ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಯಣ್ಣ ಬ್ರಿಗೇಡ್‌ ಮತ್ತೆ ಆರಂಭ? ಕೆಎಸ್‌ ಈಶ್ವರಪ್ಪ ಹೇಳಿದ್ದೇನು/

KS Eshwarappa said in a press conference in Bagalkot that he will decide on restarting Rayanna Brigade after the Lok Sabha election results

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಯಣ್ಣ ಬ್ರಿಗೇಡ್‌  ಮತ್ತೆ ಆರಂಭ? ಕೆಎಸ್‌ ಈಶ್ವರಪ್ಪ ಹೇಳಿದ್ದೇನು/
Rayanna Brigade,KS Eshwarappa ,Bagalkot

SHIVAMOGGA | MALENADUTODAY NEWS | May 27, 2024  ಮಲೆನಾಡು ಟುಡೆ 

 

ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಕೆಎಸ್‌ ಈಶ್ವರಪ್ಪನವರ ಮುಂದಿನ ನಡೆ ಏನು? ಎಂಬ ಪ್ರಶ್ನೆಯೊಂದಕ್ಕೆ ಅವರೇ ಸದ್ದುಗೋಷ್ಟಿಯೊಂದರಲ್ಲಿ ಉತ್ತರ ನೀಡಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು ಲೋಕಸಭಾ ಚುನಾವಣೆ ಮುಗಿದ ಬಳಿಕ ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಕುರಿತು ತೀರ್ಮಾನಿಸುವೆ ಎಂದಿದ್ದಾರೆ.   

ಅನೇಕರು ರಾಯಣ್ಣ ಬ್ರಿಗೇಡ್ ಮಾಡೋಕು ಅಂತಿದ್ದಾರೆ. ಹಿಂದುಳಿದವರು, ದಲಿತರು ಎಲ್ಲಾ ಸಮಾಜದವರನ್ನುಸೇರಿಸಬೇಕು ಅಂತಿದ್ದಾರೆ. ರಾಜ್ಯದಲ್ಲಿ ಹಿಂದುಳಿದವರು, ಕುರುಬರಿಗೆ ಅನ್ಯಾಯ ಆಗಿದೆ ಎಂದು ಜನ ಹೇಳಿದ್ದಾರೆ. ಹೀಗಾಗಿ ಆ ಬಗ್ಗೆ ತೀರ್ಮಾನಿಸಬೇಕಿದೆ  ಎಂದಿದ್ದಾರೆ. 

ಈಗಲೇ ಏನು ಮಾಡಬೇಕು ಅಂತ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲ್ಲ. ಚುನಾವಣೆಗೆ ನಿಲ್ಲಬೇಕಾದರೂ ನಾನೊಬ್ಬನೇ ನಿರ್ಧಾರ ತಗೊಂಡಿರಲಿಲ್ಲ. ಜನಾಭಿಪ್ರಾಯ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ಅದೇ ರೀತಿಯಲ್ಲಿ ರಾಯಣ್ಣ ಬ್ರಿಗೇಡ್‌ ಬಗ್ಗೆಯು ಚರ್ಚಿಸಿ ತೀರ್ಮಾನಿಸುತ್ತೇನೆ ಎಂದಿದ್ದಾರೆ.  KS Eshwarappa said in a press conference in Bagalkot that he will decide on restarting Rayanna Brigade after the Lok Sabha election results