ಸಿದ್ದಾಪುರ ಕೆರೆ ಕಡೆಗೆ ಹೋಗಿ ಬರುವಷ್ಟರಲ್ಲಿ ಶಾಕ್‌ | ದುಡ್ಡಿನ ಜೊತೆಗೆ ಬೈಕ್‌ ಮಾಯ

Newtown police station regarding the theft of a bike and money in Bhadravati taluk.  

ಸಿದ್ದಾಪುರ ಕೆರೆ ಕಡೆಗೆ ಹೋಗಿ ಬರುವಷ್ಟರಲ್ಲಿ ಶಾಕ್‌ | ದುಡ್ಡಿನ ಜೊತೆಗೆ ಬೈಕ್‌ ಮಾಯ
Newtown police station ,Bhadravati taluk,

SHIVAMOGGA | MALENADUTODAY NEWS | Jun 10, 2024  ಮಲೆನಾಡು ಟುಡೆʼ

ಭದ್ರಾವತಿ ತಾಲ್ಲೂಕುನಲ್ಲಿ ಬೈಕ್‌ ಜೊತೆ ಹಣವನ್ನ ಸಹ ಕಳ್ಳತನಮಾಡಿದ ಘಟನೆ ಬಗ್ಗೆ  ನ್ಯೂಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ನಿವಾಸಿಯೊಬ್ಬರು ತಮ್ಮ ಪಲ್ಸರ್‌ಬೈಕ್ ದ್ವಿಚಕ್ರ ವಾಹನದಲ್ಲಿ ಫೈನಾನ್ಸ್ ಕಲೆಕ್ಷನ್ ಮಾಡಿದ 60 ಸಾವಿರ ರು. ಹಣ ವಾಹನದ ಬ್ಯಾಗ್ ನಲ್ಲಿಟ್ಟು ನಗರದ ವೇಲೂರು ಶೆಡ್ ಸಿದ್ದಾಪುರ ಕೆರೆ ಬಳಿ ತೆರಳಿದ್ದರು. ಸಂಜೆ 6 ಸಮಯದಲ್ಲಿ ವಾಹನ ನಿಲ್ಲಿಸಿ ತೆರಳಿದ್ದ ಅವರು ಹತ್ತು ನಿಮಿಷ ಬಿಟ್ಟು  ಪುನಃ ಬಂದು ನೋಡಿದಾಗ ಸ್ಥಳದಲ್ಲಿ ಬೈಕ್‌ ಇಲ್ಲದಿರುವುದು ಕಂಡು ಬಂದಿದೆ. 

ಈ ಸಂಬಂಧ ಬೈಕ್‌ ಸವಾರನ ತಾಯಿ 60 ಸಾವಿರ ರು. ಹಣ ಹಾಗು ದ್ವಿಚಕ್ರ ವಾಹನ ಸೇರಿ ಒಟ್ಟು ಅಂದಾಜು 1.40 ಲಕ್ಷ ರು. ಮೌಲ್ಯದ ಸ್ವತ್ತು ಕಳವು ಮಾಡಲಾಗಿದೆ. ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿದ್ದಾರೆ. 

A case has been registered at the Newtown police station regarding the theft of a bike and money in Bhadravati taluk.