ಶಿವಮೊಗ್ಗ ವಿಮಾನ ನಿಲ್ದಾಣ | ಈ ವರ್ಷ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಸಿದರು ಗೊತ್ತಾ | ಇಲ್ಲಿದೆ ಅಂಕಿ ಅಂಶ

Shimoga Airport | Do you know how many people traveled in flights this year? Here is the statistic

ಶಿವಮೊಗ್ಗ ವಿಮಾನ ನಿಲ್ದಾಣ |  ಈ ವರ್ಷ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಸಿದರು ಗೊತ್ತಾ | ಇಲ್ಲಿದೆ ಅಂಕಿ ಅಂಶ
Shimoga Airport

SHIVAMOGGA | MALENADUTODAY NEWS | May 12, 2024  

ಶಿವಮೊಗ್ಗ ವಿಮಾನ ನಿಲ್ದಾಣ ಕಳೆದ ವರ್ಷ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಯವರಿಂದ ಉದ್ಘಾಟನೆಗೊಂಡಿತು. ಆನಂತರ ಕಳೇದ ವರ್ಷ ಆಗಸ್ಟ್‌ ನಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಗೊಂಡಿತು. ಅಲ್ಲಿಂದ ಅಂದರೆ 2023-2024ರಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ  39,040 ಮಂದಿ ಪ್ರಯಾಣಿಸಿದ್ದಾರೆ. 

ಏರ್‌ಪೋರ್ಟ್‌ ಅಥಾರಿಟಿ ದಾಖಲೆ ಪ್ರಕಾರ, ಕಳೆದ ಮಾರ್ಚ್‌ನಲ್ಲಿ  6,166 ಮಂದಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಕಳೆದ ಫೇಬ್ರವರಿಯಲ್ಲಿ 7,282 ಮಂದಿ ಪ್ರಯಾಣಿಸಿದ್ದರು. ಫೆಬ್ರವರಿ ತಿಂಗಳಿಗೆ ಹೋಲಿಸಿದರೇ ಸಾವಿರ ಮಂದಿ ಪ್ರಯಾಣಿಕರ ಸಂಖ್ಯೆ ಮಾರ್ಚ್‌ನಲ್ಲಿ ಕುಸಿದಿದೆ. ಇನ್ನೂ ಈ ವರ್ಷದ ಮೊದಲ ತಿಂಗಳು ಜನವರಿಯಲ್ಲಿ 6,430 ಮಂದಿ ಪ್ರಯಾಣಿಸಿದ್ದರು. ಏಪ್ರಿಲ್‌ ತಿಂಗಳ ಅಂಕಿ ಅಂಶ ಇನ್ನಷ್ಟೆ ಲಭ್ಯವಾಗಬೇಕಿದೆ.  ಶಿವಮೊಗ್ಗ ಏರ್‌ಪೋರ್ಟ್‌ ಒಟ್ಟಾರೆ  449.22 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ