ಹೆಬ್ಬೆ ಫಾಲ್ಸ್‌ | ಸೆಲ್ಫಿ ಕ್ಲಿಕ್‌ ಮಾಡುವ ಸಮಯದಲ್ಲಿ ಕಾಲು ಜಾರಿ ಜಲಪಾತಕ್ಕೆ ಬಿದ್ದು ಹೈದರಾಬಾದ್‌ ಯುವಕನ ಸಾವು

25-year-old man named Shravan from Hyderabad died after slipping and falling into the Hebbe Falls in Chikkamagaluru district. Shravan  Mallandur police station.

SHIVAMOGGA | MALENADUTODAY NEWS | Jun 11, 2024  ಮಲೆನಾಡು ಟುಡೆʼ

ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ ಬಳಿ ಇರುವ ಹೆಬ್ಬೆ ಜಲಪಾತ ವೀಕ್ಷಣೆಗೆ ತೆರಳಿದ್ದ ವ್ಯಕ್ತಿಯೊಬ್ಬ ಕಾಲುಜಾರಿ ಫಾಲ್ಸ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮೃತನನ್ನು ಹೈದರಾಬಾದ್‌ನ ಶ್ರವಣ್ (25) ಎಂದು ಗುರುತಿಸಲಾಗಿದೆ. 

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರವಣ್ ಮತ್ತು ಶ್ರೀಕಾಂತ್ ಎಂಬವರು ಚಿಕ್ಕಮಗಳೂರಿಗೆ ಭಾನುವಾರ ಪ್ರವಾಸಕ್ಕೆ ಎಂದು ಬಂದಿದ್ದರು. ಬಾಡಿಗೆ ಬೈಕ್ ಪಡೆದು ಸುತ್ತಾಡುತ್ತಿದ್ದ ಇಬ್ಬರು ನಿನ್ನೆ ಸೋಮವಾರ  ಹೆಬ್ಬೆ  ಫಾಲ್ಸ್‌ ವೀಕ್ಷಣೆಗೆ ತೆರಳಿದ್ದರು.

ಇನ್ನೂ ಇಬ್ಬರು ಜಲಪಾತ ವೀಕ್ಷಣೆ ಮಾಡುತ್ತಿದ್ದ ವೇಳೇ ಕಾಲುಜಾರಿ ನೀರಿಗೆ ಬಿದ್ದು ಶ್ರವಣ್ ಮೃತಪಟ್ಟಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಈತ ಸೆಲ್ಫಿ ತೆಗೆದುಕೊಳ್ಳುವಾಗ ಕಾಲುಜಾರಿ ಬಿದ್ದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ತರೀಕೆರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

A 25-year-old man named Shravan from Hyderabad died after slipping and falling into the Hebbe Falls in Chikkamagaluru district. Shravan  Mallandur police station.