ತುಂಗಾ ಡ್ಯಾಂ | ಆರು ಕ್ರಸ್ಟ್‌ ಗೇಟ್‌ಗಳಿಂದ ನೀರು ಹೊರಕ್ಕೆ | ಇಲ್ಲಿದೆ ಪೂರ್ತಿ ವಿವರ

shivamogga tunga dam water level today

ತುಂಗಾ ಡ್ಯಾಂ | ಆರು ಕ್ರಸ್ಟ್‌ ಗೇಟ್‌ಗಳಿಂದ ನೀರು ಹೊರಕ್ಕೆ | ಇಲ್ಲಿದೆ ಪೂರ್ತಿ ವಿವರ
shivamogga tunga dam water level today

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಇತ್ತ ತುಂಗಾ ಜಲಾನಯನ ಪ್ರದೇಶಗಳಲ್ಲಿಯು ಉತ್ತಮ ಮಳೆಯಾಗುತ್ತಿದೆ. ಶೃಂಗೇರಿ ತೀರ್ಥಹಳ್ಳಿ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಾ ಡ್ಯಾಂಗೆ ಒಳಹರಿವು ಹೆಚ್ಚಿದೆ. ಮೊನ್ನೆಯಷ್ಟೆ ಎರಡು ಕ್ರೆಸ್ಟ್‌ ಗೇಟ್‌ಗಳಿಂದ ತುಂಗಾ ಡ್ಯಾಂನಿಂದ ನೀರು ಹೊರಕ್ಕೆ ಬಿಡಲಾಗಿತ್ತು. ನಿನ್ನೆ ಒಟ್ಟು ಆರು ಕ್ರಸ್ಟ್‌ ಗೇಟ್‌ಗಳಿಂದ ನೀರನ್ನ ಹೊರಕ್ಕೆ ಬಿಡಲಾಗುತ್ತಿದೆ.  

ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ.  3.24 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್. ಸದ್ಯ ಜಲಾಶಯಕ್ಕೆ 11,342 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಬಹುತೇಕ ಇಷ್ಟೆ  ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

 

Tunga Dam in Shivamogga is currently at maximum capacity due to heavy rainfall in the Tunga catchment areas, particularly in the Sringeri Teerthahalli region.