ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿತ್ತು 43,61,080 ರೂಪಾಯಿ

Rs 43.6 lakhs collected in offering box at Chandragutti Renukaamba Temple

ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿತ್ತು 43,61,080 ರೂಪಾಯಿ
Chandragutti Renukaamba Temple
ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿತ್ತು 43,61,080 ರೂಪಾಯಿ

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ದೇವಾಲಯದಲ್ಲಿ 43,61,080, ರೂ. ಸಂಗ್ರಹವಾಗಿದೆ.

ದೇವಾಲಯದ  ಆಡಳಿತ ಮಂಡಳಿಯಲ್ಲಿ  ನಡೆದ ಹಣ ಎಣಿಕೆಯ ವೇಳೆ ಜಾತ್ರೆ ಮತ್ತು ಹುಣ್ಣಿಮೆ ಸಂದರ್ಭದಲ್ಲಿ ಸಂಗ್ರಹವಾದ ಕಾಣಿಕೆಯನ್ನು ಎಣಿಸಲಾಯಿತು.  ಕಳೆದ  22,53,700 ರೂಪಾಯಿ ಸಂಗ್ರಹವಾಗಿದ್ದರೇ ಈ ಸಲ 43,61,080, ರೂ. ಸಂಗ್ರಹವಾಗಿದೆ. 

ಇನ್ನೂ ಈ ವೇಳೆ  ನಾಡಕಚೇರಿ ಉಪ ತಹಶೀಲ್ದಾರ್ ಲಲಿತ ,  ಶಿರಸ್ತೇದಾರ್ ಎಸ್. ನಿರ್ಮಲಾ ಪ್ರಭಾಕರ್, ರಾಜಸ್ವ ನಿರೀಕ್ಷಕ ವಿ.ಎಲ್ ಶಿವಪ್ರಸಾದ್, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ, ಮುಜರಾಯಿ ಇಲಾಖೆ ವಿಷಯ ನಿರ್ವಾಹಕಿ ಎಂ‌.ಶೃತಿ ಹಾಗೂ ಕೆನರಾ ಬ್ಯಾಂಕ್  ಶಾಖೆಯ ಸಹಾಯಕ ವ್ಯವಸ್ಥಾಪಕರು, ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿ ಪಾಲ್ಗೊಂಡಿದ್ದರು.

Rs 43.6 lakhs collected in offering box at Chandragutti Renukaamba Temple