ಸಿಐಡಿ ವಿಚಾರಣೆಗೆ ಹಾಜರಾದ ಬಿಎಸ್ ಯಡಿಯೂರಪ್ಪ | ಏನಾಯ್ತು ಎನ್‌ಕ್ವೈರಿ
Former CM BS Yeddyurappa appeared before the CID for questioning in a POCSO case following a High Court directive.
SHIVAMOGGA | MALENADUTODAY NEWS | Jun 15, 2024 ಮಲೆನಾಡು ಟುಡೆ
ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್ ಸೂಚನೆಯ ಅನ್ವಯ ನಿನ್ನೆ ಬಿಎಸ್ ಯಡಿಯೂರಪ್ಪ ಸಿಐಡಿ ವಿಚಾರಣೆಗೆ ಹಾಜರಾಗಿದ್ದಾರೆ.ಬೆಂಗಳೂರು ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ‍್ಪರವರ ವಿಚಾರಣೆ ನಡೆದಿದ್ದು ಮೂರು ಗಂಟೆಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖಾಧಿಕಾರಿ ಡಿವೈಎಸ್‌ಪಿ ಪುನೀತ್ ಮಾಜಿ ಸಿಎಂರವರ ಹೇಳಿಕೆ ಪಡೆದರು. ವಿಚಾರಣೆ ನಡೆಸಿದ ಪೊಲೀಸರು ವಿಡಿಯೋ ಹೇಳಿಕೆಯನ್ನ ಸಹ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಮಗಳ ಮೇಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಆ ಬಳಿಕ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
Former CM BS Yeddyurappa appeared before the CID for questioning in a POCSO case following a High Court directive.