ಸಿಗಂದೂರು ಬಳಿಕ , ಕೊಲ್ಲೂರು, ಕುಂದಾಪುರಕ್ಕೆ ಹೋಗುವವರಿಗೆ ಗುಡ್‌ ನ್ಯೂಸ್‌ | ಹಸಿರುಮಕ್ಕಿ ಲಾಂಚ್‌ ಮತ್ತೆ ಆರಂಭ

after Sigandur launch Launch services reopen on the Sharavati River,now Hasirumakki launch service restarted. Sagara to Kollur and Kundapura, Nittooru area.

ಸಿಗಂದೂರು ಬಳಿಕ , ಕೊಲ್ಲೂರು, ಕುಂದಾಪುರಕ್ಕೆ ಹೋಗುವವರಿಗೆ ಗುಡ್‌ ನ್ಯೂಸ್‌ | ಹಸಿರುಮಕ್ಕಿ ಲಾಂಚ್‌ ಮತ್ತೆ ಆರಂಭ
Sagara to Kollur and Kundapura, Nittooru area, Sharavati River,Hasirumakki launch service, Sigandur launch Launch services

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಹಿನ್ನೀರು ತಗ್ಗಿದ ಕಾರಣಕ್ಕಾಗಿ ನಿಂತಿದ್ದ ಲಾಂಚ್‌ ಸೇವೆಗಳು ಶರಾವತಿ ನದಿಯಲ್ಲಿ ಮತ್ತೆ ಆರಂಭವಾಗಿದೆ. ಇತ್ತೀಚೆಗೆ ಸಿಗಂದೂರು ಲಾಂಚ್‌ ವಾಹನಗಳ ಸಂಚಾರಕ್ಕೆ ತೆರೆದುಕೊಂಡಿತ್ತು. ಇದೀಗ ಶರಾವತಿ ಹಿನ್ನಿರಿನ  ಹಸಿರುಮಕ್ಕಿ ಲಾಂಚ್ ಸೇವೆ ಇಂದಿನಿಂದ ಪುನರ್ ಆರಂಭಗೊಂಡಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಾಹಿತಿ ನೀಡಿದೆ 

ಹಸಿರುಮಕ್ಕಿ ಲಾಂಚ್

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದು ಶರಾವತಿ ಹಿನ್ನೀರಿನಲ್ಲಿ ನೀರಿನ ಕೊರತೆ ಉಂಟಾಗಿ ಲಾಂಚ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು ನೀರಿನ ಕೊರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಕಳೆದ ಒಂದು ತಿಂಗಳಿಂದ ಸ್ಥಗಿತಗೊಳಿಸಲಾಗಿತ್ತು, ಇದರಿಂದ ನಿಟ್ಟೂರು ಭಾಗದ ಜನರು ಸೇರಿದಂತೆ ಸಾಗರದಿಂದ ಕೊಲ್ಲೂರು ಕುಂದಾಪುರ ತೆರಳುವವರಿಗೆ ಸಾಕಷ್ಟು ಅನಾನುಕೂಲ ಉಂಟಾಗಿತ್ತು  ಸದ್ಯ ಲಾಂಚ್ ಸೇವೆ ಆರಂಭದಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ

Launch services on the Sharavati River, which were halted due to low water levels, have resumed. Sigandur launch services recently reopened, and now Hasirumakki launch service has also restarted. The launch service was suspended for a month due to safety concerns and water shortages caused by falling water levels in the Linganamakki reservoir. This caused inconvenience for people traveling from Sagara to Kollur and Kundapura, including residents of the Nittoor area. The resumption of launch service has brought relief to the people.