ತಗ್ಗಿದ ಶರಾವತಿ ಹಿನ್ನೀರು | ಮುಪ್ಪಾನೆ ಲಾಂಚ್‌ ಸ್ಥಗಿತ | ಹಸಿರುಮಕ್ಕಿಯಲ್ಲಿಯು ಮುನ್ನೆಚ್ಚರಿಕೆ

Lower Sharavati Backwater | Muppane launch halt hasirumakki caution, Joga-Kargal, Muppane Kadavu, Holebagilu, Sigandur, Tumari, Bakodu,

ತಗ್ಗಿದ ಶರಾವತಿ ಹಿನ್ನೀರು | ಮುಪ್ಪಾನೆ ಲಾಂಚ್‌ ಸ್ಥಗಿತ | ಹಸಿರುಮಕ್ಕಿಯಲ್ಲಿಯು ಮುನ್ನೆಚ್ಚರಿಕೆ
Sharavati Backwater , Muppane launch, hasirumakki, Joga-Kargal, Muppane Kadavu, Holebagilu, Sigandur, Tumari, Bakodu,

SHIVAMOGGA | MALENADUTODAY NEWS | May 4, 2024    ‌ 

ಬೇಸಿಗೆ ಬಿರುಬಿಸಿಲನ ನಡುವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಮುಪ್ಪಾನೆ ಲಾಂಚ್‌ ಸೇವೆ ಇದೇ ಮೇ ಐದು ಅಂದರೆ ನಾಳೆಯಿಂದ ಸ್ಥಗಿತಗೊಳ್ಳಲಿದೆ. ಈ ಸಂಬಂಧ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. 

ಕರೂರು ಹೋಬಳಿಯಿಂದ ಕಾರ್ಗಲ್– ಜೋಗಕ್ಕೆ ಸಂಪರ್ಕ ಕಲ್ಪಿಸುವ ಲಾಂಚ್‌ ಮಾರ್ಗ ಇದಾಗಿದೆ.  ಶರಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲ್ಕೆ– ಮುಪ್ಪಾನೆ ಬಳಿ ಸಂಚಾರಕ್ಕೆ ಮರದ ದಿಣ್ಣೆಗಳು, ಮರಳಿನ ದಿಬ್ಬಗಳು ಅಡ್ಡಿಯಾಗುತ್ತಿವೆ. 

ಈ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಇನ್ನೂ ಹಸಿರುಮಕ್ಕಿ ನಲ್ಲಿ ಲಾಂಚ್‌ ಮೇ 15 ರವರೆಗೂ ಸೇವೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.