ಮಲೆನಾಡಲ್ಲಿ ಮುಂಗಾರಿನ ಸುಳಿವಿಲ್ಲ ! ರಾಜ್ಯಕ್ಕೆ ವಿದ್ಯುತ್ ಕೊರತೆಯ ಭೀತಿ! ಲಿಂಗನಮಕ್ಕಿ ಪವರ್ ಹೌಸ್ ಬಂದ್! ಹೇಗಿದೆ ಪರಿಸ್ಥಿತಿ ಗೊತ್ತಾ?

There is no sign of monsoon in Malnad! Fear of power shortage in the state! Linganamakki Power House closed! Do you know what the situation is like?

ಮಲೆನಾಡಲ್ಲಿ ಮುಂಗಾರಿನ ಸುಳಿವಿಲ್ಲ ! ರಾಜ್ಯಕ್ಕೆ ವಿದ್ಯುತ್ ಕೊರತೆಯ ಭೀತಿ! ಲಿಂಗನಮಕ್ಕಿ ಪವರ್ ಹೌಸ್ ಬಂದ್!  ಹೇಗಿದೆ ಪರಿಸ್ಥಿತಿ ಗೊತ್ತಾ?

KARNATAKA NEWS/ ONLINE / Malenadu today/ Jun 17, 2023 SHIVAMOGGA NEWS

ಮಲೆನಾಡಲ್ಲಿ ಮಳೆಬರುತ್ತಿಲ್ಲ! ಮುಂಗಾರಿನ ಆರಂಭವೇ ಆದಂತಿಲ್ಲ! ಬಿರುಬೇಸಿಗೆಯೇ ಶೆಖೆಯೇ ತಲ್ಲಣಿಸುತ್ತಿದೆ. ಪರಿಣಾಮ ಮಲೆನಾಡ ಜಲಮೂಲಗಳಲ್ಲಿ ನೀರಿಂಗುತ್ತಿದೆ.

ಬತ್ತಿದ ಶರಾವತಿ

ಶರಾವತಿಯ ಒಡಲಲ್ಲಿ ಜಲಬತ್ತಿ ವಿದ್ಯುತ್ ತಯಾರಿಕೆಯು ಬಂದ್ ಆಗಿದೆ. ಹೌದು, ಲಿಂಗನಮಕ್ಕಿ ಜಲಾಶಯದಲ್ಲಿ ದಿನೇ ದಿನೇ ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ,  ಶರಾವತಿಗೆ ಸಂಬಂಧಿಸಿದ ನಾಲ್ಕು ವಿದ್ಯುತ್ ಗಾರಗಳ ಪೈಕಿ ಲಿಂಗನಮಕ್ಕಿ ಪವರ್ ಹೌಸ್​ನಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಉಳಿದಂತೆ ಗೇರುಸೊಪ್ಪ, ಶರಾವತಿ ಹಾಗೂ ಮಹಾತ್ಮ ಗಾಂಧಿ ಪವರ್ ಹೌಸ್​ನಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆಯಾದರೂ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಲ್ನಾಡ್​ ಶಿವಮೊಗ್ಗದಲ್ಲಿ ಮತ್ತೆ ತಲೆ ಎತ್ತಿತಾ ಸೆಕ್ಸ್​ ಸ್ಕ್ಯಾಂಡಲ್ ಕ್ರೈಂ​ ? ಆನ್​ಲೈನ್​ನಲ್ಲಿ ಯುವತಿಯರೇ ಎಚ್ಚರ? ಇದು ನಿಜನಾ?

1725 ಅಡಿಗಿಳಿದರೇ ವಿದ್ಯುತ್ ಉತ್ಪಾದನೆ ಬಂದ್

1,819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಲಿಂಗನಮಕ್ಕಿ ಇದೀಗ ಡೆಡ್​ ಸ್ಟೋರೆಜ್​ನ ಗಡಿಯನ್ನ ಸಮೀಪಿಸುತ್ತಿದೆ. ಸೆಂಟಿಮೀಟರ್​ ಲೆಕ್ಕದಲ್ಲಿ ಆಗಬೇಕಿದ್ದ ಮಳೆಯು ಈ ಜಲಾನಯನ ಪ್ರದೇಶದಲ್ಲಿ ಇನ್ನೂ ಮಿಲೀಮೀಟರ್​ ಲೆಕ್ಕದಲ್ಲಿದೆ. ಇನ್ನೂ  ಅಧಿಕಾರಿಗಳು ಹೇಳುವ ಪ್ರಕಾರ 1725 ಅಡಿಯವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದು. ಆನಂತರ ಜಲಾಶಯದ ನೀರಿ ಮಟ್ಟದ 5 ಪರ್ಸೆಂಟ್ ನೀರನ್ನ ಕುಡಿಯುವ ನೀರಿನ ಉದ್ದೇಶಕ್ಕಾಗಿ ಉಳಿಸಿಕೊಳ್ಳಲಾಗುತ್ತದೆ.  1715 ಅಡಿಗೆ ಇಳಿದರೆ, ಜಲಾಶಯ ಬಹುತೇಕ ಬರಿದಾಗಿದೆ ಎಂದೇ ಅರ್ಥೈಸಬಹುದಾಗಿದೆ.

ರಾಜ್ಯದ ವಿದ್ಯುತ್ ಶಕ್ತಿ ಕೇಂದ್ರ ನಾಲ್ಕು ಪವರ್ ಹೌಸ್​

ಶರಾವತಿಗೆ  ಸಂಬಂಧಿಸಿದ, ಗೇರುಸೊಪ್ಪ, ಮಹಾತ್ಮಗಾಂಧಿ, ಶರಾವತಿ ಹಾಗೂ ಲಿಂಗನಮಕ್ಕಿ ಪವರ್​ ಹೌಸ್​ಗಳು ಒಟ್ಟು 1436 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಲ್ಲವು. ಈ ಪೈಕಿ ಏಪ್ರಿಲ್​ ನಿಂದ ಇಲ್ಲಿಯವರೆಗೂ ಲಿಂಗನಮಕ್ಕಿಯಲ್ಲಿ  30 ಮಿಲಿಯನ್ ಯುನಿಟ್​ ಶರಾವತಿಯಲ್ಲಿ 93 ಮಿಲಿಯನ್ ಯುನಿಟ್, ಗೇರುಸೊಪ್ಪದಲ್ಲಿ 91 ಮಿಲಿಯನ್ ಯುನಿಟ್ ಹಾಗೂ ಮಹಾತ್ಮ ಗಾಂಧಿ ಪವರ್ ಹೌಸ್​ನಲ್ಲಿ 107 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. 

ವಿನೋಬನಗರ ಪೊಲೀಸರಿಂದ ಬೆಂಗಳೂರಲ್ಲಿ ನಟಿಯ ಬಂಧನ! ಏನಿದು ಶಿವಮೊಗ್ಗ ಕೋರ್ಟ್ ಕೇಸ್? ನಡೆದಿದ್ದೇನು?

2 ಬಂದ್ ಬಾಕಿ ಚಾಲು

ಲಿಂಗನಮಕ್ಕಿ ಪವರ್ ಹೌಸ್​ನಲ್ಲಿರುವ ಎರಡು ಯುನಿಟ್​ಗಳಿದ್ದು, ಈ ಘಟಕಗಳು ಸದ್ಯ ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ಇನ್ನೂ ಶರಾವತಿ ಪವರ್ ಹೌಸ್​ನಲ್ಲಿ 10 ಪವರ್ ಯುನಿಟ್​ಗಳಲ್ಲಿದ್ದು, ಮಹಾತ್ಮಗಾಂಧಿ ಪವರ್​ ಹೌಸ್​ನಲ್ಲಿ ನಾಲ್ಕು ಯುನಿಟ್​ಗಳಿವೆ, ಗೇರುಸೊಪ್ಪ ಪವರ್ ಹೌಸ್​ನಲ್ಲಿ ನಾಲ್ಕು ಪವರ್​ ಯುನಿಟ್ ಇದ್ದು ಸದ್ಯ ಚಾಲ್ತಿಯಲ್ಲಿದೆ.

  

ವರಾಹಿಯಲ್ಲಿಯು ವಿದ್ಯುತ್ ಉತ್ಪಾದನೆ ಬಂದ್

ರಾಜ್ಯದ ವಿದ್ಯುತ್ ಬೇಡಿಕೆಗೆ ತಕ್ಕಂತೆ, ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ.ಆದರೆ ಇದೀಗ ನೀರಿನ ಸಂಗ್ರಹಕ್ಕೆ ತಕ್ಕಂತೆ ಕಡಿಮೆ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದು ಲಿಂಗನಮಕ್ಕಿ ಜಲಾಶಯದ ವಾಸ್ತವ ಸ್ಥಿತಿಯಾದರೆ, ಅತ್ತ ವರಾಹಿ ಜಲಾಶಯದಲ್ಲಿಯು ಸಹ ವಿದ್ಯುತ್ ಉತ್ಪಾದನೆ ಈಗಾಗಲೆ ಬಂದ್ ಆಗಿದೆ. ಮಾಣಿ ಹಾಗೂ ಅದರ ಪಿಕಪ್ ಡ್ಯಾಂಗಳ ನೀರಿನ ಮಟ್ಟ ನಿರ್ದಿಷ್ಟ ಮಟ್ಟಕ್ಕಿಂತಲೂ ಕೆಳಕ್ಕೆ ಇರುವುದರಿಂದ ವಿದ್ಯುತ್ ಉತ್ಪಾದಿಸುವ ಟರ್ಬೈನ್​ಗಳ ಸುರಕ್ಷತೆಯ ದೃಷ್ಟಿಯಿಂದ ಪವರ್​ ಜನರೇಷನ್​ನ್ನ ನಿಲ್ಲಿಸಲಾಗುತ್ತದೆ. ಸದ್ಯ ಇದೇ ಕಾರಣಕ್ಕೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. 

ಇಲಿಯಾಜ್ ನಗರದಲ್ಲಿ ಕೊಲೆ ಕೇಸ್! ಆಸೀಫ್​ ಹತ್ಯೆಗೆ ಕಾರಣವಾಗಿದ್ದೇನು ಗೊತ್ತಾ!? ಜೀವ ತೆಗೆಯಿತಾ ಸೋದರಿ ಸಂಗ? ಎಫ್​ಐಆರ್​ನಲ್ಲಿ ಏನಿದೆ?

ಹುಯ್ಯೋ ಹುಯ್ಯೋ ಮಳೆರಾಯ

ಲಿಂಗನಮಕ್ಕಿ ಜಲಾನಯನ ಪ್ರದೇಶಗಳು ಹಾಗೂ ವರಾಹಿ ಜಲಾನಯನ ಪ್ರದೇಶಗಳಲೇ ಮಲೆನಾಡಿನ ಮಳೆಯ ಪ್ರಮುಖ ಕೇಂದ್ರಗಳಾಗಿವೆ. ಅದರಲ್ಲಿಯು ಚಕ್ರಾ, ಸಾವಹೇಕ್ಲು, ಯಡೂರು, ಮಾಣಿ, ಮಾಸ್ತಿಕಟ್ಟೆ, ಹುಲಿಕಲ್ ಘಾಟಿಗಳು ಅಪಾರ ಮಳೆಯಾಗುವ ಪ್ರದೇಶಗಳಾಗಿದ್ದು, ಇಲ್ಲಿನ್ನೂ ಮಳೆಯ ಅಬ್ಬರವೇ ಕಾಣುತ್ತಿಲ್ಲ. ರಣಚಂಡಿಯಂತಹ ಮಳೆ ಸುರಿವ ಪ್ರದೇಶಗಳಲ್ಲಿಯು ಬಿಸಿಲು ಸೆಖೆ ಸುರಿಯುತ್ತಿದೆ.  ಪರಿಣಾಮ ಮಲೆನಾಡಲ್ಲಿ ಬರದ ಆತಂಕ ಕಾಡುತ್ತಿದ್ದರೇ, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮಹಾ ಕೊರತೆ ಗ್ಯಾರಂಟಿನಾ ಎಂಬ ಪ್ರಶ್ನೆ ಕಾಡುತ್ತಿದೆ! 


BIG NEWS/ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರಿಂದ ಶಂಕಿತ ಶಾರೀಖ್​ನ ವಿಚಾರಣೆ ಮತ್ತು ಮಹಜರ್ ! ಕಾರಣವೇನು? ಯಾವ ಕೇಸ್​ನಲ್ಲಿ ಗೊತ್ತಾ?

ಶಿವಮೊಗ್ಗ ನಗರ ದೊಡ್ಡಪೇಟೆ ಪೊಲೀಸರು ಮಂಗಳೂರು ಕುಕ್ಕರ್ ಸ್ಫೋಟದ ಆರೋಪಿ ಶಂಕಿತ ಶಾರೀಖ್​ನನ್ನ ತಮ್ಮ ವಶಕ್ಕೆ ಪಡೆದು ಮಹಜರ್​ ನಡೆಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಾರೀಖ್​ನನ್ನ ಶಿವಮೊಗ್ಗಕ್ಕೆ ಕರೆದುಕೊಂಡು ಬಂದು ವಿಚಾರಣೆ ನಡೆಸಿರುವ ಪೊಲೀಸರು, ಹಳೆ ಶಿವಮೊಗ್ಗದ  ನಿಗದಿತ ಸ್ಥಳದಲ್ಲಿ ಮಹಜರ್​ ನಡೆಸಿದ್ದಾರೆ. 

ವಿನೋಬನಗರ ಪೊಲೀಸರಿಂದ ಬೆಂಗಳೂರಲ್ಲಿ ನಟಿಯ ಬಂಧನ! ಏನಿದು ಶಿವಮೊಗ್ಗ ಕೋರ್ಟ್ ಕೇಸ್? ನಡೆದಿದ್ದೇನು?

ಏನಿದು ಪ್ರಕರಣ?

2022 ಆಗಸ್ಟ್​ 15 ರಂದು ಶಿವಮೊಗ್ಗ ನಗರ ಅಮೀರ್ ಅಹಮದ್​ ಸರ್ಕಲ್​ನಲ್ಲಿ ವೀರಸಾವರ್ಕರ್​ ಪ್ಲೆಕ್ಸ್ ವಿಚಾರದಲ್ಲಿ ಗಲಾಟೆ ಆಗಿತ್ತು. ಈ ಸಂದರ್ಭದಲ್ಲಿ ಗಾಂಧಿಬಜಾರ್ ಸಮೀಪ ಪ್ರೇಮ್​ ಸಿಂಗ್ ಎಂಬಾತನಿಗೆ ಜಬಿವುಲ್ಲಾ ಸೇರಿದಂತೆ ನಾಲ್ವರು ಆರೋಪಿಗಳು ಚಾಕು ಇರಿದಿದ್ದರು. ಆನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಜಬಿಯನ್ನ ಅರೆಸ್ಟ್ ಮಾಡಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಪೊಲೀಸರು ಥಳಿಸಿದ್ದಕ್ಕೆ ಯುವಕನ ಆತ್ಮಹತ್ಯೆ!? ಹೊಳೆಹೊನ್ನೂರು PS ನಲ್ಲಿ ನಿಜಕ್ಕೂ ನಡೆದಿದ್ದೇನು? ದೂರಿನಲ್ಲಿ ಏನಿದೆ!?

ಬಂಧನದ ವೇಳೆ ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಇನ್ನೂ ಈತನ ವಿಚಾರಣೆ ವೇಳೆ ಶಂಕಿತ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ದೊಡ್ಡ ಬ್ರೇಕೌಟ್ ಸಿಕ್ಕಿತ್ತು. ತುಂಗಾ ತೀರದಲ್ಲಿ ರಾಷ್ಟ್ರಧ್ವಜ ಸುಟ್ಟಿದ್ದ ಕೇಸ್​ ಹಾಗೂ ಶಂಕಿತ ಶಾರೀಖ್​ನ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಸದ್ಯ ಪ್ರೇಮ್ ಸಿಂಗ್​ ಗೆ ಚಾಕು ಇರಿತದ ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸರು ಶಾರೀಖ್​ನನ್ನ ಕರೆದುಕೊಂಡು ಬಂದು ಸ್ಥಳ ಮಹಜರ್ ನಡೆಸಿದ್ದಾರೆ.