ಸಿಹಿಸುದ್ದಿ ನೀಡಿದ ಭಾರತೀಯ ಹವಾಮಾನ ಇಲಾಖೆ | ಈ ವರ್ಷದ ಮಳೆ ಭವಿಷ್ಯ ಹೇಗಿದೆ ಗೊತ್ತಾ | ರೈತರಿಗೆ ಲಾಟರಿ!

India Meteorological Department (IMD) gives good news | Do you know what this year's rain predictions look like

ಸಿಹಿಸುದ್ದಿ  ನೀಡಿದ ಭಾರತೀಯ ಹವಾಮಾನ ಇಲಾಖೆ  | ಈ ವರ್ಷದ ಮಳೆ ಭವಿಷ್ಯ ಹೇಗಿದೆ ಗೊತ್ತಾ  | ರೈತರಿಗೆ ಲಾಟರಿ!
India Meteorological Department

Shivamogga  Apr 16, 2024 ಕಳೆದ ವರ್ಷದ ಮಳೆಯಾಗದೇ ನೀರಿಲ್ಲದೇ ಪರದಾಡ್ತಿದ್ದ ಸಂಕಷ್ಟಕ್ಕೆ ಈ ವರ್ಷದ ಮುಂಗಾರು ಇತೀಶ್ರಿ ಹಾಡುವ ಸುದ್ದಿಯೊಂದನ್ನ ಹವಾಮಾನ ಇಲಾಖೆ ನೀಡಿದೆ. ಮುಂಗಾರು ಋತುವಿನ ಮಳೆಯ ಭವಿಷ್ಯವನ್ನು ವಿವರಿಸಿದ ಹವಾಮಾನ ಇಲಾಖೆ ಈ ವರ್ಷ ವಾಡಿಕೆಗೆಗಿಂತಲೂ ಹೆಚ್ಚು ಮಳೆಯಾಗಲಿದೆ ಎಂದು ತಿಳಿಸಿದೆ.  

ರಾಜ್ಯವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ  ಶೇ.106ಕ್ಕಿಂತ ಅಧಿಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.  ಜೂನ್‌ನಿಂದ ಸೆಪ್ಟೆಂಬ‌ರ್ ವರೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದು ಸಂತಸಕ್ಕೆ ಕಾರಣವಾಗಿದೆ.  

ಉಷ್ಣ ಮಾರುತದ ಅಬ್ಬರಕ್ಕೆ ಕಾರಣವಾಗಿರುವ ಎಲ್ ನಿನೋ ಪ್ರಭಾವ ಜೂನ್ ಹೊತ್ತಿಗೆ ತಗ್ಗಲಿದೆ. ಮುಂಗಾರಿಗೆ ಪೂರಕವಾದ ಲಾ ನಿನಾ ಪ್ರಭಾವ ಆಗಸ್ಟ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಹೆಚ್ಚಿರಲಿದೆ. ಈ ಬಾರಿ ಸಾಧಾರಣಕ್ಕಿಂತ ಅಧಿಕ ಮಳೆ ಆಗಲಿದೆ. ಎಂದು ಮೃತ್ಯುಂಜಯ ಮಹಾಪಾತ್ರ ವಿವರಿಸಿದ್ದಾರೆ. 

ಕರ್ನಾಟಕದ ಬಹುತೇಕ ಕಡೆ ಏ. 16 ಮತ್ತು 17ರಂದು ಒಣ ಹವೆ ಇರಲಿದ್ದು, ಏ.18ರ ನಂತರ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.