ಆಗುಂಬೆ | ಘಾಟಿಯಲ್ಲಿ ತಡೆಗೋಡೆಗಳಲ್ಲಿ ಬಿರುಕು | ಆತಂಕ
agumbe ghat road condition today

SHIVAMOGGA | MALENADUTODAY NEWS | May 5, 2024
ಶಿವಮೊಗ್ಗ-ಉಡುಪಿ ಜಿಲ್ಲೆಗಳ ಪ್ರಮುಖ ಘಟ್ಟ ಪ್ರದೇಶ ಆಗುಂಭೆ ಘಾಟಿಯಲ್ಲಿ ಈ ಸಲ ಮತ್ತೆ ರಸ್ತೆ ತಡೆಗೋಡೆ ಕುಸಿತದ ಆತಂಕ ಎದುರಾಗಿದೆ. ಆಗುಂಬೆ ಘಾಟಿಯ ಸೂರ್ಯಾಸ್ತ ಸ್ಥಳದ ಬಳಿಯ ರಸ್ತೆಯ ತಡೆಗೋಡೆ ಬಳಿ ಬಿರುಕು. ಬಿಟ್ಟಿದ್ದು ಘನವಾಹನಗಳ ಸಂಚಾರದಿಂದ ತಡೆಗೋಡೆ ಕುಸಿದು ಘಾಟಿ ಬಂದ್ ಆಗುವ ಭೀತಿ ಎದುರಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 14ನೇ ತಿರುವು ಸೂರ್ಯಾಸ್ತ ಸ್ಥಳದ ಬಳಿ ತಡೆಗೋಡೆ ಬಿರುಕು ಬಿಟ್ಟಿದ್ದು ಅದು ಕುಸಿದು ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಘನ ವಾಹನಗಳ ಓಡಾಟದಿಂದ ತಡೆಗೋಡೆಗಳಿಗೆ ಹಾನಿಯಾಗುತ್ತಿದ್ದು, ವಾಹನಗಳು ತಡೆಗೋಡೆಗೆ ಡಿಕ್ಕಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ವರದಿಯಲ್ಲಿ ಹೇಳಲಾಗಿದೆ.