20 ವರ್ಷದ ಹಿಂದೆಯೇ ಮನೆ ಬಾಗಿಲಿಗೆ ಬಂದ ಶ್ರೀರಾಮಚಂದ್ರ! ಈಸೂರಲ್ಲೊಂದು ಅಯೋಧ್ಯೆ ಅಧಿಪತಿಯ ವಿಶೇಷತೆ!

Sri Ramachandra came to his door 20 years ago. Ayodhya ruler's speciality in Isur village!

20 ವರ್ಷದ ಹಿಂದೆಯೇ ಮನೆ ಬಾಗಿಲಿಗೆ ಬಂದ ಶ್ರೀರಾಮಚಂದ್ರ! ಈಸೂರಲ್ಲೊಂದು ಅಯೋಧ್ಯೆ ಅಧಿಪತಿಯ ವಿಶೇಷತೆ!
Sri Ramachandra came to his door 20 years ago. Ayodhya ruler's speciality in Isur village!

SHIVAMOGGA  |  Jan 20, 2024  | ಆ ಮನೆಯ ಬಾಗಿಲಲ್ಲಿ 20 ವರ್ಷದ ಹಿಂದೆಯೇ ಕೆತ್ತನೆ ಆಗಿದೆ ಶ್ರೀರಾಮ ಮಂದಿರ  ಕುಟುಂಬದ ಸಂಕಲ್ಪ ಈಗ ನೆರವೇರಿರುವುದಕ್ಕೆ ಇಡೀ ಗ್ರಾಮವೇ ಖುಷಿ ಪಟ್ಟಿದ್ದು ಹೇಗೆ ಗೊತ್ತಾ? 

Sri Ramachandra came to his door 20 years ago. Ayodhya ruler's speciality in Isur village!

ಇಡೀ ದೇಶವೇ ಶ್ರೀರಾಮನ ಮಂದಿರ ಉದ್ಘಾಟನೆಯ ಕ್ಷಣಕ್ಕಾಗಿ ಕಾತುರದಿಂದ ಕಾಯ್ತಾ ಇದೆ.ಆದರೆ ಇಪ್ಪತ್ತು ವರ್ಷಗಳ ಹಿಂದೆಯೇ ಕುಟುಂಬಸ್ಥರೆಲ್ಲಾ ಸೇರಿ ತಮ್ಮ  ಮನೆಯ ಹೆಬ್ಬಾಗಿಲ ಮೇಲೆಯೇ ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವ ಶ್ರೀರಾಮ ಮಂದಿರವನ್ನು ಕೆತ್ತಿಸಿ, ಈಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. 

Sri Ramachandra came to his door 20 years ago. Ayodhya ruler's speciality in Isur village!

ಹೌದು ಇಡೀ ದೇಶವೇ ರಾಮನ ಜಪದಲ್ಲಿ ಜ.22 ದಿನಕ್ಕಾಗಿ ಕಾಯ್ತಾ ಇದೆ ಆದ್ರೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ದೇಶದಲ್ಲೇ ಮೊದಲು ಸ್ವತಂತ್ರ ಘೋಷಿಸಿಕೊಂಡ ಈಸೂರು ಗ್ರಾಮದ ಮಹಾದೇವಪ್ಪ ಸಾವಿತ್ರಮ್ಮ ದಂಪತಿ ಎಂಬುವರು  20

Sri Ramachandra came to his door 20 years ago. Ayodhya ruler's speciality in Isur village!

ವರ್ಷಗಳ ಹಿಂದೆಯೇ ರಾಮನ ಮಂದಿರವನ್ನು ತಮ್ಮ ಮನೆಯ ಬಾಗಿಲ ಮೇಲೆ ಕೆತ್ತನೆ ಮಾಡಿಸಿದ್ದಾರೆ

ರಾಮನ ಭಕ್ತರಾಗಿದ್ದ ಮಹಾದೇವಪ್ಪನವರು ತಮ್ಮ ಕಲ್ಪನೆಯಂತೆ ತಮ್ಮ ಹಳೆ ಮನೆಯ ಬಾಗಿಲ ಮೇಲೆ ಶ್ರೀರಾಮ ಹಾಗೂ ಅಯೋಧ್ಯೆಯಲ್ಲಿ ನಿರ್ಮಾಣ ಆಗಿರುವ ರಾಮ ಮಂದಿರದ ಕೆತ್ತನೆಯನ್ನು ಮಾಡಿಸುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಹಾಗಾಗಿ ಕುಟುಂಬಸ್ಥರು ಶ್ರೀರಾಮ ಹಾಗೂ ಶ್ರೀರಾಮ ಮಂದಿರ ಕೆತ್ತನೆ ಮಾಡಿರುವ ಬಾಗಿಲಿಗೆ ನಿತ್ಯ ಪೂಜೆ ಮಾಡಿ ಭಕ್ತಿ ಸಮರ್ಪಿಸುತ್ತಿದ್ದಾರೆ.

Sri Ramachandra came to his door 20 years ago. Ayodhya ruler's speciality in Isur village!

ಇನ್ನೂ ಅಯೋಧ್ಯೆಯಲ್ಲಿ ರಾಮ‌ ಮಂದಿರ ನಿರ್ಮಾಣ ಆಗಿರುವ ರೀತಿಯಲ್ಲಿಯೇ ಮನೆಯ ಬಾಗಿಲು 20 ವರ್ಷದ ಹಿಂದೇಯೆ ಕೆತ್ತಿಸಲಾಗಿದೆ ಎಂಬ ವಿಷಯ ತಿಳಿದು ಸ್ಥಳೀಯರು ಮನೆಗೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ.ಜೊತೆಗೆ ಮನೆ ಬಾಗಿಲಿಗೆ ಪೂಜೆ ಸಲ್ಲಿಸಿ ಗೌರವ ಸರ್ಮಪಿಸುತ್ತಿದ್ದಾರೆ.ನಮ್ಮ ಕನಸು ಕನಸಾಗಿದೆ ಹಾಗಾಗಿ ನಮಗೆ ತುಂಬಾ ಸಂತಸ ಆಗುತ್ತಿದೆ ಎನ್ನುತ್ತಾರೆ ಮಹಾದೇವಪ್ಪ ಕುಟುಂಬಸ್ಥರು

Sri Ramachandra came to his door 20 years ago. Ayodhya ruler's speciality in Isur village!

ಮಹದೇವಪ್ಪರು ಬದುಕ್ಕಿದ್ದ ಸಂದರ್ಭದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಗ್ರಾಮಸ್ಥರಿಗೆ ಮನಮುಟ್ಟುವಂತೆ ಸರಳವಾಗಿ ವಿವರಿಸುತ್ತಿದ್ದರಂತೆ ಅವರು ಕಥೆ ಹೇಳುವಾಗ ನಾವು ಕಳೆದು ಹೋಗಿರ್ತಿದ್ವಿವಿ ಅನ್ನುತ್ತಾರೆ ಗ್ರಾಮಸ್ಥರು. ಅವರು ಹೇಳಿದ ಕಥೆಗಳು ಈಗಲೂ ನಮ್ಮಲ್ಲಿ ಹಸಿರಾಗಿದೆ ಎಂದು ಗ್ರಾಮದ ಹಿರಿಯರು ಮಹದೇವಪ್ಪರ ನೆನಪುಗಳನ್ನು ಮೆಲಕು ಹಾಕಿದ್ರು,

Sri Ramachandra came to his door 20 years ago. Ayodhya ruler's speciality in Isur village!

ಅಯೋಧ್ಯೆಯ ರಾಮ‌ಮಂದಿರದ ರೀತಿಯಲ್ಲಿಯೇ ತಮ್ಮ ಕಲ್ಪನೆಯಂತೆ 20 ವರ್ಷಗಳ ಹಿಂದೆಯೇ ಮನೆ ಬಾಗಿಲ ಮೇಲೆ ಶ್ರೀರಾಮ ಮಂದಿರ ಕೆತ್ತನೆ ಮಾಡಿಸಿರುವ ಮಹಾದೇವಪ್ಪ ನವರ ರಾಮನ ಭಕ್ತಿಗೆ ಮೆಚ್ಚಲೆ ಬೇಕು.