ಆಸ್ಕರ್​ ಗೆದ್ದ ಆನೆಯಂತದ್ದೆ ಕಥೆ ಸಕ್ರೆಬೈಲ್​ ಆನೆ ಬಿಡಾರಲ್ಲಿ ನಡೆದಿತ್ತು! ಕಾವಾಡಿಗಾಗಿ ಪ್ರಾಣವನ್ನೆ ತೊರೆದಿದ್ದ ಮರಿಯಾನೆ ಕಥೆ ಇವತ್ತಿನ JP ಫ್ಲ್ಯಾಶ್ ಬ್ಯಾಕ್​ನಲ್ಲಿ

An Oscar-winning elephant-like story took place in the Sakrebail elephant camp! The story of a baby elephant who gave up his life for a kavadi in today's JP flashback

ಆಸ್ಕರ್​ ಗೆದ್ದ ಆನೆಯಂತದ್ದೆ ಕಥೆ ಸಕ್ರೆಬೈಲ್​ ಆನೆ ಬಿಡಾರಲ್ಲಿ ನಡೆದಿತ್ತು! ಕಾವಾಡಿಗಾಗಿ ಪ್ರಾಣವನ್ನೆ ತೊರೆದಿದ್ದ ಮರಿಯಾನೆ ಕಥೆ ಇವತ್ತಿನ JP ಫ್ಲ್ಯಾಶ್ ಬ್ಯಾಕ್​ನಲ್ಲಿ

ತಬ್ಬಲಿಯಾದ ಒಂದುವರೆ ತಿಂಗಳ ಮರಿಯಾನೆಗೆ ತಬ್ಬಲಿ ನೀನಲ್ಲ ಎಂದು ಆರೈಕೆ ಮಾಡಿದ ಆ ಕಾವಾಡಿ. ಹಗಲು ರಾತ್ರಿ ನಿದ್ರೆಗೆಟ್ಟು ಹಾಲುಣಿಸಿ ಒಂದುವರೆ ವರ್ಷಕಾಲ ಪೋಷಿಸಿದ..ಕಾವಾಡಿಯಲ್ಲೆ ತಂದೆತಾಯಿ ಪ್ರೀತಿಕಂಡ ಮರಿಯಾನೆ..ಆತನನ್ನು ಬಹಳ ನೆಚ್ಚಿಕೊಂಡಿತ್ತು..ಆದರೆ ಪ್ರೀತಿಯ ಅಮಲಿಗೆ ಸಿಲುಕಿದ ಆ ಕಾವಾಡಿ ಪ್ರೇಮಿಸಿದಳೊಂದಿಗೆ ವಿವಾಹವಾದ.

ಇತ್ತ ಮರಿಯಾನೆ ಆತನಿಗೆ ಶಬರಿಯಂತೆ ಕಾದು ಕಾದು ಊಟವನ್ನೇ ತ್ಯಜಿಸಿತು. ಬೇರೆಯವರು ಊಟ ನೀಡಿದರು ಅದು ಮುಟ್ಟಲಿಲ್ಲ...ಪ್ರೀತಿಸಿದ ಕಾವಾಡಿಗಾಗಿ ಕಾದು ಕಾದು ಅನಾರೋಗ್ಯಕ್ಕಿಡಾದ ಮರಿಯಾನೆ ಕೊನೆಗೆ ಕೊನೆಯುಸಿರೆಳೆಯಿತು ..ಇದು ಇವತ್ತಿನ ಫ್ಲ್ಯಾಶ್ ಬ್ಯಾಕ್​ 

ಆಸ್ಕರ್ ಪ್ರಶಸ್ತಿ ಪಡೆದ ಸಿನಿಮಾದಂತಿದೆ ಈ ಕಥೆ

ಸ್ನೇಹಿತರೇ ಇತ್ತೀಚೆಗೆ ಆಸ್ಕರ್ ಅವಾರ್ಡ್ ತೆ್ಗೆದುಕೊಂಡ  ಮರಿಯಾನೆ ಹಾಗೂ ಅದನ್ನ ಸಲಹುವ ಮುಗ್ದ ದಂಪತಿಗಳ ಬದುಕಿನ ಚಿತ್ರ  (The Elephant Whisperer)  ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಅಂತಹದ್ದೊಂದು ಘಟನೆ ಶಿವಮೊಗ್ಗದಲ್ಲಿಯು ಒಮ್ಮೆ ನಡೆದಿತ್ತು, ಅದು ಕ್ಯಾಮರಾದ ಕಣ್ಣಿಗೆ ಕೂಡ ಬಿದ್ದಿತ್ತು. ಅಂದು ನಡೆದ ಭಾವುಕ ಹಾಗೂ ಧಾರುಣ ಘಟನೆಯ ಸ್ಟೋರಿಯನ್ನು ಹೇಳಲು ಹೊರಟಿದ್ಧೇನೆ. ಅಂದಹಾಗೆ ಈ ಘಟನೆ ನಡೆದಿದ್ದು, ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರ ದಲ್ಲಿ . 

ಉತ್ತರಕನ್ನಡದಲ್ಲಿ ಸಿಕ್ಕಿದ್ದ ಮರಿಯಾನೆ

ಅದು  2016 ಅಕ್ಟೋಬರ್ 24,  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಗ್ರಾಮ, ಅಲ್ಲಿನ ಅರಣ್ಯ ಇಲಾಖೆಗೆ ಕಾಡಿನಲ್ಲಿ ಅನಾಥವಾಗಿ ಸಿಕ್ಕ ಗಂಡು ಮರಿಯಾನೆ ಸಿಕ್ಕಿತ್ತು. ಈ ಮರಿಯಾನೆಯ ಹಿಂದೆ  25 ಕಾಡಾನೆಗಳ ಹಿಂಡಿತ್ತು. ಆದರೆ, ಪಟಾಕಿ ಸಿಡಿಸಿ ಕೇಕೆ ಹಾಕಿ ಓಡಿಸಿದ ರಬಸಕ್ಕೆ ಆನೆಗಳಲ್ಲೆ ದಿಕ್ಕಾಪಾಲಾಗಿ ಓಡಿದ್ದವು. ಆದರೆ ಮರಿಯಾನೆ ಎಲ್ಲೂ ಹೋಗಲು ಗೊತ್ತಾಗದೇ ಹೊಂಡವೊಂದಕ್ಕೆ ಬಿದ್ದು ನರಳಾಡುತ್ತಿತ್ತು. 

ಕಾದರೂ ಬರಲಿಲ್ಲ ಕಾಡಾನೆಗಳ ಹಿಂಡು

ಆನೆಗಳನ್ನು ಓಡಿಸಲು ಬಂದಿದ್ದ ಗ್ರಾಮಸ್ಥರಿಗೆ ಮರಿಯಾನೆ ಕಾಣ ಸಿಕ್ಕಿತ್ತು. ಮನುಷ್ಯನ ಮಾನವೀಯತೆ ಜಾಗೃತವಾಯ್ತು. ಪುಟ್ಟ ಮಗುವನ್ನ ಕಂದಕದಿಂದ ಮೇಲಕ್ಕೆತ್ತಿ ರಕ್ಷಿಸಿದ್ರು. ಅದರ ಹಿಂಡಿನ ಜೊತೆಗೆ ಹೋಗಬಹುದು ಎಂಬ ಊಹೆಯಿತ್ತು. ಹಾಗಾಗಿ ಮರಿಯನ್ನ ಕಾಡಿನತ್ತ ಬಿಟ್ಟಿದ್ದರು. ಆದರೆ ಮರಿಯಾನೆಯು ಅಲ್ಲಿಂದ ಕದಲಿಲ್ಲ, ಕಾಡಿನಿಂದ ಹಿಂಡೂ ಸಹ ವಾಪಸ್ ಬರಲಿಲ್ಲ. ಮೂರು ದಿನ ಕಾದರೂ ಮರಿಯಾನೆಗೆ ಅದರ ಕುಟುಂಬ ಸಿಗಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಬೇರೆ ದಾರಿಕಾಣದೇ ಮರಿಯಾನೆಗೆ ಸಕ್ರೆ ಬೈಲ್ ಆನೆ ಬಿಡಾರದ ದಾರಿ ತೋರಿಸಿದ್ರು. 

ಸಕ್ರೆಬೈಲ್ ಆನೆ ಕ್ಯಾಂಪ್​ಗೆ ಬಂದ ಮರಿಯಾನೆ 

ಅಮ್ಮನನ್ನ ಸೇರುವ ತವಕದಲ್ಲಿದ್ದ ಮರಿಯಾನೆಗೆ ಅನಾಥವಾದ ಭಾವ ಸಿಟ್ಟೇರಿಸುವ ಮೊದಲೇ, ಸಿಬ್ಬಂದಿ ಸಕ್ರೆಬೈಲ್ ಆನೆ ಬಿಡಾರಕ್ಕೆ ಅದನ್ನ ಕರೆದುಕೊಂಡು ಬಂದಿದ್ದರು. ಥೇಟು ಸ್ಕೂಲಿಗೆ ಸೇರಿಸುವ ಹಾಗೆ, ಅಡ್ಮಿಶನ್​ ಮಾಡಿಸಿ, ದಾಖಲೆಯಲ್ಲಿ ನಮೂದಿಸಿ ಬಾಲಾಜಿ ಎಂದು ಹೆಸರಿಟ್ಟು ಮರಿಯಾನೆಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೊರಟಿದ್ದರು ಉತ್ತರ ಕನ್ನಡದ ಅರಣ್ಯ ಸಿಬ್ಬಂದಿ. ಅಷ್ಟೆ ಪ್ರೀತಿಯಿಂದ ಹೊಸ ಸ್ಟೂಡೆಂಟ್​ನ್ನ ಅಡ್ಮಿಟ್ ಮಾಡಿಸಿಕೊಂಡಿತ್ತು ಸಕ್ರೆಬೈಲ್ ಆನೆ ಬಿಡಾರ. 

ಮೇಷ್ಟ್ರು ಸಿಕ್ಕಿದ್ರು, ಪ್ರೀತಿಯ ಪಾಠ ಆರಂಭವಾಯ್ತು

ಯಲ್ಲಾಪುರದಿಂದ ಬಂದ ಮರಿಯನ್ನು ಸಾಕುವ ಜವಾಬ್ದಾರಿಯನ್ನು ಸಕ್ರಬೈಲು ಆನೆ ಬಿಡಾರದ ಮಾವುತ ರೆಹಮಾನ್ ಪಾಷಾ ಅಲಿಯಾಸ್ ಮುಬಾರಕ್ ಗೆ ನೀಡಲಾಯಿತು.  ಹಾಲು ಕುಡಿಯುವಂತಹ ಕೇವಲ ಒಂದುವರೆ ತಿಂಗಳ ಪುಟ್ಟ ಮರಿಯನ್ನು ಸಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು.  ತಾಯಿ ಹಾಲು, ಕಾಡಿನ ಪರಿಸರ ಇಲ್ಲದಿದ್ದರೇ ಮರಿ ಆನೆಗಳು ಬದುಕುವುದು ತುಂಬಾ ಅಪರೂಪ. ಇದನ್ನೇ ಸವಾಲಾಗಿ ಸ್ವೀಕರಿಸಿದ ರೆಹಮಾನ್ ಪಾಷಾ ಹಾಗು ಮತ್ತೊಬ್ಬ ಮಾವುತ ಮೊಹಮ್ಮದ್ ಗೌಸ್ ಬಾಲಾಜಿಯ ಆರೈಕೆಗೆ ನಿಂತರು. ದಿನಕ್ಕೆ ಮೂರು ಬಾರಿ ಬಾಟಲಿಯಲ್ಲಿ ಹಾಲು ಕುಡಿಸುತ್ತಾ, ಅದರ ಜೊತೆಗೆ ಕಾಲ ಕಳೆಯಲು ಆರಂಭಿಸಿದ್ದ ಮುಬಾರಕ್​,  ಪ್ರತಿನಿತ್ಯದ ಸ್ನಾನ, ಪಾಠ, ಆರೈಕೆ ಜೊತೆಗೆ ಹಿರಿಯಾನೆಗಳ ಸಹವಾಸವನ್ನು ಕಲಿಸುತ್ತಿದ್ದ ಮುಬಾರಕ್​ನನ್ನೆ ಮರಿಯಾನೆ ತನ್ನ ಸರ್ವಸ್ವ ಅಂದುಕೊಂಡುಬಿಟ್ಟಿತ್ತು.   

ಮುಬಾರಕ್​ನ ವಾತ್ಸಲ್ಯದಲ್ಲಿ ಮರಿಯಾನೆ 

ಸಾಮಾನ್ಯವಾಗಿ ಕಾಡಿನ ಮರಿಗಳು ಅಷ್ಟು ಸುಲಭವಾಗಿ ಬಿಡಾರದಲ್ಲಿ ಒಗ್ಗಿಕೊಳ್ಳುವುದಿಲ್ಲ. ಆದರೆ ಬಾಲಾಜಿ ಜಸ್ಟ್ ಹತ್ತಿಪ್ಪತ್ತು ದಿನದಲ್ಲಿಯೇ ತನ್ನ ಸೇವೆ ಮಾಡ್ತಿದ್ದ ಮುಬಾರಕ್​ನ ಪ್ರೀತಿಗೆ ಮನಸೋತು ಬಿಟ್ಟಿತ್ತು. ಆತ ತೋರಿದ ವಾತ್ಸಲ್ಯಕ್ಕೆ ಚಿಕ್ಕ ಸೊಂಡಿಲೆತ್ತಿ ಬಡಿಯುತ್ತಿದ್ದ ಬಾಲಾಜಿ, ಬಾಲ್ಯದ ತುಂಟಾಟವನ್ನು ಆರಂಭಿಸಿತ್ತು. ಈ ಹಿಂದೆ ಸಕ್ರೆಬೈಲ್ ಬಿಡಾರಕ್ಕೆ ಬಂದಿದ್ದ ಮರಿಯಾನೆಗಳು ಬದುಕುಳಿದಿದ್ದ ಉದಾಹರಣೆಗಳು ಕಮ್ಮಿ. ಆದರೆ ಮುಬಾರಕ್​, ಬಾಲಾಜಿಯನ್ನ ತನ್ನ ಕುಟುಂಬದ ಸದಸ್ಯನಂತೆ ನೋಡಿಕೊಳ್ತಿದ್ದ. ತನ್ನೆಲ್ಲಾ ಮಾತನ್ನು ಅದರ ಜೊತೆಗೆ ಆಡುತ್ತಿದ್ದ ಆತ, ಬಾಲಾಜಿ ಎಂದರೆ ಸಾಕಿತ್ತು ಮರಿಯಾನ ಬೆನ್ನು ಅಲ್ಲಾಡಿಸುತ್ತ ಓಡಿ ಬರುತ್ತಿತ್ತು. 

ಪ್ರೀತಿಯ ಸೆಲೆಗೆ ಬಿದ್ದ ಮುಬಾರಕ್​

ಈ ಕಡೆ ಬಾಲಾಜಿ ಮುಬಾರಕ್​ನ ವಾತ್ಸಲ್ಯದಲ್ಲಿ ತನ್ನದೊಂದು ಹೊಸ ಪ್ರಪಂಚವನ್ನು ಬೆರಗಿನ ಕಣ್ಣಿನಿಂದ ನೋಡಲು ಆರಂಭಿಸಿದರೆ, ಅತ್ತ ಮುಬಾರಕ್​ ತನ್ನೊಳಗಿನ ಪ್ರೇಮದ ಬದುಕಿಗೆ ಮನ್ಸಸ್ಸಿನಲ್ಲಿಯೇ ಪಾಯ ಕಟ್ಟುತ್ತಿದ್ದ. ಭವಿಷ್ಯದ ಮನೆಗೆ ಪ್ರೇಮದ ಅಡಿಗಲ್ಲು ಇಡಲು ಆತ ಆಕೆಯೊಂದಿಗೆ ಹೊರಡಬೇಕಿತ್ತು. ಒನ್​ ಪೈನ್​ ಡೇ ಆತ ಯಾರಿಗೂ ಹೇಳದೇ ಹೊರಟುಬಿಟ್ಟಿದ್ದ. ಸಕ್ರೆಬೈಲ್​ ಬಿಡಾರದಿಂದ ತನ್ನ ಬದಕಿಗಾಗಿ ನಡೆದಿದ್ದು ಯಾರಿಗೂ ಏನೂ ಪರಿಣಾಮ ಬೀರಲಿಲ್ಲ. ಆದರೆ ಬಾಲಾಜಿಗೆ ಇದು ಅರ್ಥವಾಗಲಿಲ್ಲ. ಕೆಲವೇ ದಿನಗಳ ವಾತ್ಸಲ್ಯವಾದರೂ ಬಾಲಾಜಿ ಮುಬಾರಕ್​ನಿಗಾಗಿ ಹುಡುಕುತ್ತಿತ್ತು. ಕೀಟಲೆದಾಸನಾಗಿದ್ದ ಬಾಲಾಜಿ, ಸಡನ್ ಆಗಿ ಮಂಕಾಗಿಬಿಟ್ಟಿತ್ತು, ಹಾಲು ಕುಡಿಯುವುದನ್ನೆ ಬಿಟ್ಟ. ಉಳಿದ ಮಾವುತರು, ಕಾವಾಡಿಗಳು ತಮ್ಮೆಲ್ಲಾ ಅನುಭವ ಬಳಸಿ, ಬಾಲಾಜಿಗೆ ಹಾಲು ಕುಡಿಸಲು ನೋಡಿದರು. ಆದರೆ ಬಾಲಾಜಿ ಒಪ್ಪಲಿಲ್ಲ. ಉಪವಾಸ ಉಳಿದುಬಿಟ್ಟ. ಹತ್ತುದಿನಗಳು ಕಳೇಯುತ್ತಲೇ ಬಾಲಾಜಿ ಇಹಲೋಕವನ್ನು ಸಹ ತ್ಯಜಿಸಿದ್ದ. 

ಕೊನೆಯ ಮಾತು 

ಸ್ನೇಹಿತರೆ, ಕೇಳಬಹುದು, ಪ್ರಾಣಿಗಳಲ್ಲಿ ಇದೆಂತಾ ವಾತ್ಸಲ್ಯ ಮಮಕಾರ ಇದೆಲ್ಲಾ ಎಂದು. ಮೂಕ ಪ್ರಾಣಿಗಳು ಅವುಗಳ ಅಂತರಾಳವನ್ನು ಇಣುಕಿನೋಡಲು ಯಾರಿಂದಲೂ ಸಾಧ್ಯವಿಲ್ಲ. ಹಾಗಿದ್ದೂ ಅವುಗಳಲ್ಲಿಯು ಪ್ರೀತಿಯೇ ತುಂಬಿರುತ್ತದೆ ಎನ್ನುವುದಕ್ಕೆ ಪುಟ್ಟ ಬಾಲಾಜಿಗಿಂತಲೂ ಉದಾಹರಣೆ ಬೇರೊಂದಿಲ್ಲ.

 

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com  

MALENADUTODAY.COM/ SHIVAMOGGA / KARNATAKA WEB NEWS


HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite Oscar winner Marian the Elephant Whisperer, Sakrebail Elephant Camp, Shimoga Sakrebail Camp, Uttara Kannada District, Yellapur, Elephant, Wild Elephant Herd, Balaji who came to Sakrebail, Mahout Mubarak, Tunga River Bank, Elephant Story, Baby Elephant Story, JP Flashback, ಆಸ್ಕರ್​ ಗೆದ್ದ ಮರಿಯಾನ್​ ದಿ ಎಲಿಫೆಂಟ್ Whisperer​, ಸಕ್ರೆಬೈಲ್ ಆನೆ ಬಿಡಾರ, ಶಿವಮೊಗ್ಗ ಸಕ್ರೆಬೈಲ್​ ಕ್ಯಾಂಪ್​, ಉತ್ತರ ಕನ್ನಡ ಜಿಲ್ಲೆ , ಯಲ್ಲಾಪುರ, ಆನೆ, ಕಾಡಾನೆ ಗುಂಪು, ಸಕ್ರೆಬೈಲ್​ಗೆ ಬಂದ ಬಾಲಾಜಿ, ಮಾವುತ ಮುಬಾರಕ್​, ತುಂಗಾ ನದಿ ತೀರ, ಆನೆಯ ಕಥೆ, ಮರಿ ಆನೆಯ ಸ್ಟೋರಿ, ಜೆಪಿ ಫ್ಲ್ಯಾಶ್ ಬ್ಯಾಕ್​ ,.