2015 ರಲ್ಲಿ, ಶಿವಮೊಗ್ಗದಲ್ಲಿಯೇ ಪ್ರಿಂಟ್ ಆಗ್ತಿದ್ದ ಖೋಟಾ ನೋಟಿನ ಜಾಲವನ್ನ ಭದ್ರಾವತಿ ಪೊಲೀಸರು ಭೇದಿಸಿದ್ದೇಗೆ ಗೊತ್ತಾ? ಜೆಪಿ FLASHBACK
In 2015, bhadravathi police busted a racket of fake currency notes being printed in Shimoga itself. JP FLASHBACK

ವೀಕ್ಷಕರೇ ಈ ವಾರ, ಮಲೆನಾಡಿನೊಳಗೆ ಒಂದು ಕಾಲದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ಖೋಟಾ ನೋಟಿನ ಜಾಲದ ಫ್ಲ್ಯಾಶ್ ಬ್ಯಾಕ್ ಸ್ಟೋರಿಯನ್ನು ಹೇಳಲು ಹೊರಟಿದ್ದೇನೆ. ಅಂದಹಾಗೆ, ಮಲೆನಾಡಿಗೂ ಖೋಟಾ ನೋಟಿಗೂ 40 ವರ್ಷಗಳ ನಂಟಿದೆ ಆ ನಂಟು ಎಂತದ್ದು, ಅದರ ಮಗ್ಗಲು ಮುರಿದವರು ಯಾರು ಎನ್ನುವುದನ್ನ ತಿಳಿಸುವುದೇ ಈ ವರದಿಯ ಉದ್ದೇಶ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟಿನ ಜಾಲ ನೆಲೆವೂರುವುದಕ್ಕೂ ಮೊದಲೇ ಮಲೆನಾಡಲ್ಲಿ ಅದರ ಬೇರುಗಳಿದ್ದವು, ಆಗ ಹೊರ ರಾಜ್ಯಗಳಿಂದ ಮಲೆನಾಡಿಗೆ ಬರುತ್ತಿದ್ದ ನೋಟುಗಳನ್ನು ಚಲಾವಣೆ ಮಾಡಿ ಅದರಿಂದಲೇ ಕೆಲವರು ಶ್ರೀಮಂತರಾಗಿದ್ದರು. ಮತ್ತೆ ಕೆಲವರು ಜೈಲು ಶಿಕ್ಷೆ ಅನುಭವಿಸಿ ಬಂದು, ನಂತರ ಬಚ್ಚಿಟ್ಟಿದ್ದ ಹಣದಲ್ಲಿ ಬದುಕು ಸಾಗಿಸಿದ್ದರು. ಆನಂತರದ ಅವಧಿಯಲ್ಲಿ ತಂತ್ರಜ್ಞಾನದ ನೆರವಿನಿಂದ ಜಿಲ್ಲೆಯಲ್ಲಿಯೇ ಖೋಟಾ ನೋಟು ಪ್ರಿಂಟ್ ಆಗತೊಡಗಿತ್ತು. ಕಾಳದಂಧೆಯ ಮಾರುಕಟ್ಟೆ ದೊಡ್ಡದಾಗ ತೊಡಗಿತ್ತು. ಅಚ್ಚರಿಯ ಸಂಗತಿ ಅಂದರೆ ಬಾಂಗ್ಲಾ, ಪಾಕಿಸ್ತಾನದಿಂದ ಬಂದಂತಹ ನೋಟುಗಳ ಸಹ ಶಿವಮೊಗ್ಗದಲ್ಲಿ ಚಲಾವಣೆಯಾಗಿವೆ. ಆದರೆ ಸುಪ್ತ ನದಿಯಾಗಿ ಒಳಗಿಂದೊಳಗೆ ಹರಿಯುತ್ತಿದ್ದ ಈ ಜಾಲಕ್ಕೆ, 06-09-2015 ರಲ್ಲಿ ಭದ್ರಾವತಿ ಪೊಲೀಸರು ಅಕ್ಷರಸಹ ದೊಡ್ಡಪೆಟ್ಟನ್ನ ಕೊಟ್ಟಿದ್ದರು. ಕೇವಲ ಎಂಟುವರೆ ಲಕ್ಷ ಖೋಟಾ ನೋಟಿನ ಜಾಲದ ಬೆನ್ನತ್ತಿದ್ದ ಪೊಲೀಸರು ಅದರ ಮೂಲ ಹುಡುಕಿ, ಬಿಲವನ್ನ ಬಗೆದಿದ್ದರು.
ಅಂದು ನಡೆದಿತ್ತು ಹೈ ಸೀಕ್ರೆಟ್ ದಾಳಿ
2015 ಆಗ ಕೌಶಲೇಂದ್ರ ಕುಮಾರ್ ಶಿವಮೊಗ್ಗದ ಎಸ್ಪಿಯಾಗಿದ್ದರು. ಆ ಸಂದರ್ಭದಲ್ಲಿ ಭದ್ರಾವತಿ ಹೊರವಲಯದ ಬಾರಂದೂರು ಬಳಿ ಖೋಟಾ ನೋಟು ಚಲಾವಣೆ ಮಾಡಲು ಮೂವರು ಯುವಕರು ಅಣಿಯಾಗಿದ್ದಾರೆ ಎಂಬ ಮಾಹಿತಿ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕ್ಷಣಾರ್ಧದಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಬಂದಿತರಿಂದ ಐನೂರು ಮುಖ ಬೆಲೆಯ 910 ಹಾಗೂ ಸಾವಿರ ಮುಖ ಬೆಲೆಯ 90 ಖೋಟಾ ನೋಟುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು. ಅದರ ಮೌಲ್ಯ ಸುಮಾರು ಎಂಟುವರೆ ಲಕ್ಷ ರೂಪಾಯಿ ಆಗಿತ್ತು.ಆದರೆ ಪೊಲೀಸರಿಗೆ ಶಾಕ್ ಆಗಿದ್ದು ಈ ನೋಟುಗಳು ಪ್ರಿಂಟ್ ಆಗ್ತಿದ್ದಿದ್ದು ಶಿವಮೊಗ್ಗದಲ್ಲಿ ಎಂಬ ವಿಚಾರ..
ಬಂಧಿತರು ಬಾಯ್ಬಿಟ್ಟಿದ್ದರು ಸತ್ಯ
ಬಂಧಿತ ಮೂವರು ಆರೋಪಿಗಳು ಪೊಲಿಸರ ಟ್ರೀಟ್ಮೆಂಟ್ನಲ್ಲಿ ಸತ್ಯವನ್ನೆ ಬಾಯಿಬಿಟ್ಟಿದ್ದರು. ಆಗ ಅಲರ್ಟ್ ಆದ ಪೊಲೀಸರು ಶಿವಮೊಗ್ಗದ ಪ್ರತಿಷ್ಟಿತ ಏರಿಯಾಯೊಂದರಲ್ಲಿದ್ದ ಆ್ಯಡ್ಸ್ ಮೇಲೆ ದಾಳಿ ಮಾಡಿದ್ದರು, ಅದರ ಮಾಲೀಕನೇ ಅವತ್ತಿಗೆ ಖೋಟಾ ನೋಟಿನ ಜಾಲ ಕಿಂಗ್ ಪಿನ್ ಆಗಿದ್ದ. ಆತನನ್ನ ಬಂಧಿಸಿದ ಪೊಲೀಸರು ಮತ್ತಷ್ಟು ವಿಚಾರಗಳನ್ನು ಬಯಲಿಗೆ ತಂದಿದ್ದರು. ಕಿಂಗ್ ಪಿನ್ ಅನೀಶ (ಹೆಸರು ಬದಲಾಯಿಸಲಾಗಿದೆ) ಈ ದಂಧೆಗೆ ಬಂದಿದ್ದೆ ಒಂದು ವಿಶೇಷ..ಆತ ಮತ್ತು ಆತನ ಸ್ನೇಹಿತ, ದೀಪು(ಹೆಸರು ಬದಲಾಯಿಸಲಾಗಿದೆ) ಇಬ್ಬರು ಸ್ನೇಹಿತರಾಗಿದ್ದರು. ಭದ್ರಾವತಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಸಂಬಳ ಜೀವನಕ್ಕೆ ಸಾಕಾಗುತ್ತಿರಲಿಲ್ಲ. ಹಾಗಾಗಿ ಅಲ್ಲಿಯ ಕೆಲಸ ಬಿಟ್ಟು ಬೇರೆ ಬೇರೆ ಕೆಲಸಗಳಿಗೆ ಸೇರುತ್ತಾರೆ. ಇದೇ ವೇಳೆ ದೀಪುಗೆ ಕಡೂರಿನ ನಯೀಮ್( ಹೆಸರು ಬದಲಾಯಿಸಲಾಗಿದೆ) ಪರಿಚಯವಾಗಿದ್ದ. ಆತನ ಖೋಟಾ ನೋಟು ಪ್ರಿಂಟ್ ಮಾಡಿಕೊಡಿ , ನಾನು ಮಾರ್ಕೆಟ್ ಮಾಡಿ ಮಾರುತ್ತೇನೆ ಎಂದಿದ್ದ. ಇದೇ ವಿಚಾರವನ್ನು ದೀಪು ಅನೀಶನ ಮುಂದಿಟ್ಟದ್ದ. ಮೂವರ ನಡುವೆ ಒಪ್ಪಂದವಾಯ್ತು, ಪ್ಲಾನ್ ಎಕ್ಸಿಕ್ಯೂಟ್ ಆಯ್ತು.
ಹರಿದಾಡುತ್ತಿತ್ತು ಪಾಕಿಸ್ತಾನದ ನೋಟುಗಳು
ಗ್ರಾಫಿಕ್ಸ್ ಡಿಸೈನ್ ಬಗ್ಗೆ ತಿಳಿದಿದ್ದ ಅನೀಶ್ ತನ್ನದೇ ಕಂಪ್ಯೂಟರ್ನಲ್ಲಿ ಅಸಲಿ ನೋಟನ್ನು ಸ್ಕ್ಯಾನ್ ಮಾಡಿ, ಅದರಲ್ಲಿನ ಸೀರಿಯಲ್ ನಂಬರ್ಗಳನ್ನ ಚೆಂಜ್ ಮಾಡುತ್ತಿದ್ದ, ಆನಂತರ ವ್ಯಾಲಿಡ್ ಪೇಪರ್ ನಲ್ಲಿ ಪ್ರಿಂಟ್ ತೆಗೆದುಕೊಳ್ಳುತ್ತಿದ್ದ. ಹೀಗೆ ಸುಮಾರು 8 ಲಕ್ಷಕ್ಕೂ ಅಧಿಕ ಮೌಲ್ಯವಾಗುವಷ್ಟು ಖೋಟಾ ನೋಟಿನ ಪ್ರಿಂಟ್ ತೆಗೆದಿದ್ದ. ಇದನ್ನೆ ನಯೀಮ್ ಚಲಾವಣೆಗೆ ಅಂತಾ ಬಾರಂದೂರಿಗೆ ತೆಗೆದುಕೊಂಡು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು. ಏನೋ ಮಾಡಲು ಹೋಗಿ ಎಂಬಂತೆ, ದುಡ್ಡು ಸಂಪಾದನೆ ಮಾಡಲು ಹೋಗಿ ಆರೋಪಿಗಳು ಸಿಕ್ಕಿಬಿದ್ದಿದ್ದರು. ಇದು ಅವತ್ತಿನ ಕ್ರೈಂ ಕಥೆಯಾದರೆ, ಆ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಹೊರದೇಶಗಳ ಖೋಟೋನೋಟುಗಳು ಅವ್ಯಾಹತವಾಗಿ ಹರಿದುಬರುತ್ತಿತ್ತು, ಶಿವಮೊಗ್ಗ ಜಿಲ್ಲೆಯ ಮುಖ್ಯ ಪ್ರದೇಶಗಳಲ್ಲಿ ಖೋಟಾ ನೋಟು ಚಲಾವಣೆಯಾಗುತ್ತಿತ್ತು ಎಂಬ ಸುದ್ದಿ ಗಟ್ಟಿಯಾಗಿಯೇ ಕೇಳಿಬರುತ್ತಿತ್ತು.
Read / ಬರ್ತಿದೆ ಮುಚ್ಚಿಟ್ಟಿದ್ದೆಲ್ಲಾ ಹೊರಗೆ!? ದೊಡ್ಡಪೇಟೆಯಲ್ಲಿ ದೊಡ್ಡಬೇಟೆ, ಆಗುಂಬೆಯಲ್ಲಿ ಲಾರಿಗಟ್ಲೇ ಅಕ್ಕಿ, ರಗ್ಗು, ಜಮಖಾನ ಜಪ್ತಿ! ಕುಂಸಿಯಲ್ಲಿ ಸಿಕ್ತು ಕ್ಯಾಶು
Read / ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!
Read / ಪೆಟ್ರೋಲಿಂಗ್ ವೇಳೆ ಸಿಕ್ತು ಅರ್ಧ ಕೆ.ಜಿ ಒಣ ಗಾಂಜಾ
Read / ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್ ಸಹ ಸೇಫ್
Read / ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
MALENADUTODAY.COM/ SHIVAMOGGA / KARNATAKA WEB NEWS
HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga