BREAKING NEWS | ಸಾಗರ ರೋಡ್‌ನಲ್ಲಿ ಮತ್ತೊಂದು ಬಸ್‌ ಅಪಘಾತ | ಕಾರು ಖಾಸಗಿ ಬಸ್‌ ಡಿಕ್ಕಿ

private bus and a car collided head-on near Ulluru, Sagar taluk, Shivamogga district 

BREAKING NEWS | ಸಾಗರ ರೋಡ್‌ನಲ್ಲಿ ಮತ್ತೊಂದು ಬಸ್‌ ಅಪಘಾತ | ಕಾರು ಖಾಸಗಿ ಬಸ್‌ ಡಿಕ್ಕಿ
private bus and a car collided, Ulluru, Sagar taluk, Shivamogga district 

SHIVAMOGGA | MALENADUTODAY NEWS | Jun 10, 2024  ಮಲೆನಾಡು ಟುಡೆʼ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಉಳ್ಳೂರು ಬಳಿ ಮತ್ತೊಂದು ಬಸ್‌ ಅಪಘಾತವಾಗಿದೆ. ಮೊನ್ನೆಯಷ್ಟೆ ಅಲ್ಲಿನ ಮುಂಬಾಳು ತಿರುವಿನಲ್ಲಿ ಜೆಆರ್‌ಬಿ ಬಸ್‌ ಅಪಘಾತಕ್ಕೀಡಾಗಿತ್ತು. ಇವತ್ತು ಇನ್ನೊಂದು ಘಟನೆ ಸಂಭವಿಸಿದ್ದು, ಅದೃಷ್ಟವಶಾತ್‌ ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ. 

ಸಾಗರ ತಾಲೂಕಿನ ಉಳ್ಳೂರು ಹತ್ತಿರದ ತಿರುವಿನಲ್ಲಿ ಖಾಸಗಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಶಿವಮೊಗ್ಗದಿಂದ ಸಾಗರದ ಕಡೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಚಾಲಕನಿಗೆ ಪೆಟ್ಟಾಗಿದೆ. ಆತನನ್ನು ಸಾಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಬಸ್ನಲ್ಲಿದ್ದ 20 ಕ್ಕೂ ಹೆಚ್ಚು  ಪ್ರಯಾಣಿಕರಿ ಯಾವುದೇ ರೀತಿಯ ಪೆಟ್ಟಾಗಿಲ್ಲ. ಸ್ಥಳಕ್ಕೆ ಸಾಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ವಾಹನಗಳನ್ನ ತೆರವುಗೊಳಿಸ್ತಿದ್ದಾರೆ. 

A private bus and a car collided head-on near Ulluru, Sagar taluk, Shivamogga district