shri ram mandir ayodhya / ಶ್ರೀರಾಮಮಂದಿರದ ಹೆಸರಲ್ಲಿ ಅಕೌಂಟ್ ಖಾಲಿ ಮಾಡುತ್ತಾರೆ! ವಿಶ್ವ ಹಿಂದೂ ಪರಿಷತ್​ನಿಂದ ಎಚ್ಚರಿಕೆ ಸಂದೇಶ

shri ram mandir ayodhya /The Vishwa Hindu Parishad (VHP) has warned people that fraudsters are collecting money in the name of Ram Temple ವಿಶ್ವ ಹಿಂದೂ ಪರಿಷತ್​ನಿಂದ ಎಚ್ಚರಿಕೆ ಸಂದೇಶ

shri ram mandir ayodhya / ಶ್ರೀರಾಮಮಂದಿರದ ಹೆಸರಲ್ಲಿ ಅಕೌಂಟ್ ಖಾಲಿ ಮಾಡುತ್ತಾರೆ! ವಿಶ್ವ ಹಿಂದೂ ಪರಿಷತ್​ನಿಂದ ಎಚ್ಚರಿಕೆ ಸಂದೇಶ
shri ram mandir ayodhya

SHIVAMOGGA  |  Jan 1, 2024  |  shri ram mandir ayodhya | ಶ್ರೀರಾಮ ಮಂದಿರದ ಹೆಸರಿನಲ್ಲಿ 'ದೇವಸ್ಥಾನಕ್ಕೆ ದೇಣಿಗೆ ನೀಡಿ' ಎಂಬ ಸಂದೇಶ ದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ನಕಲಿ ಕ್ಯುಆರ್ ಕೋಡ್ ಹಂಚಿಕೊಳ್ಳಲಾಗ್ತಿದೆ. ಅವುಗಳನ್ನ ನಂಬದಿರಿ ಎಚ್ಚರದಿಂದ ಇರಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ ಪಿ)   ಮನವಿ ಮಾಡಿದೆ.

ಶ್ರೀರಾಮಮಂದಿರ / shri ram mandir ayodhya

'ದೇವಸ್ಥಾನದ ವತಿಯಿಂದ ಯಾವುದೇ ದೇಣಿಗೆ ಸಂಗ್ರಹಿಸಲಾಗುತ್ತಿಲ್ಲ. ಹಣಕ್ಕಾಗಿ ದೇವಸ್ಥಾನದ ದೇಣಿಗೆ ಹೆಸರಲ್ಲಿ ಸೈಬರ್ ಕ್ರಿಮಿನಲ್‌ಗಳು ಭಕ್ತರನ್ನು ವಂಚಿಸಲು ನಕಲಿ ಕ್ಯುಆ‌ರ್ ಕೋಡ್‌ಗಳನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳುವ, ಕರೆ ಮಾಡಿ ದೇಣಿಗೆ ಕೇಳು ತ್ತಿರುವ ಸಂಗತಿ ಬೆಳಕಿಗೆ ಬಂದಿದೆ. 

READ : bhadravati rural police station / ಹೊಸವರುಷದ ಸಡಗರದ ನಡುವೆ ಭದ್ರಾವತಿಯಲ್ಲಿ ಇಬ್ಬರು ಯುವಕರ ಸಾವು! ಸಾವು ತಂದ ಹುಟ್ಟುಹಬ್ಬ!

ಒಂದು ವೇಳೆ ಇದನ್ನು ನಂಬಿ ಸ್ಕ್ಯಾನ್ ಮಾಡಿ ಯುಪಿಐ ಮೂಲಕ ದೇವಸ್ಥಾನಕ್ಕೆಂದು ಹಣ ಪಾವತಿಸಿದರೆ ಅದು ವಂಚಕರ ಪಾಲಾಗುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಸಚಿವ ಅಮಿತ್ ಶಾ ಹಾಗೂ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ ಎಂದು ಎಚ್ಚರಿಸಿದೆ. 

ಇದೇ ವೇಳೆ, ವಂಚಕನೊಬ್ಬ ವ್ಯಕ್ತಿಯೊಬ್ಬರಿಗೆಕರೆಮಾಡಿದೇಣಿಗೆಕೇಳಿದ ಆಡಿಯೊಂದನ್ನ ಸಹ  ವಿಎಚ್‌ಪಿ ಬಿಡುಗಡೆ ಮಾಡಿದೆ.  

ಈ ಸಂಬಂಧ ಮಾತನಾಡಿರುವ  ವಿಎಚ್‌ಪಿ ವಕ್ತಾರ ವಿನೋದ್ ಬನ್ಸಲ್ 'ದೇವಾಲಯದ ಹೆಸರಿನಲ್ಲಿ ಹಣವನ್ನು ಸಂಗ್ರಹಿಸುವ ಕೊಳಕು ಪ್ರಯತ್ನಗಳ ಬಗ್ಗೆ ಇತ್ತೀಚೆ ಗೆತಿಳಿಸಲಾಗಿದೆ. 'ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ನಿಧಿ ಸಂಗ್ರಹಿಸಲು ಯಾರಿಗೂ ಅಧಿಕಾರ ನೀಡಿಲ್ಲ ಎಂದು ತಿಳಿಸಿದ್ದಾರೆ. 

ram mandir ayodhya opening date

 ಇದೇ ವರ್ಷದ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಗಲಿದೆ. ಈಗಾಗಲೇ ಶ್ರೀರಾಮ ಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.