ಸೀಗೆಹಟ್ಟಿ ಯುವಕನ ಮೇಲೆ ಹಲ್ಲೆ | ಸಿಟ್ಟಿಗೆದ್ದ ಬಿಜೆಪಿ ಸೋಶಿಯಲ್‌ ಮೀಡಿಯಾ | ರಾಜ್ಯಾಧ್ಯಕ್ಷರ ಪೋಸ್ಟ್‌ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ

MLA Channabasappa and BJP State President BY Vijayendra condemned the attack on a young man in Sigehatti, Shivamogga, through a social media post. They also criticized Home Minister G Parameshwar. and the government.

ಸೀಗೆಹಟ್ಟಿ ಯುವಕನ ಮೇಲೆ ಹಲ್ಲೆ | ಸಿಟ್ಟಿಗೆದ್ದ ಬಿಜೆಪಿ ಸೋಶಿಯಲ್‌ ಮೀಡಿಯಾ | ರಾಜ್ಯಾಧ್ಯಕ್ಷರ ಪೋಸ್ಟ್‌ನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ
MLA Channabasappa , BJP State President BY Vijayendra , Sigehatti, Shivamogga, social media post, Home Minister G Parameshwar.

SHIVAMOGGA | MALENADUTODAY NEWS | Jun 3, 2024  ಮಲೆನಾಡು ಟುಡೆʼ 

ಶಿವಮೊಗ್ಗ ಹೇಳಿ ಕೇಳಿ ಕೋಮು ಸೂಕ್ಷ್ಮ ಪ್ರದೇಶ. ನಗರದಲ್ಲಿ ಸಣ್ಣ ಪುಟ್ಟ ವಿಚಾರಗಳು ಸಹ ಮತೀಯ ಬಣ್ಣ ಪಡೆಯುತ್ತಿದ್ದು, ನೆತ್ತರು ಹರಿಸುವ ಮಟ್ಟಿಗೆ ಬೆಳೆದು ನಿಂತಿದೆ. ಇದಕ್ಕೆ ಪೂರಕ ಎಂಬಂತಹ ಘಟನೆ ನಿನ್ನೆ ನಡೆದಿದ್ದು, ಈ ಸಂಬಂಧ ಬಿಜೆಪಿ ನಾಯಕರು ರಾಜ್ಯಸರ್ಕಾರವನ್ನೇ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ಇದೊಂದು ದೊಡ್ಡ ಪ್ರಕರಣ ಆಗುವ ಸೂಚನೆ ಕಾಣುತ್ತಿದೆ. 

ನಡೆದಿದ್ದೇನು? 

ಫೈನಾನ್ಸ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸೀಗೆಹಟ್ಟಿಯ ಯುವಕ, ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅನ್ಯಕೋಮಿನ ಯುವತಿಯನ್ನ ಫೈನಾನ್ಸ್‌ ರಿಕವರಿ ವಿಚಾರದಲ್ಲಿ ನೆರವಿಗಾಗಿ ಬೈಕ್‌ನಲ್ಲಿ ಕರೆದೊಯ್ದಿದ್ದು ಆತನ ಮೇಲಿನ ಹಲ್ಲೆಗೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಮುಸ್ಲಿಂ ಸಮುದಾಯದ ಕೆಲವು ಯುವಕರು ಆತನ ಮೇಲೆ  ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. 

ಈ ಬಗ್ಗೆ ಆಕ್ರೋಶ ಹೊರಹಾಕಿದ ಬಿಜೆಪಿ ಎಂಎಲ್‌ಎ ಚನ್ನಬಸಪ್ಪ ನೇರವಾಗಿ ತಮ್ಮ ಎಫ್‌ಬಿ ಅಕೌಂಟ್‌ನಲ್ಲಿ ಪೋಸ್ಟ್‌ ಹಾಕಿದ್ದು,  ಗೃಹಸಚಿವರಿಗೆ ತಮ್ಮ ಪೋಸ್ಟ್‌ ಟ್ಯಾಗ್ ಮಾಡಿದ್ದಾರೆ. ಶಿವಮೊಗ್ಗದ ಮತ್ತೋರ್ವ ಹಿಂದೂ ಯುವಕ ಹಲ್ಲೆಗೊಳಗಾಗಿರುವುದು ಅತ್ಯಂತ ಖಂಡನೀಯ ಸಂಗತಿ. ಗೃಹ ಸಚಿವರಾದ ಪರಮೇಶ್ವರ್ ಅವರೇ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪುಂಡರ ಮಿತಿ ಮೀರಿದ ಹಾವಳಿ ನಡೆಯುತ್ತಿದೆ. ಇನ್ನಾದರೂ ಶಿವಮೊಗ್ಗದ ಕಡೆ ಸ್ವಲ್ಪ ಗಮನ ಹರಿಸಿ ಎಂದು ಚನ್ನಬಸಪ್ಪ ಒತ್ತಾಯಿಸಿದ್ದಾರೆ. 

ಇನ್ನೊಂದೆಡೆ ಈ ಕೃತ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೇಕಾಫ್‌ ಮಾಡಿದ್ದು ತಮ್ಮ ಎಕ್ಸ್ ಖಾತೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಮತೀಯ ಆಧಾರದ ಮೇಲೆ ನಿರ್ವಹಿಸುವ ಮೂಲಕ ಬಹುಸಂಖ್ಯಾತರನ್ನು ಅಭದ್ರತೆಯ ಸ್ಥಿತಿಗೆ ಕಾಂಗ್ರೆಸ್ ಸ್ಥಿತಿಗೆ ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.ಸರ್ಕಾರದ ಆಡಳಿತ ತುಘಲಕ್ ನೀತಿಯನ್ನು ನೆನಪಿಸುತ್ತಿದೆ. ಅಮಾಯಕ ಹಿಂದೂ ಯುವಕನ ಮೇಲಿನ ಹಲ್ಲೆ ಘಟನೆಯು ಶಾಂತಿ ಸುವ್ಯವಸ್ಥೆ ಕದಡುವ ಸ್ಥಿತಿಗೆ ಕಾರಣವಾಗದಂತೆ ಪೋಲಿಸರು ಕಾರ್ಯೋನ್ಮುಖರಾಗಿ ನಂದನ್ ಮೇಲೆ ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಒತ್ತಾಯಿಸುವೆ ಎಂದು ಆಗ್ರಹಿಸಿದ್ದಾರೆ. ಇನ್ನೂ ನಾಯಕರ ಈ ಪೋಸ್ಟ್‌ಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಎಕ್ಸ್‌ ಖಾತೆಯಲ್ಲಿ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳು ವ್ಯಕ್ತಪಡಿಸ್ತಿದ್ದಾರೆ. 


Hindu youth, who worked at a finance company in Shivamogga, was allegedly assaulted by a group of Muslim youths for taking a female Muslim colleague on his bike to show a house for finance recovery. BJP MLA Channabasappa condemned the incident and tagged Home Minister Parameshwar on his Facebook post,  BJP State President B.Y. Vijayendra also expressed outrage on his X account, accusing the Congress government of handling law and order based on religious bias and creating insecurity among the majority community.