ಶಿವಮೊಗ್ಗ | ಸಿಡಿಲಬ್ಬರದ ಜೊತೆಗೆ ಬೀಸಿದ ಗಾಳಿ | ರಸ್ತೆಯಲ್ಲೆಲ್ಲಾ ದೂಳು

Shimoga | Wind accompanied by thunderstorms | Dust all over the road

ಶಿವಮೊಗ್ಗ |  ಸಿಡಿಲಬ್ಬರದ ಜೊತೆಗೆ ಬೀಸಿದ ಗಾಳಿ  | ರಸ್ತೆಯಲ್ಲೆಲ್ಲಾ ದೂಳು
Shimoga

Shivamogga Apr 18, 2024   ಶಿವಮೊಗ್ಗದಲ್ಲಿ ಬೆಳಗ್ಗೆಯಿಂದ ಬಿಸಿಲು ಝಳಪಿಸುತ್ತಿತ್ತು.. ಇದೀಗಷ್ಟೆ ನಗರದಲ್ಲಿ ಬೀಸುಗಾಳಿಯ ಅಬ್ಬರ ಆರಂಭಗೊಂಡಿದೆ. ಮಳೆಬರುವ ವಾತಾವರಣವಾಗಿದ್ದು ಸಿಡಿಲಿನ ಸದ್ದು ಕೇಳಿಬರುತ್ತಿದೆ. ಇನ್ನೂ ಜೋರಾಗಿ ಬೀಸಿದ ಗಾಳಿಗೆ ದೂಳು ಹಾರಿ ರಸ್ತೆಯಲ್ಲಿ ಓಡಾಡುವವರಿಗೆ ಕೆಲಹೊತ್ತು ಕಷ್ಟಕಷ್ಟ ಎಂಬಂತಾಗಿತ್ತು

ಶಿವಮೊಗ್ಗದಲ್ಲಿ  ಇವತ್ತು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ಸಂಜೆ ನಾಲ್ಕು ಗಂಟೆ ನಗರದಲ್ಲಿ  ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಗಾಳಿ, ಗುಡುಗು, ಮಿಂಚು, ಸಿಡಿಲನ ಅಬ್ಬರ ಕಾಣಿಸಿದೆ. ಇನ್ನೂ ಲಭ್ಯವಾದ ವರದಿಗಳ ಪ್ರಕಾರ,  ಕೆಲವೆಡೆ ಮಳೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.