸು ವಿಶೇಷವಾಗಿದೆ. 

ಹೌದು ಹಕ್ಕಿಗಳನ್ನು ಓಡಿಸುವ ಸಂಬಂಧ ಉದ್ಯೋಗವಕಾಶದ ಟೆಂಡರ್ ಕರೆಯಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಪ್ರಾಣಿ, ಪಕ್ಷಿ ಓಡಿಸುವ ಹುದ್ದೆ ಸೃಷ್ಟಿಸಕಾಗಿದೆ. ಅಲ್ಲದೆ ಆಕರ್ಷಕ ಸಂಬಳವನ್ನೂನಿಗದಿ ಮಾಡಿ ಆಸಕ್ತ ಸಂಸ್ಥೆಗಳಿಂದ ಟೆಂಡ‌ರ್ ಕರೆದಿದೆ. 

ವಿಮಾನ ನಿಲ್ದಾಣದಲ್ಲಿ  ರನ್ ವೇ, ಟರ್ಮಿನಲ್ ಬಳಿ ಪ್ರಾಣಿ, ಪಕ್ಷಿಗಳು ಸುಳಿಯದಂತೆ ಓಡಿಸಬೇಕಾಗುತ್ತೆ. ವಿಶೇಷವಾಗಿ ವಿಮಾನ ಇಳಿಯುವ ಸಂದರ್ಭದಲ್ಲಿ ರನ್ ವೇ ಮೇಲೆ ಪ್ರಾಣಿ, ಪಕ್ಷಿ ಬಂದರೆ ಅಪಘಾತಗಳು ನಡೆಯಬಹುದಾದ್ದರಿಂದ ಅವುಗಳನ್ನ ಓಡಿಸಿ ಅವಘಡ ತಪ್ಪಿಸುವ ಸಲುವಾಗಿ ಪಕ್ಷಿಗಳನ್ನ ಓಡಿಸಲು ಜನರನ್ನ ನೇಮಿಸಲಾಗುತ್ತದೆ. 

ಈ ವಿಚಾರದಲ್ಲಿ ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ 13 ಮಂದಿಯನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತಿದ್ದು ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕಕ್ಕೆ ಟೆಂಡ‌ರ್ ಕರೆಯಲಾಗಿದೆ.