ಇವತ್ತು ಮಳೆಯೋ? ಬಿಸಿಲೋ? ಹೇಗಿರುತ್ತೆ ದಿನ? ಹವಾಮಾನ ಇಲಾಖೆ ನೀಡಿರುವ ಮನ್ಸೂಚನೆ ಏನು?

Is it raining today? Sunny? how is the day What is the forecast given by the Meteorological Department?

ಇವತ್ತು ಮಳೆಯೋ? ಬಿಸಿಲೋ? ಹೇಗಿರುತ್ತೆ ದಿನ? ಹವಾಮಾನ ಇಲಾಖೆ ನೀಡಿರುವ ಮನ್ಸೂಚನೆ ಏನು?
Meteorological Department

SHIVAMOGGA | MALENADUTODAY NEWS |  Apr 22, 2024  

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಮಳೆ ಮೋಡವಿದ್ದರೂ ಬಿಸಿಲು ಝಳಪಿಸುವ ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಇವತ್ತು ಬಿಸಿಲು ಹೆಚ್ಚಿರಲಿದೆ. ಬೆಳಗ್ಗೆ ಎಂಟು ಗಂಟೆ ಸುಮಾರಿಗೆ 29 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು 12 ಗಂಟೆ ಹೊತ್ತಿಗೆ ಬರೋಬ್ಬರಿ 37.3 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಶಿವಮೊಗ್ಗದಲ್ಲಿ ದಾಖಲಾಗಲಿದೆ.

ಇನ್ನೂ ಇದೇ ವೇಳೆ ಮಳೆ ಮೋಡಗಳು ಸಹ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.  ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಗರಿಷ್ಟ 38.7 ಡಿಗ್ರಿ ಸೆಲ್ಸಿಯಸ್‌ ನಷ್ಟು ಉಷ್ಣಾಂಶ ಇರಲಿದ್ದು ಬಿಸಿಲ ತಾಪ ಹೆಚ್ಚಿರಲಿದೆ. ಆನಂತರ ಐದು ಗಂಟೆ ಸುಮಾರಿಗೆ ಬಿಸಿಲ ಝಳ ತಗ್ಗಲಿದೆ ಎಂದಿರುವ ಭಾರತೀಯ ಹವಾಮಾನ ಇಲಾಖೆ  ಇವತ್ತು ಮಳೆಯ ಮುನ್ಸೂಚನೆಯನ್ನ ನೀಡಿಲ್ಲ. ಮುಂದಿನ 3 ಗಂಟೆಗಳಲ್ಲಿ ಬಳ್ಳಾರಿ, ದಾವಣಗೆರೆ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.