ಆರಿದ್ರಾ ಮಳೆಯ ಅಬ್ಬರ | ಕುಸಿದು ಬಿದ್ದ ಮನೆ | ತೀರ್ಥಹಳ್ಳಿಯಲ್ಲಿ ನಡೆದಿದ್ದೇನು?
house collapsed in Jambethalluru village, Guddekoppa, Thirthahalli taluk

SHIVAMOGGA | MALENADUTODAY NEWS | Jun 29, 2024 ಮಲೆನಾಡು ಟುಡೆ
ಶಿವಮೊಗ್ಗದಲ್ಲಿ ಮಳೆಯಾಗುತ್ತಿರುವಂತೆಯೇ ಅದರ ಅವಾಂತರಗಳ ಬಗ್ಗೆಯು ವರದಿಯಾಗುತ್ತಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಗುಡ್ಡೆಕೊಪ್ಪದ ಜಂಬೇತಲ್ಲೂರಿನಲ್ಲಿ ಇಂದು ಬೆಳಗ್ಗೆ ಮನೆಯೊಂದು ಕುಸಿದು ಬಿದ್ದಿದೆ. ತಾಲೂಕಿನ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಜಂಬೇತಲ್ಲೂರು ಗ್ರಾಮದ ಮಾಲ ಹಲ್ಕಾರಿನ ಸುಶೀಲ ಎಂಬುವರ ಮನೆ ಮಳೆಯಿಂದ ಕುಸಿದು ಬಿದ್ದಿದೆ.
ವಿಷಯ ತಿಳಿದು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸದಸ್ಯರು ಮತ್ತು ಪಂಚಾಯತಿಯ PDO ಹಾಗು ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಬಡತನ ಕುಟುಂಬದ ಮಹಿಳೆ ಸುಶೀಲರವರಿಗೆ ನೂತನವಾಗಿ ಮನೆ ಕಟ್ಟಿಕೊಳ್ಳಲು ಪರಿಹಾರ ನೀಡಿ ಸಹಕರಿಸಬೇಕೆಂದು ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ ಪವಾರ್ ರವರು ತಿಳಿಸಿದ್ದಾರೆ.
A house collapsed in Jambethalluru village, Guddekoppa, Thirthahalli taluk