ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ ಕಾಡಿಗೆ ಶಿಫ್ಟ್ ಆಗಿದ್ದು ಯಾಕೆ? ಜೆಪಿ ಬರೆಯುತ್ತಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದ ಸಮೀಪ ಕಾಣಿಸಿಕೊಳ್ತಿದ್ದ ಕಾಡಾನೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾಣಿಸಿಕೊಂಡಿದ್ದ ಭದ್ರಾ ಅಭಯಾರಣ್ಯದ ಗಂಡಾನೆಯನ್ನು ಅರಣ್ಯ ಇಲಾಖೆ ಇದೀಗ ನಾಗರಹೊಳೆ ಅಭಯಾರಣ್ಯದಲ್ಲಿ ಬಿಡಲು ಮುಂದಾಗಿದೆ. ಮೂರು ತಿಂಗಳಿನಿಂದ ತೀರ್ಥಹಳ್ಳಿ ಹೆದ್ದಾರಿಯುದ್ದಕ್ಕೂ ಕಾಣಿಸಿಕೊಳ್ತಿದ್ದ ಕಾಡಾನೆಯನ್ನು ಹನಿಟ್ರ್ಯಾಪ್​ ಮೂಲಕ ಸಕ್ರೆಬೈಲ್​ ಆನೆ ಬಿಡಾರದ ಭಾನುಮತಿಯನ್ನು ಬಳಸಿಕೊಂಡು ಡಾರ್ಟ್ ಮಾಡಿ ಹಿಡಿಯಲಾಗಿದೆ. 

Malenadu Today

ಒಂಬತ್ತು ದಿನಗಳಿಂದ ನಿರಂತರ ಕಾರ್ಯಾಚರಣೆಯಲ್ಲಿದ್ದ ಮಾವುತ ಕಾವಾಡಿ ಟ್ರಾಕರ್ಸ್ ಮತ್ತು ಡಾರ್ಟ್ ಎಕ್ಸ್ ಪರ್ಟ್ ಗಳ ತಂಡಕ್ಕೆ  ಕಾಡಾನೆ ಠಕ್ಕರ್ ನೀಡುತ್ತಲೇ ಬಂದಿತ್ತು.ಕುರುವಳ್ಳಿ-ವಿಠಲನಗರದಿಂದ ದೇವಂಗಿ ಅಂಕಿನಕಟ್ಟೆ ವರೆಗಿನ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ಬೀಡು ಬಿಟ್ಟಿದ್ದ ಆನೆಗೆ , ಆ ಪ್ರದೇಶ ನೆಂಟರ ಮನೆಯಂತಾಗಿತ್ತು.ಅಗಾಧವಾಗಿದ್ದ  ಬಿದಿರು, ಬೈನೆ, ಬಾಳೆಗಳನ್ನ ತಿನ್ನುತ್ತಾ ಓಡಾಡುತ್ತಿದ್ದ ಕಾಡಾನೆಯನ್ನು ಹಿಡಿಯುವುದು ಸುಲಭದ ಮಾತನಾಗಿರಲಿಲ್ಲ. 

Malenadu Today

ಕಾಡಾನೆಯನ್ನು ಹಿಡಿಯುವುದು ಸುಲಭದ ಮಾತಾಗಿರಲಿಲ್ಲ

ಕಾಡಿನ ಮುಳ್ಳಿನ ಪೊದೆ ಪೊಟರೆಗಳಿಂದಾಗಿ ಕಾಡಲ್ಲಿ ನಡಿಯುವುದು ಕೂಡ ಕಷ್ಟವಾಗಿತ್ತು. ಹೀಗಾಗಿ ಕಾರ್ಯಾಚರಣೆಯ ಕಾರ್ಯ ವಿಧಾನ ಬದಲಿಸಿದ ಅರಣ್ಯ ಸಿಬ್ಬಂದಿಗಳ ತಂಡ,. ಭಾನುಮತಿ ಹೆಣ್ಣಾನೆ ಮೂಲಕ ಕಾಡಾನೆಯನ್ನು ಆಕರ್ಷಿಸುವ ಹನಿ ಟ್ರಾಪ್ ವಿಧಾನಕ್ಕೆ ಮೊರೆ ಹೋಯಿತು. ನಾಲ್ಕೈದು ದಿನಗಳಿಂದ ಭಾನುಮತಿ  ಹೆಣ್ಣಾನೆಯನ್ನು ನಿಗದಿತ ಸ್ಥಳದಲ್ಲಿ ಕಟ್ಟಿಹಾಕಿ ಮರದ ಮೇಲೆ ಮಚಾನ್ ನಿರ್ಮಿಸಲಾಗಿತ್ತು. ಮಚಾನ್ ಅಂದರೆ ಮರದ ಮೇಲೆ ಮನೆಯಂತಿರುವ ಛಾವಣಿ ನಿರ್ಮಿಸುವುದು. ಮಚಾನ್ ನಲ್ಲಿ ರಾತ್ರಿಯಿಂದ ಹಗಲಿನ ವರಗೆ ಕಾದು ಕೂಡ ಡಾರ್ಟ್ ಎಕ್ಸ್ ಪರ್ಟ್ ಗಳು ಕಾಡಾನೆ ಭಾನುಮತಿ ಬಳಿ ಬರುವುದನ್ನೇ ಕಾಯುತ್ತಿದ್ದರು.ನಾಲ್ಕು ದಿನಗಳಿಂದ ಕಾದು ಕೂತಿದ್ದವರಿಗೆ ಆ ಕ್ಷಣ ಅತ್ಯಂತ ಮುಖ್ಯವಾಗಿತ್ತು.

Malenadu Today

ರಾತ್ರಿ 8.43 ಕ್ಕೆ ಡಾರ್ಟ್ ಮಾಡಿದ ಡಾಕ್ಟರ್ ವಿನಯ್

ಕಾಡಾನೆ ಕಾರ್ಯಾಚರಣೆಯಲ್ಲಿ ಡಾರ್ಟ್ ಎಕ್ಸ್ ಪರ್ಟ್ ಗಳೆಂದೇ ಖ್ಯಾತಿ ಹೊಂದಿರುವ ಡಾಕ್ಟರ್ ಮುಜೀದ್​, ಡಾಕ್ಟರ್ ವಿನಯ್ ಡಾಕ್ಟರ್ ಮುರುಳಿಧರ್, ವಾಸಿಂ ರೊಳಗೊಂಡ ತಂಡ ಕಾಡಾನೆ ಸೆರೆಗೆ ಟೊಂಕಕಟ್ಟಿ ನಿಂತಿತ್ತು. ಸಕ್ರೆಬೈಲಿನ ಬಾಲಣ್ಣ, ಭಾನುಮತಿ ಬಹದ್ದೂರ್​. ಸಾಗರ್ ಕುಮ್ಕಿ ಆನೆಗಳನ್ನು ಮಚಾನ್ ಬಳಿ ಕಟ್ಟಲಾಗಿತ್ತು. 30-03-23 ರ ರಾತ್ರಿ 8. 40 ರ ಹೊತ್ತಿಗೆ ಕಾಡಾನೆ ಭಾನುಮತಿ ಆನೆಯ ಬಳಿ ಬಂದು ನಿಂತಿತ್ತು..

ಮಚಾನ್ ಮೇಲೆ ಅರವಳಿಕೆ ಮದ್ದು ಹಿಡಿದು ಕೂತಿದ್ದ ಡಾಕ್ಟರ್ ವಿನಯ್, 8.43 ಕ್ಕೆ ಬಂದೂಕಿನ ಮೂಲಕ ಅರವಳಿಕೆ ಮದ್ದನ್ನು ಕಾಡಾನೆ ಮೇಲೆ ಪ್ರಯೋಗಿಸಿದರು.ಸುಮಾರು 40 ನಿಮಿಷದ ನಂತರ ಕಾಡಾನೆ ಸೆಡೆಷನ್ ಗೆ ಹೋಯಿತು. ತಕ್ಷಣ ಬಿಡಾರದ ಸಾಕಾನೆಗಳ ಸಹಾಯದಿಂದ ಕಾಡಾನೆಗೆ ಹಗ್ಗ ಬಿಗಿಯಲಾಯಿತು. ಬೆಳಿಗ್ಗೆ ಕ್ರೇನ್ ಮೂಲಕ ಲಾರಿಗೆ ಸ್ಥಳಾಂತರಿಸಲಾಯಿತು. ಇದು ತೀರ್ಥಹಳ್ಳಿಯ ಇತಿಹಾಸದಲ್ಲಿಯೇ ಮೊದಲು ಕಾಡಾನೆ ಸೆರೆಹಿದ ಕಾರ್ಯಾಚರಣೆಯಾಗಿದೆ.

Malenadu Today

 ಸಕ್ರೆಬೈಲು ಕಡೆ ಹೊರಟಿದ್ದ ಟೀಂ..ಮಾರ್ಗ ಬದಲಾಗಿದ್ದು ಹೇಗೆ?

ಸೆರೆಸಿಕ್ಕ ಕಾಡಾನೆಯನ್ನು ಲಾರಿಯ ಮುಖಾಂತರ ಸಕ್ರೆಬೈಲು ಆನೆ ಬಿಡಾರಕ್ಕೆ ತರಲು ಅಧಿಕಾರಿ ಸಿಬ್ಬಂದಿಗಳು ಅಣಿಯಾಗಿದ್ರು. ಪಿಸಿಸಿಎಫ್ ಮೇಲಾಧಿಕಾರಿಗಳ ಆದೇಶ ಕೂಡ ಸಕ್ರೆ ಬೈಲಿಗೆ ಸ್ಥಳಾಂತರಿಸುವುದೆಂದೇ ಆಗಿತ್ತು. ಆ ಆದೇಶದಂತೆ ಸೆರೆಹಿಡಿದ ಕಾಡಾನೆಯನ್ನು ಸಕ್ರೆಬೈಲು ಬಿಡಾರಕ್ಕೆ ಸಾಗಿಸಲಾಗುತ್ತಿತ್ತು. ದೇವಂಗಿ ದಾಟುತ್ತಿದ್ದಂತೆ ವೈಲ್ಡ್ ಲೈಫ್ ಪಿಸಿಸಿಎಫ್ ರವರು ಕಾಡಾನೆಯನ್ನು ನಾಗರಹೊಳೆ ಕಾಡಿಗೆ ಬಿಡುವಂತೆ ಆದೇಶ ಮಾಡಿದ್ರು. ಪುನಃ ಮಾರ್ಗ ಬದಲಿಸಿ ದೇವಂಗಿ ಕೊಪ್ಪ , ಚಿಕ್ಕಮಗಳೂರು ಬೇಲೂರು ಮಾರ್ಗವಾಗಿ ಕಾಡಾನೆಯನ್ನು ನಾಗರಹೊಳೆಗೆ ಸಾಗಿಸಲಾಯಿತು. ಕಾಡಾನೆ ಬಿಡಲು ಬಾಲಣ್ಣ ಮತ್ತು ಸಾಗರ್ ಆನೆಗಳನ್ನು ಕೊಂಡೊಯ್ಯಲಾಗಿದೆ.

Malenadu Today

ನಾಗರಹೊಳೆ ಸ್ಥಳಾಂತರಕ್ಕೆ ಕಾರಣವೇನು? 

ಇನ್ನು ಆರರಿಂದ ಏಳು ವರ್ಷವಿರುವ ಮರಿಯಾನೆಯನ್ನು ಪಳಗಿಸುವುದಕ್ಕಿಂತ ಅದು ಸ್ವಚ್ಚಂದವಾಗಿ ಕಾಡಿನ ಪರಿಸರದಲ್ಲಿ ಇರಲಿ. ನಾಗರಹೊಳೆ ಕಾಡಿನಲ್ಲಿದ್ದರೆ, ಅದು ಬಹಳ ವರ್ಷಗಳ ಕಾಲ ಸ್ವತಂತ್ರವಾಗಿ ಬದುಕಬಲ್ಲದು ಎಂಬುದು ಉದ್ದೇಶವಾಗಿದೆ. ಭದ್ರಾ ಅಭಯಾರಣ್ಯಕ್ಕೆ ಬಿಟ್ಟರೆ ಅದು ಪುನಃ ದೇವಂಗಿ ಬಳಿ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ ಎಂಬ ಉದ್ದೇಶಗಳು ಸ್ಥಳಾಂತರಕ್ಕೆ ಕಾರಣವಾಗಿದೆ. 

Malenadu Today

ಅಲ್ಲಿಗೆ ಹೊಂದಿಕೊಳ್ಳುತ್ತಾ? 

ಹ್ಯೂಮನ್ ಹ್ಯಾಬಿಟೇಟ್ ಆಗಿರುವ ಕಾಡಾನೆಗಳು ಕಾಡಿಗೆ ಬಿಟ್ಟರೂ, ಪುನಃ ಅವು ತಮ್ಮ ಅವಾಸಸ್ಥಳಕ್ಕೆ ವಾಪಸ್ಸಾದ ಸಾಕಷ್ಟು ಉದಾಹರಣೆಗಳು ಕಣ್ಣಮುಂದಿದೆ. ದೇವಂಗಿ ಬಳಿ ಸೆರೆಹಿಡಿದ ಕಾಡಾನೆ ಮೂರು ತಿಂಗಳು ಮಾನವ ಸಂಪರ್ಕದೊಂದಿಗೆ ಇದ್ದ ಕಾಡಾನೆಯಾಗಿದೆ.ಈಗ ಅದು ನಾಗರಹೊಳೆ ಕಾಡಿನ ಪರಿಸರಕ್ಕೆ ಹೊಂದಿಕೊಳ್ಳುತ್ತದೆಯಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

BREAKING NEWS/ ತೀರ್ಥಹಳ್ಳಿ ಪೇಟೆಗೆ ಬರ್ತಿದ್ದ ಕಾಡಾನೆ ಸರೆ? ಸಿಕ್ಕಿದ್ದೇಗೆ ಗೊತ್ತಾ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNewsshivamoggaChikkamagaluru   elephant treatment,elephant,elephant operation,elephant zone,injured elephant,helpless elephant,huge elephant rescue,save elephantsakrebyle elephant camp,sakrebailu elephant camp,elephant camp,sakrebyle,sakrebyle elephant camp karnataka,sakrebyle elephant camp shivamoga,elephant camp sakrebyle,sakrebyle camp,elephants in sakrebyle,sakrebyle elephant camp stay,sakrebyle elephant camp shimoga,sakkarebyle elephant campthirthahalli,thirthahalli news,thirthahalli mla,thirthahalli bjp,thirthahalli bjp mla,thirthahalli assembly,thirthahalli city,thirthahalli.,tirthahalli mla,tirthahalli

Leave a Comment