#RamMandirPranPrathistha | ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಚಿನ್ನ, ಬೆಳ್ಳಿಯ ರಾಮಮಂದಿರ ನಿರ್ಮಾಣ
#RamMandirPranPrathistha | Gold and silver ram temple artworks to be constructed at Bhadravathi in Shivamogga district

SHIVAMOGGA | Jan 21, 2024 | #RamMandirPranPrathistha ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟಾಪನೆಯ ಸಂಭ್ರಮದ ಸಡಗರದ ನಡುವೆ ಶ್ರೀರಾಮನ ಹಲವು ವಿಶೇಷತೆಗಳು ಭಕ್ತರ ಬಳಿ ಸೃಷ್ಟಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಕಲಾವಿರೊಬ್ಬರು ಚಿನ್ನ ಹಾಗೂ ಬೆಳ್ಳಿ ಬಳಸಿ ಶ್ರೀರಾಮ ಮಂದಿರ ನಿರ್ಮಿಸಿದ್ದಾರೆ.
#RamMandirPranPrathistha
ಹೌದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ನಿವಾಸಿ ಸಚಿನ್ ಎಂ ವರ್ಣೆಕರ್ ರವರು ಈ ಹಿಂಧೆ ಬಂಗಾರದ ರಾಮಮಂದಿರ ನಿರ್ಮಿಸಿದ್ದರು. ಇದೀಗ ಬೆಳ್ಳಿಯನ್ನು ಬಳಸಿ ರಾಮಮಂದಿರ ನಿರ್ಮಿಸಿದ್ದಾರೆ.
ಚಿನ್ನದ ರಾಮ
ಅಯೋಧ್ಯೆಗೆ ಹೋಗಿದ್ದ ಇವರು ರಾಮಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ 18 ಗ್ರಾಂ ಬಂಗಾರದಲ್ಲಿ ವಿಶೇಷವಾಗಿ ಶ್ರೀರಾಮಮಂದಿರದ ಕಲಾಕೃತಿ ಸೃಷ್ಟಿಸಿದ್ದರು.
ಬೆಳ್ಳಿಯ ರಾಮ
ಇದೀಗ ಸಂಕಲ್ಪದಂತೆ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ. ಇದರ ನೆನಪಿಗಾಗಿ ಸಚಿನ್ 2 ತಿಂಗಳ ಕಾಲ ಬಿಡುವಿನ ವೇಳೆಯಲ್ಲಿ ಕುಳಿತು ಬೆಳ್ಳಿಯ ಶ್ರೀರಾಮ ಮಂದಿರವನ್ನು ನಿರ್ಮಿಸಿದ್ದಾರೆ.
ಇದಕ್ಕಾಗಿ 140 ಗ್ರಾಂ ಬೆಳ್ಳಿ ಬಳಸಿದ್ದಾರೆ. ಒಟ್ಟು ಆರು ಇಂಚು ಉದ್ದ , ನಾಲ್ಕು ಇಂಚು ಅಗಲ, 5.5 ಎತ್ತರ ದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ.
ಭಕ್ತಿಯಿಂದ ಜನರಿಗೆ ಇದನ್ನು ಪ್ರದರ್ಶಿಸುತ್ತಿರುವ ಅವರು ದೇಶದ ಅತಿದೊಡ್ಡ ಕ್ಷಣಗಳಲ್ಲಿ ಒಂದಾದ ಶ್ರೀರಾಮಮಂದಿರ ಉದ್ಘಾಟನೆಗೆ ಕಾಯುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ತಮ್ಮ ರಾಮಮಂದಿರವನ್ನು ಅಯೋಧ್ಯೆಯಲ್ಲಿ ಶ್ರಮವಹಿಸಿದ ಕರಸೇವಕರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.