ಶಿವಮೊಗ್ಗ ಗ್ಯಾಂಗ್‌ ವಾರ್‌ | ಉಡುಪಿ ಜಿಲ್ಲಾ ಕಾರಾಗೃಹಕ್ಕೆ ಎಂಟು ಮಂದಿ ಆರೋಪಿಗಳು ಶಿಫ್ಟ್‌ |

Shimoga Gang War | Eight people shifted to Udupi District Jail

ಶಿವಮೊಗ್ಗ ಗ್ಯಾಂಗ್‌ ವಾರ್‌ | ಉಡುಪಿ ಜಿಲ್ಲಾ ಕಾರಾಗೃಹಕ್ಕೆ ಎಂಟು ಮಂದಿ ಆರೋಪಿಗಳು ಶಿಫ್ಟ್‌ |
Shimoga Gang War

SHIVAMOGGA | MALENADUTODAY NEWS | May 15, 2024  ಮಲೆನಾಡು ಟುಡೆ

ಶಿವಮೊಗ್ಗ ಗ್ಯಾಂಗ್‌ ವಾರ್‌ ಪ್ರಕರಣ ಸಂಬಂಧ ಮತ್ತೊಂದು ಅಪ್‌ಡೇಟ್‌ ಸಿಕ್ಕಿದೆ, ಪ್ರಕರಣದಲ್ಲಿ ಸುಮಾರು 21 ಮಂದಿ ಅರೆಸ್ಟ್‌ ಆಗಿದ್ದು, ಈ ಪೈಕಿ 8 ಮಂದಿಯನ್ನ ಬೇರೆ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. 

ಮಲೆನಾಡು ಟುಡೆಗೆ ಸಿಕ್ಕ ಪೊಲೀಸ್‌ ಮೂಲಗಳ ಮಾಹಿತಿ ಪ್ರಕಾರ, ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಆದಿಲ್‌ ಹಾಗೂ ಯಾಸಿನ್‌ ಖುರೇಶಿ ಕಡೆಯವರನ್ನ ಒಟ್ಟಿಗೆ ಇಡುವುದು ಭದ್ರತಾ ದೃಷ್ಟಿಯಿಂದ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ಕಾರಣಕ್ಕಾಗಿ ಯಾಸಿನ್‌ ಖುರೇಶಿ ಕಡೆಯ 8 ಮಂದಿ ಆರೋಪಿಗಳನ್ನು ಉಡುಪಿ ಕಾರಾಗೃಹಕ್ಕೆ ಶಿಫ್ಟ್‌ ಮಾಡಲಾಗಿದೆ ಎಂದು ಗೊತ್ತಾಗಿದೆ. 

ಪ್ರಕರಣ ಸೂಕ್ಷ್ಮ ಮಟ್ಟದಲ್ಲಿದ್ದು, ಆರೋಪಿಗಳ ನಡುವಿನ ಪ್ರತೀಕಾರದ ನಡೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸದ್ಯ ಮೃತ ಯಾಸೀನ್‌ ಖುರೇಶಿ ಕಡೆಯವರನ್ನು ಶಿಫ್ಟ್‌ ಮಾಡಲಾಗಿದ್ದು, ಆದಿಲ್‌ & ಟೀಂನ್ನ ಸಹ ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಪೊಲೀಸ್‌ ಇಲಾಖೆ ಗಮನ ಹರಿಸುತ್ತಿದೆ ಎನ್ನಲಾಗಿದೆ.

ರೌಡಿಶೀಟರ್ಸ್‌ ನಡುವಿನ ಒಳಜಗಳಗಳು ಯಾವುದೇ ಅಪಾಯವನ್ನು ತಂದಿಡುವ ಸಾಧ್ಯತೆಯನ್ನು ಅಲ್ಲೆಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಯಾಸಿನ್‌ ಕಡೆಯವರಿಗೂ, ಆದಿಲ್‌ ಕಡೆಯವರಿಗೂ ಥ್ರಟ್‌ ಇರುವ ವಿಚಾರ ಗುಪ್ತಚರ ಇಲಾಖೆಗೂ ತಿಳಿದಿದೆ. ಇದೇ ಕಾರಣಕ್ಕೆ  ಯಾಸಿನ್‌ ಕಡೆಯ ಆರೋಪಿಗಳನ್ನ ಉಡುಪಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇನ್ನೊಂದಿಷ್ಟು ಕ್ರಮಗಳು ಜರುಗುವ ಸಾಧ್ಯತೆ ಇದೆ.