ಅತ್ತೆಯ ಶವ ಸಂಸ್ಕಾರ ವೇಳೆ ಸಂಬಂಧಿಕರ ಗಲಾಟೆ | ಜಾತ್ರೆಯಲ್ಲಿ ಹುಡುಗರ ಕಿರಿಕ್‌ | ಸಂಘದ ಸಾಲ, ಸಲ್ಲದ ಜಗಳ | 112 ಸುದ್ದಿ

Details of cases settled by 112 ERV personnel in Shimoga District, Shimoga Police, Bhadravati Hosamane Police, Shimoga Rural Police, Sagar Town Police

ಅತ್ತೆಯ ಶವ ಸಂಸ್ಕಾರ ವೇಳೆ ಸಂಬಂಧಿಕರ ಗಲಾಟೆ | ಜಾತ್ರೆಯಲ್ಲಿ ಹುಡುಗರ ಕಿರಿಕ್‌ | ಸಂಘದ ಸಾಲ, ಸಲ್ಲದ ಜಗಳ | 112 ಸುದ್ದಿ
Shimoga District, Shimoga Police, Bhadravati Hosamane Police, Shimoga Rural Police, Sagar Town Police

SHIVAMOGGA | MALENADUTODAY NEWS | May 16, 2024  ಮಲೆನಾಡು ಟುಡೆ

ಜಾತ್ರೆಗೆ ತೊಂದರೆ ಕೊಟ್ಟ ಯುವಕರು

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ಜಾತ್ರೆಯೊಂದು ನಡೆಯುತ್ತಿದ್ದಾಗ ಬೇರೆ ಕಡೆಯ ಹುಡುಗರು ಬಂದು ವಿನಾಕಾರಣ ತೊಂದರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು 112 ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಇಆರ್‌ವಿ ವೆಹಿಕಲ್‌ ಬರುತ್ತಲೇ ಆರೋಪಿತ ಹುಡುಗರು ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ. ಪೊಲೀಸರು ಪ್ರಕರಣವನ್ನು ಠಾಣೆಗೆ ವರ್ಗಾಯಿಸಿದ್ದಾರೆ. 

ಅತ್ತೆಯ ಶವ ಸಂಸ್ಕಾರದ ವಿಚಾರಕ್ಕೆ ಕಿರಿಕ್‌ 

ಇನ್ನೊಂದೆಡೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಮಹಿಳೆಯೊಬ್ಬರ ಅಂತ್ಯಸಂಸ್ಕಾರದ ವಿಚಾರಕ್ಕೆ ಗಲಾಟೆಯಾಗಿದೆ. ಅತ್ತೆಯ ಶವಸಂಸ್ಕಾರದ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ಕರೆ ಮಾಡಿದ್ದರು. ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸರು ಅಲ್ಲಿದ್ದವರನ್ನ ಸಮಧಾನ ಪಡಿಸಿ ತಿಳುವಳಿಕೆ ನೀಡಿದ್ದಾರೆ

ಸಂಘದ ಸಾಲದ ವಿಚಾರಕ್ಕೆ ಜಗಳ

ಇನ್ನೂ  ಸಾಗರ ಟೌನ್‌ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಮಹಿಳಾ ಸಂಘದ ಸಾಲದ ವಿಚಾರಕ್ಕೆ ಗಲಾಟೆ ನಡೆದಿದೆ. ಸದಸ್ಯರು ಗಲಾಟೆ ಮಾಡುತ್ತಿದ್ದಾರೆ ಎಂದು ದೂರು ಕೇಳಿಬಂದ ಹಿನ್ನೆಲೆ ಸ್ಥಳಕ್ಕೆ ತೆರಳಿದ 112 ಪೊಲೀಸ್‌ ಸಿಬ್ಬಂದಿ ಎಲ್ಲರನ್ನೂ ಒಟ್ಟುಗೂಡಿಸಿ ತಿಳುವಳಿಕೆ ಹೇಳಿದ್ಧಾರೆ. ಅಲ್ಲದೆ ಗಲಾಟೆ ಮಾಡಿದವರಿಗೆ ಎಚ್ಚರಿಕೆ ಕೊಟ್ಟು ಕೇಸ್‌ ಇತ್ಯರ್ಥ ಮಾಡಿದ್ಧಾರೆ.