ಹಿಂದೂ ಮಹಾಸಭಾ ಗಣಪತಿ! ಶಾಸಕರು ಹೇಳಿದ್ದೇನು? ಸಚಿವರ ಪ್ರಕಟಣೆಯಲ್ಲಿ ಏನಿತ್ತು? ಇಲ್ಲಿದೆ ಡಿಟೇಲ್ಸ್​

Minister Madhu Bangarappa, MLA Channabasappa thanked those who made the Hindu Mahasabha Ganapati procession a success.ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಯಶಸ್ಸಿಗೆ ಕಾರಣವಾದವರಿಗೆ ಸಚಿವ ಮಧು ಬಂಗಾರಪ್ಪ, ಶಾಸಕ ಚನ್ನಬಸಪ್ಪ ಕೃತಜ್ಞತೆ ತಿಳಿಸಿದ್ದಾರೆ

ಹಿಂದೂ ಮಹಾಸಭಾ ಗಣಪತಿ! ಶಾಸಕರು ಹೇಳಿದ್ದೇನು? ಸಚಿವರ ಪ್ರಕಟಣೆಯಲ್ಲಿ ಏನಿತ್ತು? ಇಲ್ಲಿದೆ ಡಿಟೇಲ್ಸ್​

KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’ 

ಶಿವಮೊಗ್ಗದಲ್ಲಿ ವಿಜ್ರಂಭಣೆಯಿಂದ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ನಡೆದಿದೆ. ಆತಂಕದ ಗಣಪ ಎನ್ನುವ ಹಿಂದೂ ಮಹಾಸಭಾ ಗಣಪ ಈ ವರ್ಷ ಇಡೀ ಶಿವಮೊಗ್ಗ ಸಂಭ್ರಮಿಸುವ ಗಣಪನಾಗಿ ಮಾರ್ಪಟ್ಟಿದ್ದಾನೆ. ಗಣಪತಿ ಹಬ್ಬದಂದು ಜನರು ಮನೆಗಳಲ್ಲಿ ಹಬ್ಬ ಆಚರಿಸಿದರೇ, ಅದೇ ಗಣಪನ ಆರಾಧನೆಗೆ ಇಡೀ ಶಿವಮೊಗ್ಗ ರಸ್ತೆಗಿಳಿದು ಕುಣಿದು ಕುಪ್ಪಳಸಿತ್ತು. 

ಬಂದೋಬಸ್ತ್​ನ ನಡುವೆ ಪೊಲೀಸ್ ಇಲಾಖೆಯು ಜನರ ಸಂಭ್ರಮಕ್ಕೆ ಯಾವುದೇ ಅಡೆತಡೆ ಮಾಡಲಿಲ್ಲ. ಮೇಲಾಗಿ ರಾಜಕಾರಣಿಗಳು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡು ಜನರ ಸಂಭ್ರಮದ ಜೊತೆಗೆ ಹೆಜ್ಜೆಹಾಕಿದರು. ಹುಡುಗರ ಸಂಭ್ರಮಕ್ಕಿಂತಲೂ ಈ ಸಲ ಮಹಿಳೆಯರ ಸಡಗರ ಗಣೇಶನ ರಾಜಬೀದಿ ಉತ್ಸವದಲ್ಲಿ ಜೋರಾಗಿತ್ತು.  

ಇನ್ನೂ  ಹಿಂದೂ ಮಹಾ ಮಂಡಳಿ ವತಿಯಿಂದ ನಡೆದ 79ನೇ ವರ್ಷದ ಗಣೇಶೋತ್ಸವದ ಯಶಸ್ಸಿಗೆ ಕಾರಣಕರ್ತರಾದ ಶಾಸಕ ಎಸ್. ಎನ್. ಚನ್ನಬಸಪ್ಪ ಅಭಿನಂದನೆ ತಿಳಿಸಿದ್ದಾರೆ. ಈ ಸಂಬಂಧ ಇವತ್ತು ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಗಣಪತಿಯ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಿದ್ದಾರೆ. ನಗರದ ಎಲ್ಲಾ ಜನರು ಒಗ್ಗಟ್ಟಿನಿಂದ ಮೆರವಣಿಗೆಗೆ ಶಕ್ತಿ ತುಂಬಿದ್ದಾರೆ.

ವಿವಿಧ ಸಂಘಟನೆಗಳು ಗಣಪತಿ ಅಲಂಕಾರಕ್ಕೆ ನೆರವು ನೀಡಿದ್ದವು. ಅಲ್ಲದೆ ವ್ಯಾಪಾರಸ್ಥರು , ಉದ್ಯಮಿಗಳು ಸಹ ಗಣೇಶನ ಮೆರವಣಿಗೆಗೆ ನೆರವು ನೀಡಿದ್ದಾರೆ. ಊಟೋಪಚಾರ ವ್ಯವಸ್ಥೆಗಳು ಶಿವಮೊಗ್ಗದ ಗುಣವನ್ನು ಸಾರುತ್ತಿತ್ತು. ಕುಟುಂಬ ಸಮೇತರಾಗಿ ಬರುತ್ತಿದ್ದ ಜನರು ವಿನಾಯಕನ ವಿಸರ್ಜನಾ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಿಕೊಟ್ಟಿದ್ದಾರೆಂದು ಶಾಸಕರು ಸಂತಸ ಹಂಚಿಕೊಂಡಿದ್ದಾರೆ. 

ಇದೇ ವೇಳೆ  ಅ.1ರಂದು ನಡೆಯುವ ಈದ್ ಮಿಲಾದ್ ಮೆರವಣಿಗೆ ಕೂಡ ಯಶಸ್ವಿಯಾಗಲಿ ಎಂದ ಶಾಸಕರು,  ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ಯಶಸ್ಸಿಗೆ ಕಾರಣರಾದರವರಿಗೆ ಕೃತಜ್ಞತೆ ಸಲ್ಲಿಸಿದರು.

ಇನ್ನೊಂದಡೆ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ ಮಧು ಬಂಗಾರಪ್ಪರವರು ಶಿವಮೊಗ್ಗದ ಪ್ರತಿಷ್ಠಿತ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಮಹಾಗಣಪ ವಿಸರ್ಜನಾ ಕಾರ್ಯಕ್ರಮ ಗುರುವಾರ ಶಾಂತಿ ಮತ್ತು ಸುವ್ಯವಸ್ಥೆ ಹಾಗೂ ಸೌಹಾರ್ದಯುತವಾಗಿ ಮುಕ್ತಾಯಗೊಂಡಿರುವುದು ಶ್ಲಾಘನೀಯ ಎಂದಿದ್ಧಾರೆ. 

ಸೆ.18ರಿಂದ ಪ್ರಾರಂಭಗೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣಪತಿಯ ಪೂಜಾನುಷ್ಠಾನ ನಡೆದಿದ್ದು, ನಿನ್ನೆ ಗಣಪತಿಯ ವಿಸರ್ಜನಾ ಕಾರ್ಯ ಸೌಹಾರ್ದಯುತವಾಗಿ ನಡೆದಿದ್ದು, ಅದಕ್ಕೆ ಕಾರಣರಾದ ಕಾರ್ಯಕ್ರಮದ ಆಯೋಜಕರು, ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಭಕ್ತವೃಂದ ಹಾಗೂ ಜಿಲ್ಲಾಡಳಿತವನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ. 

ಜಿಲ್ಲೆಯ ಎಲ್ಲಾ ಕಾರ್ಯಕ್ರಮಗಳು ಹೀಗೆಯೇ ಶಾಂತಿಯುತವಾಗಿ ನಡೆದು ಎಲ್ಲಾ ವರ್ಗದ ಜನರಲ್ಲಿ ಸೌಹಾರ್ದತೆ ನೆಲೆಸಲಿ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ದಾರಿದೀಪವಾಗಲಿ ಎಂದು ಅವರು ಆಶಿಸಿದ್ದಾರೆ.


ಇನ್ನಷ್ಟು ಸುದ್ದಿಗಳು 

  1. ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ

  2. 2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

  3. ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

  4. ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!