ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ 1 ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ

Fake Lokayukta's menace resumes, calls up official, threatens to pay Rs 1 lakh to Google Pay

ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ

Bhadravati/ ಎಸಿಬಿ ರಚನೆಗೂ ಮೊದಲು ಶಿವಮೊಗ್ಗದಲ್ಲಿ ನಕಲಿ ಲೋಕಾಯುಕ್ತರ ಹಾವಳಿ ಸಾಕಷ್ಟು ದೊಡ್ಡಮಟ್ಟಿಗೆ ಸದ್ದು ಮಾಡಿತ್ತು. ಹಲವು ಅಧಿಕಾರಿಗಳನ್ನು ಲೋಕಾಯುಕ್ತರ ಹೆಸರಿನಲ್ಲಿ ಬ್ಲ್ಯಾಕ್​ಮೇಲ್ ಮಾಡಿದ್ದರ ಬಗ್ಗೆ ಸಾಕಷ್ಟು ಕಂಪ್ಲೆಂಟ್​ಗಳು ದಾಖಲಾಗಿದ್ದವು, ಇದೀಗ ಲೋಕಾಯುಕ್ತಕ್ಕೆ ಮತ್ತೆ ಪವರ್​ ಬಂದಿದ್ದು, ಭ್ರಷ್ಟ ಅಧಿಕಾರಿಗಳಲ್ಲಿ ಭಯವೂ ಹೆಚ್ಚಾಗಿದೆ. ಜೊತೆಯಲ್ಲಿಯೇ ನಕಲಿ ಲೋಕಾಯುಕ್ತ ಅಧಿಕಾರಿಯ ಬಗ್ಗೆಯು ವರದಿಯಾಗಿದೆ. 

ಹೌದು,  ತನ್ನನ್ನು ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು, ಅಧಿಕಾರಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದ ಆರೋಪ ಸಂಬಂಧ ಭದ್ರಾವತಿ ಓಲ್ಡ್​ ಟೌನ್​ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್  ದಾಖಲಾಗಿದೆ. ಈ ಸಂಬಂಧ ಪೊಲೀಸ್ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ನಡೆದಿದ್ದೇನು? 

ದಿನಾಂಕ : 02-04-2023 ರಂದು ಅನಾಮಧೇಯ ವ್ಯಕ್ತಿಯೊಬ್ಬ ಭದ್ರಾವತಿಯ CDPO (Child Development Project Officer)  ರವರ ಮೊಬೈಲ್ ನಂಬರ್ ಗೆ ಕರೆಮಾಡಿದ್ದಾನೆ. ಅಲ್ಲದೆ,  ತನ್ನನ್ನು ಶಿವಮೊಗ್ಗ ಲೋಕಾಯಕ್ತ ಪೊಲೀಸ್ ಉಪಾದೀಕ್ಷಕರು ಎಂದು ಪರಿಚಯಿಸಿಕೊಂಡಿದ್ಧಾನೆ. ಮೇಲಾಗಿ ಅಂಗನವಾಡಿಗೆ ಆಹಾರ ವಿತರಿಸುವ ವಿಚಾರದಲ್ಲಿ, ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ, ಬೆಂಗಳೂರಿನಿಂದ ವಿಚಾರಣಾಧೀಕಾರಿಗಳು ಬಂದಿದ್ದಾರೆ. ಈ ಸಾರಿ ಜೀವಧಾನ ನೀಡುತ್ತೇವೆ. ರೂ 1,20,000/- ಗಳನ್ನು ಗೂಗಲ್ ಪೇ ಮಾಡಿ ಎಂದಿದ್ದಾನೆ. 

ಪದೇಪದೇ ಹಣಕ್ಕಾಗಿ ಫೋನಾಯಿಸುತ್ತಿದ್ದಾಗ ಅಧಿಕಾರಿಗೆ ಬರುತ್ತಿರುವ ಕರೆಯ ಬಗ್ಗೆ ಅನುಮಾನ ಉಂಟಾಗಿದೆ. ಹೀಗಾಗಿ ಕರೆ ಮಾಡಿರುವ ವ್ಯಕ್ತಿ ಹೇಳಿದ ಹುದ್ದೆಯ ಬಗ್ಗೆ ವಿಚಾರಿಸಿದ್ದಾರೆ. ಇದರಿಂದಾಗಿ ಕರೆಮಾಡಿದಾತ  ನಕಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಂಬುದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

Read /ಸೊರಬ  ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ 

Read /McGANN / ಮೆಗ್ಗಾನ್​ನಲ್ಲಿ ನಾಯಿ ಕಚ್ಚಿಕೊಂಡು ಹೋಯ್ತು ಎಳೆ ಮಗುವನ್ನ

Read / 2015 ರಲ್ಲಿ,  ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK

Read / ಬರ್ತಿದೆ ಮುಚ್ಚಿಟ್ಟಿದ್ದೆಲ್ಲಾ ಹೊರಗೆ!? ದೊಡ್ಡಪೇಟೆಯಲ್ಲಿ ದೊಡ್ಡಬೇಟೆ, ಆಗುಂಬೆಯಲ್ಲಿ ಲಾರಿಗಟ್ಲೇ ಅಕ್ಕಿ, ರಗ್ಗು, ಜಮಖಾನ ಜಪ್ತಿ! ಕುಂಸಿಯಲ್ಲಿ ಸಿಕ್ತು ಕ್ಯಾಶು

Read / ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!

Read / ಪೆಟ್ರೋಲಿಂಗ್​​ ವೇಳೆ ಸಿಕ್ತು ಅರ್ಧ ಕೆ.ಜಿ ಒಣ ಗಾಂಜಾ

Read / ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್​ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್​ ಸಹ ಸೇಫ್

Read / ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ

Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.




ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 




MALENADUTODAY.COM/ SHIVAMOGGA / KARNATAKA WEB NEWS

 

HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga Fake Lokayukta, blackmailing officials, CDPO, Bhadravathi News, Old Town, threat in the name of Lokayukta, ACB, Shivamogga News, Malnad Today, NewsLive, ನಕಲಿ ಲೋಕಾಯುಕ್ತ, ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್, CDPO, ಭದ್ರಾವತಿ ನ್ಯೂಸ್​, ಓಲ್ಡ್​ ಟೌನ್​, ಲೋಕಾಯುಕ್ತ ಹೆಸರಿನಲ್ಲಿ ಬೆದರಿಕೆ , ಎಸಿಬಿ, ಶಿವಮೊಗ್ಗ ನ್ಯೂಸ್​, ಮಲೆನಾಡು ಟುಡೆ, ನ್ಯೂಸ್ ಲೈವ್,