kyasanur forest disease | ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡದಲ್ಲಿ ಮಂಗನ ಕಾಯಿಲೆ ಆತಂಕ! ಇಲ್ಲಿದೆ ಕುತೂಹಲಕಾರಿ ಅಂಕಿಅಂಶ
kyasanur forest disease | Monkey disease in Shivamogga, Chikkamagaluru, Uttara Kannada Here's an interesting statistic
Shivamogga | Feb 11, 2024 | kyasanur forest disease ಶಿವಮೊಗ್ಗದಲ್ಲಿ ಮತ್ತೆ ಮಂಗನ ಕಾಯಿಲೆಯ ಸೋಂಕಿನ ಬಗ್ಗೆ ವರದಿಯಾಗಿದೆ ದಿನಾಂಕ 10 ರಂದು ಬಿಡುಗಡೆಯಾಗಿರುವ ದೈನಂದಿನ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದೆ. DEPARTMENT OF HEALTH & FAMILY WELFARE ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂಥೆ 124 ಮಾದರಿ ಪರೀಕ್ಷೆಗಳನ್ನ ನಡೆಸಲಾಗಿದ್ದು ಈ ಪೈಕಿ ಓರ್ವರಲ್ಲಿ ಮಂಗನ ಕಾಯಿಲೆಯ ಸೋಂಕು ಪಾಸಿಟಿವ್ ಕಾಣಿಸಿದೆ.
ನೆರೆಯ ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದಂತೆ 12 ಟೆಸ್ಟ್ಗಳನ್ನ ನಡೆಸಲಾಗಿದ್ದು, ಈ ಪೈಕಿ ಐವರಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ. ಇನ್ನೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ನಾಲ್ಕು ಸ್ಯಾಂಪಲ್ ಪರೀಕ್ಷೆಯಲ್ಲಿ ಯಾವುದೇ ಪಾಸಿಟಿವ್ ವರದಿ ಹೊರಬಿದ್ದಿಲ್ಲ. ಉಳಿದಂತೆ ಹಾವೇರಿಯಲ್ಲಿ ಒಂದು ಟೆಸ್ಟ್ ನಡೆಸಲಾಗಿದ್ದು, ರಿಪೋರ್ಟ್ ನೆಗಟಿವ್ ಇದೆ.
ಒಟ್ಟು 10 ನೇ ತಾರೀಖು 145 ಟೆಸ್ಟ್ಗಳನ್ನು ನಡೆಸಲಾಗಿದ್ದು ಈ ಪೈಕಿ ಆರು ಪಾಸಿಟಿವ್ ಕೇಸ್ಗಳು ವರದಿಯಾಗಿದೆ. ಇದುವರೆಗೂ ಅಂದರೆ ಜನವರಿ ಒಂದರಿಂದ 3157 ಟೆಸ್ಟ್ಗಳನ್ನು ನಡೆಸಲಾಗಿದ್ದು, ಒಟ್ಟು 76 ಪಾಸಿಟಿವ್ ಕೇಸ್ ವರದಿಯಾಗಿದೆ. ಈ ಪೈಕಿ 53 ಸೋಂಕಿನ ಮುಕ್ತವಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 21 ಮಂದಿ ಚಿಕಿತ್ಸೆ ಮುಂದುವರಿದಿದ್ದು, ಇಬ್ಬರ ದುರ್ಮರಣದ ಬಗ್ಗೆ ವರದಿಯಾಗಿದೆ.
21 ಮಂದಿಯ ಪೈಕಿ ಸರ್ಕಾರಿ ಆಸ್ಪತ್ರೆಯ ವಾರ್ಡ್ಗಳಲ್ಲಿ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವರು ಖಾಸಗಿ ಆಸ್ಪತ್ರೆಯ ನಾರ್ಮಲ್ ವಾರ್ಡ್ನಲ್ಲಿದ್ದಾರೆ. ಶಿವಮೊಗ್ಗದಲ್ಲಿ ಐದು ಆಕ್ಟೀವ್ ಕೇಸ್ ಇದೆ. ಚಿಕ್ಕಮಗಳೂರಿನಲ್ಲಿ ಸದ್ಯ ಏಳು ಆಕ್ಟೀವ್ ಕೇಸ್ ಇದೆ. ಇನ್ನೂ ಉತ್ತರ ಕನ್ನಡ ದಲ್ಲಿ 9 ಪಾಸಿಟಿವ್ ಕೇಸ್ಗಳಿವೆ ಎಂದು ರಿಪೋರ್ಟ್ ತಿಳಿಸಿದೆ.