ಗಾಂಜಾದಲ್ಲಿ ಮಿಕ್ಸ್ ಆಗುತ್ತೆ ಸಗಣಿ,ಪಾರಿವಾಳದ ಹಿಕ್ಕೆ, ಹಾವಿನ ಬಾಲ, ಎಕ್ಸ್‌ಪೈರಿ ಟ್ಯಾಬ್ಲೆಟ್‌!? ಶಿಗ್ಲಿ ಬಸ್ಯಾ ಬಿಚ್ಚಿಟ್ಟ ಸತ್ಯ

Cannabis mixes cow dung, pigeon droppings, snake tail, expiry tablet!? Shigli Basya reveals the truth

ಗಾಂಜಾದಲ್ಲಿ ಮಿಕ್ಸ್ ಆಗುತ್ತೆ  ಸಗಣಿ,ಪಾರಿವಾಳದ ಹಿಕ್ಕೆ, ಹಾವಿನ ಬಾಲ, ಎಕ್ಸ್‌ಪೈರಿ ಟ್ಯಾಬ್ಲೆಟ್‌!? ಶಿಗ್ಲಿ ಬಸ್ಯಾ ಬಿಚ್ಚಿಟ್ಟ ಸತ್ಯ
Cannabis mixes

SHIVAMOGGA | MALENADUTODAY NEWS | Jun 26, 2024  ಮಲೆನಾಡು ಟುಡೆ ಕಚ್ಚಾ ಗಾಂಜಾದ ಮತ್ತಿಗೆ ಮತ್ತಷ್ಟು ಮತ್ತನ್ನು ಬರಿಸಲು  ಏನೆಲ್ಲಾ ಕೆಮಿಕಲ್ ಗಳು ಹಾಗು ತ್ಯಾಜ್ಯ ವಸ್ತುಗಳು ಮಿಕ್ಸ್ ಆಗ್ತಿದೆ ಗೊತ್ತಾ....ಗಾಂಜಾ ಸೇವಿಸುವುದೇ ದೊಡ್ಡ ಅಪರಾಧವಾಗಿರುವಾಗ..ಇನ್ನು ಗಾಂಜಾದ ಕಿಕ್ಕೇರಿಸಲು...ಏನೆಲ್ಲಾ ಡ್ರಗ್ಸ್ ಗಳು ಹಾಗು ಕೆಟ್ಟ ವಸ್ತುಗಳನ್ನು ಸಿಂಪಡಣೆ ಮಾಡಲಾಗುತ್ತಿದೆ ಗೊತ್ತಾ.. ಮಾಜಿ ಕಳ್ಳ ಶಿಗ್ಲಿ ಬಸ್ಯಾ ಗಾಂಜಾದ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದಾನೆ.

ಗಾಂಜಾ ಗೆ ಮಿಕ್ಸ್ ಆಗುತ್ತೆ...ಔಟ್ ಡೇಟೆಡ್ ಟ್ಯಾಬ್ ,ಸಗಣಿ,ಪಾರಿವಾಳದ ಇಕ್ಕೆ,ಬೆಲ್ಲ..ಹಾವಿನ ಬಾಲ

ನಿಜ ಅನ್ನುತ್ತಿದೆ ಈ ವರದಿ. ಮಲೆನಾಡಿನ ಗಾಂಜಾ ಮಾಫೀಯ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಪರಿ ಗಮನಿಸಿದರೆ ಆತಂಕ ಸೃಷ್ಟಿಯಾಗುತ್ತದೆ.ಕೇವಲ ಕ್ರಿಮಿನಲ್ ಪಾತಕಿಗಳ ನಶೆ ಏರಿಸುತ್ತಿದ್ದ ಗಾಂಜಾ ಮತ್ತು ಈಗ ಅಮಾಯಕ ವಿದ್ಯಾರ್ಥಿಗಳನ್ನು ಹದಿಹರೆಯದ ಯುವಕರನ್ನು ನಶೆಯ ಗುಂಗಿಗೆ ಸಿಲುಕಿಸಿದೆ.ಇಷ್ಟಾದರೂ ಸರ್ಕಾರ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ..ಯಾವಾಗ ಸ್ಯಾಂಡಲ್ ವುಡ್ ಡ್ರಗ್ ಮಾಫೀಯ ಹೆಚ್ಚು ಸದ್ದು ಮಾಡಿತೋ..ಆಗ ರಾಜ್ಯಾದ್ಯಂತ ಗಾಂಜಾ ಅಡ್ಡೆಗಳ ಮೇಲೆ ಸರಣಿ ದಾಳಿಗಳು ನಡೆದವು. ಅಂದಿನಿಂದ ಇಂದಿನವರೆಗೂ ನಶೆಯ ಮಾಫಿಯಾದ ವಿರುದ್ದ ರೇಡ್‌ಗಳು ನಡೆಯುತ್ತಲೆ ಇವೆ. 

ಆದಾಗ್ಯು ಗಾಂಜಾ ಮಾಫಿಯಾ ನಿಲ್ಲುತ್ತಿಲ್ಲ. ಮತ್ತಷ್ಟು ವಿಸ್ತರಣೆಯಾಗುತ್ತಿದೆ. ಗಾಂಜಾ ತನ್ನ  ಮತ್ತನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕಾಗಿ ಟ್ಯಾಬ್ ಗಳನ್ನು ಬಳಸಲಾಗುತ್ತಿದೆ. ಹೌದು ಮಾಜಿ ಕಳ್ಳ ಹಾಗು  ಹಿಂದೆ ಗಾಂಜಾ ವ್ಯಸನಿಯಾಗಿದ್ದ ಶಿಗ್ಲಿ ಬಸ್ಯಾ...ಗಾಂಜಾವನ್ನು ಸಂಸ್ಕರಿಸುವ ಮತ್ತೊಂದು ಸ್ಪೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾನೆ. ಆತ ಹೇಳುವ ಪ್ರಕಾರ ಫಸಲಿಗೆ ಬಂದ ಗಾಂಜಾದ ಹೂವನ್ನು ಒಣಗಿಸಿ ಬಹಳ ದಿನಗಳ ಸಂಸ್ಕರಿಸಲು ಹಾಗು ಅದರ ಕಿಕ್ ಏರಿಸಲು..ಮಾಫಿಯ..ತನ್ನದೇ ವಾಮಮಾರ್ಗ ಕಂಡುಕೊಂಡಿದೆ.ಒಣ ಗಾಂಜಾಗೆ...ನೈಟ್ರೋವೆಟ್ 5 ಎಂಜಿ ಮತ್ತು 10 ಎಂಜಿ ಟ್ಯಾಬ್ ಗಳನ್ನು ಬೆರಸಲಾಗುತ್ತದೆಯಂತೆ ಇದರ ಜೊತೆ ಎಕ್ಸ್ ಪೆರಿಯಾಗಿರುವ ಟ್ಯಾಬ್ಲೇಟ್ ಗಳನ್ನು ಮಿಕ್ಸ್ ಮಾಡಲಾಗುತ್ತದೆ. ಅಲ್ಲದೆ ಗಾಂಜಾಗೆ ,ಸಗಣಿ,ಪಾರಿವಾಳ ಇಕ್ಕೆ,ಬೆಲ್ಲ.ಹಾವು ಕೆರೆಹಾವಿನ ಬಾಲವನ್ನು ಹಾಕಿ ಎಲ್ಲವನ್ನು ವಿಶ್ರಣ ಮಾಡಿ ಗಾಂಜಾವನ್ನು ಸಂಸ್ಕರಿಸಿ ಮಾರಲಾಗ್ತಿದೆಯಂತೆ. 

ಶಿಗ್ಲಿ ಬಸ್ಯಾ  ಹೇಳುವ ಪ್ರಕಾರ ಇಂತಹ ಗಾಂಜಾದ ಬೆಲೆ...ಸಾವಿರಾರು ರೂಪಾಯಿಯಾಗುತ್ತದೆಯಂತೆ. ಸರ್ಕಾರ ಸಿಗರೇಟ್ ಹಾಗು ಮದ್ಯದ ಬೆಲೆಯನ್ನು ಬಡ್ಜೆಟ್‌ ನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತಿರುವುದು ಗಾಂಜಾ ಮಾರಾಟಗಾರರಿಗೆ ವರದಾನವಾಗಿದೆ. ಒಂದು ಸಿಗರೇಟ್ ಪ್ಯಾಕ್ ನ ಬೆಲೆ 150 ರೂಪಾಯಿ ಇದ್ದರೆ...ಎರಡು ಗ್ರಾಂ ಗಾಂಜಾ 120 ರೂಪಾಯಿಗೆ ಮಾರುಕಟ್ಟೆಯಲ್ಲಿ ಅನಾಯಾಸವಾಗಿ ಸಿಗುತ್ತದೆ. ಇನ್ನು ಮದ್ಯದ ದರ ಮಾರುಕಟ್ಟೆಯಲ್ಲಿ ಕನಿಷ್ಠ ಎಂದರೂ ಕ್ವಾಟರ್ ಗೆ 50-100 ರೂಪಾಯಿ ಬೆಲೆ ಇದೆ.ಆದರೆ ಗಾಂಜಾ ಎರಡು ಪಪ್ ನಶೆ ,,ದಿನವಿಡಿ ಅಮಲಲ್ಲಿ ತೇಲುವಂತೆ ಮಾಡುತ್ತೆ.ಇದು ಹದಿಹರೆಯದ ಯುವಜನತೆಯ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ. ಹೀಗಾಗಿ ಇಂತಹ ಅನೈತಿಕ ಅಕ್ರಮ ಗಾಂಜಾ ಸಂಸ್ಕರಣೆ ಮಾಡುತ್ತಿರುವ ಪೆಡ್ಲರ್ಸ್‌ ನ್ನ ಪೊಲೀಸ್‌ ಇಲಾಖೆ ಮಟ್ಟಹಾಕಬೇಕಿದೆ ಎನ್ನುತ್ತಾನೆ ಶಿಗ್ಲಿ ಬಸ್ಯಾ.