ವಿಡಿಯೋ ಕಾಲ್ ನ ‘ನಗ್ನ’ ಸತ್ಯ!​ ಮೈಸೂರು ಲೇಡಿ, ಹುಬ್ಬಳ್ಳಿ ಬಾಯ್ಸ್ ಭದ್ರಾವತಿಯಲ್ಲಿ ಅರೆಸ್ಟ್! ಹುಷಾರ್ ಹುಡುಗರೇ!

The Bhadravathi police have arrested a woman, including four youths from Hubballi, for allegedly making a video call to a youth from Shivamogga and abducting him to Mysuru

ವಿಡಿಯೋ ಕಾಲ್ ನ ‘ನಗ್ನ’ ಸತ್ಯ!​  ಮೈಸೂರು ಲೇಡಿ, ಹುಬ್ಬಳ್ಳಿ ಬಾಯ್ಸ್  ಭದ್ರಾವತಿಯಲ್ಲಿ ಅರೆಸ್ಟ್! ಹುಷಾರ್ ಹುಡುಗರೇ!

SHIVAMOGGA NEWS / ONLINE / Malenadu today/ Nov 21, 2023 NEWS KANNADA

Bhadravati | Malnenadutoday.com |  ಶಿವಮೊಗ್ಗ ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದಕ್ಕೆ ಮತ್ತೊಂದು ಕೇಸ್ ಸಾಕ್ಷಿಯಾಗಿದೆ. ತೀರ್ಥಹಳ್ಳಿ  ಹನಿ ಗ್ಯಾಂಗ್​ ಹಿಡಿದಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಮೈಸೂರು ವಾಟ್ಸ್ಯಾಪ್​ ಗ್ಯಾಂಗ್​ನ್ನ ಹಿಡಿದು ಅಂದರ್ ಮಾಡಿದೆ.. 

ಉಡುಪಿ ನಾಲ್ವರ ಕೊಲೆ ಪ್ರಕರಣ | ಶಿವಮೊಗ್ಗದ ವ್ಯಕ್ತಿಯ ವಿರುದ್ಧ ಸುಮೋಟೋ ಕೇಸ್! ಕಾರಣವೇನು ಗೊತ್ತಾ?

ಏನಿದು ಕೇಸ್​!? 

ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್​ ಪೊಲೀಸ್ ಸ್ಟೇಷನ್ (Hosamane Shivaji Circle Police Station ) ಪೊಲೀಸರು ನಾಲ್ವರು ಪುರುಷರನ್ನ ಹಾಗೂ ಓರ್ವ ಯುವತಿಯನ್ನ ಅರೆಸ್ಟ್ ಮಾಡಿದ್ದಾರೆ. ಐವರ ಪೈಕಿ ಯುವತಿ ಮೈಸೂರು ಮೂಲದವಳಾದರೆ, ಆರೋಪಿಗಳು ಹುಬ್ಬಳ್ಳಿ ಹಾಗೂ ರಾಯಚೂರು ಮೂಲದವರಾಗಿದ್ದಾರೆ. ‘

ಕುಂಸಿ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ‘

ನಡೆದಿದ್ದೇನು?

ಭದ್ರಾವತಿ ಮೂಲದ ಸಂತ್ರಸ್ತ ಕುಮಾರ (ಹೆಸರು ಬದಲಾಯಿಸಲಾಗಿದೆ ) ಎಂಬವರು ಒಂದುವರೆ ವರ್ಷದ ಹಿಂದೆ ಮೈಸೂರು ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿ ……. ಎಂಬಾಕೆ ಪರಿಚಯವಾಗಿದ್ದಾಳೆ. ತನ್ನ ನಗುವಿನಲ್ಲಿ ಸಂತ್ರಸ್ತನನ್ನ ಮನ ಮುಟ್ಟಿದ್ದ ಯುವತಿ  ವಾಟ್ಸ್ಯಾಪ್​  (whatsapp) ನಲ್ಲಿ ಸಲಿಗೆ ತೆಗೆದುಕೊಂಡು ತೀರಾ ಮುಂದುವರಿದಿದ್ದಾಳೆ. 

ಒಲಿದ ಹೆಣ್ಣಿನ ಮೋಸವನ್ನ ಅರಿಯದ ಕುಮಾರ ಆಕೆಯ ಬೆತ್ತಲೆ ದೇಹದ ವಿಡಿಯೋ ಕಾಲ್​ಗಳನ್ನ ಅನುಮಾನವಿಲ್ಲದೇ ನೋಡಿದ್ದರು. ಆದರೆ ಹೀಗೆ ತನ್ನೆದೆಲ್ಲವನ್ನು ತೋರಿಸಿದ ಯುವತಿ ಜಸ್ಟ್ 15 ದಿನ ಬಿಟ್ಟು ಸಂತ್ರಸ್ತರಿಗೆ ಒಂದು ಸ್ಕ್ರೀನ್​ ರೇಕಾರ್ಡೆಡ್ ವಿಡಿಯೋವನ್ನು ಕಳುಹಿಸಿದ್ದಾಳೆ. 

ವೈರಲ್​ ಬ್ಲಾಕ್​ಮೇಲ್​!

ಟ್ರ್ಯಾಪಿಂಗ್ ಬುದ್ದಿವಂತೆ ಗೊತ್ತಾಗಬಾರದೆಂದೆ ವಾಟ್ಸ್ಯಾಪ್​ ಕಾಲ್​ ಮಾಡಿ ಬೆದರಿಕೆ ಹಾಕಿದ್ದಾಳೆ.  ಸಲೀಸಾಗಿ ಡಿಮ್ಯಾಂಡ್​ ಇಟ್ಟು, ವೀಡಿಯೋ ವೈರಲ್ ಮಾಡುವ ಬ್ಲಾಕ್​ಮೇಲ್​ ಮಾಡಿದ್ದಾಳೆ. ಕುಮಾರರವರು ಎಚ್ಚೆತ್ತು ಪೊಲೀಸರಿಗೆ ಅಂದೇ ದೂರು ಕೊಟ್ಟಿದ್ದರೇ ಭದ್ರಾವತಿ ಪೊಲೀಸರು ಹನಿಟ್ರ್ಯಾಪ್​ ಹುಡುಗಿಯ ಜಾತಕ ಜಾಲಾಡುತ್ತಿದ್ದರು. 

ಆದರೆ ಮರ್ಯಾದೆಗೆ ಅಂಜಿದ ಸಂತ್ರಸ್ತರು, ಯುವತಿ ಅಕೌಂಟ್​ಗೆ, ಆಕೆ ಕೇಳಿದಾಗೆಲ್ಲಾ ದುಡ್ಡು ಹಾಕಿದ್ದಾರೆ. ಹೀಗೆ ಆರಂಭದಲ್ಲಿ  25 ಸಾವಿರ ರೂಪಾಯಿ ವಿಡಿಯೋ ಕಾಲ್​ ಹುಡುಗಿಯ ಪಾಲಾಗಿದೆ. ಕಾಸಿನ ಕಮಾಲು ಸುಮ್ಮನಿರಿಸುತ್ತಾ? ಖಂಡಿತಾ ಇಲ್ಲ.. ಇನ್ನಷ್ಟು ಬೇಕು ಮತ್ತಷ್ಟು ಬೇಕು ಎನ್ನುತ್ತಿದ್ದ ಯುವತಿ ಮತ್ತೊಂದು ವ್ಯೂಹ ಹೂಡಿದ್ದಾಳೆ. 

ಮೈಸೂರು ಟು ಶಿವಮೊಗ್ಗ

ಅಲ್ಲಿಯವರೆಗೂ ಮೈಸೂರಿನಿಂದಲೇ ಸಲಿಗೆಯ ಸುಲಿಗೆ ನಡೆಸ್ತಿದ್ದ ಯುವತಿ ಕಳೆದ 17 ರಂದು ಶಿವಮೊಗ್ಗಕ್ಕೆ ಬಂದಿದ್ದಾಳೆ. ಶಿವಮೊಗ್ಗ ಬಸ್​ ನಿಲ್ದಾಣಕ್ಕೆ ಬಂದು ಸಂತ್ರಸ್ತರನ್ನ ಕರೆಸಿಕೊಂಡಿದ್ದಾಳೆ..ಅಷ್ಟೊತ್ತಿಗೆ ಮಧ್ಯರಾತ್ರಿಗೆ ಕೆಲವೆ ನಿಮಿಷಗಳು ಬಾಕಿ ಇದ್ದವು. ಅಲ್ಲಿಂದ ದೂರುದಾರರನ್ನ ಕರೆದುಕೊಂಡು ಶಿವಮೊಗ್ಗದ ಪ್ರತಿಷ್ಟಿತ ಹೋಟೆಲ್ ಒಂದಕ್ಕೆ ಕರೆದೊಯ್ದ ಯುವತಿ ಅಲ್ಲಿ ಸಂತ್ರಸ್ತನನ್ನ ಹಾಗೂ ಆತನ ಸ್ನೇಹಿತನನ್ನು ಸಹ ಕಿಡ್ನ್ಯಾಪ್ ಮಾಡಿಸಿದ್ದಾಳೆ. 

ಹೋಟೆಲ್​ನ ರೂಂನಲ್ಲಿದ್ದ ಇಬ್ಬರನ್ನ ದಿಢೀರ್​ ಎಂಬಂತೆ ಬಂದ ನಾಲ್ವರು ಆರೋಪಿಗಳು ದೂರುದಾರರು ಹಾಗೂ ಆತನ ಜೊತೆಗಿದ್ದ ಸ್ನೇಹಿತನನ್ನ ಡಸ್ಟರ್ ಕಾರಿನಲ್ಲಿ ತುಂಬಿಕೊಂಡು ಮೈಸೂರಿಗೆ ಕರೆದೊಯ್ದಿದ್ದಾರೆ. ಅಲ್ಲಿ ಮತ್ತೆ ಹನಿಟ್ರ್ಯಾಪ್​ ಹುಡುಗಿಯ ಜೊತೆ ರೂಮೊಂದರಲ್ಲಿ ಕೂರಿಸಿ, ಇಬ್ಬರಿಂದಲೂ ವಿಡಿಯೋ ಹೇಳಿಕೆ ಮಾಡಿಕೊಂಡಿದ್ದಾರೆ. 

25 ಲಕ್ಷಕ್ಕೆ ಅಗ್ರಿಮೆಂಟ್!

ತಮಗೆ ಬೇಕಾದ ಹಾಗೆ ವಿಡಿಯೋ ರೆಕಾರ್ಡ್ ಮಾಡಿಕೊಂಡ ಆರೋಪಿಗಳು 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಮತ್ತೆ ಹೆದರಿದ ದೂರುದಾರರು ಹಾಗೂ ಅವರ ಸ್ನೇಹಿತರಿಂದ 20 ಸಾವಿರ ವಸೂಲಿ ಮಾಡಿದ್ದಾರೆ. ಬಳಿಕ  25 ಲಕ್ಷ ಸಾಲ ಪಡೆದಿದ್ದು 25 ಕ್ಕೆ ವಾಪಸ್ ಕೊಡುತ್ತೇನೆ ಎಂದು ಅಗ್ರಿಮೆಂಟ್​ವೊಂದನ್ನು ರೆಡಿಮಾಡಿಸಿ ಅದಕ್ಕೆ ಸಹಿಯನ್ನು ಸಹ ಹಾಕಿಸಿಕೊಂಡಿದ್ದಾರೆ. 

ಇಷ್ಟೆಲ್ಲಾ ಆದ ಬಳಿಕ ಆರೋಪಿಗಳಿಂದ ತಪ್ಪಿಸಿಕೊಂಡ ಇಬ್ಬರು ಸ್ನೇಹಿತರ ಪೈಕಿ ದೂರುದಾರರು ಭದ್ರಾವತಿ ಪೊಲೀಸರ ಮೊರೆಹೋಗಿ ಎಲ್ಲಾ ವಿಚಾರ ತಿಳಿಸಿದ್ದಾರೆ. ವಿಷಯವನ್ನ ಅಷ್ಟೆ ಸೀರಿಯಸ್ ಆಗಿ ತೆಗೆದುಕೊಂಡ ಭದ್ರಾವತಿ ಶಿವಾಜಿ ಸರ್ಕಲ್​ ಪೊಲೀಸ್ ಸ್ಟೇಷನ್​ನ ಪೊಲೀಸರು ಕಲಂ 323, 342, 386, 388, 504, 506 , 149 ಅಡಿಯಲ್ಲಿ ಕೇಸ್ ದಾಖಲಿಸಿ, ಹನಿ ಮೇಡಂನ್ನ ಹುಡುಕಿಕೊಂಡು ಹೊರಟಿದ್ದಾರೆ. 19 ಕ್ಕೇ ಕೇಸ್ ದಾಖಲಾಗಿತ್ತು. ದಿನ ಕಳೆಯುವಷ್ಟರಲ್ಲಿ ಎಲ್ಲಾ ಆರೋಪಿಗಳು ಭದ್ರಾವತಿ ಪೊಲೀಸ್ ಸ್ಟೇಷನ್ ಸೆಲ್​ನಲ್ಲಿದ್ದರು. 

ಬಂಧಿತರು?

  • 1) ಶ್ವೇತಾ 26 ವರ್ಷ. ವಾಸ: ಇಟ್ಟಿಗೆ ಗೂಡು.. ಮೈಸೂರು.

  • 2) ವಿನಾಯಕ @ ವಿನಯ್  26 ವರ್ಷ.ವಾಸ: ಹುಬ್ಬಳ್ಳಿ ನಗರ. 

  • 3) ಮಹೇಶ , 27 ವರ್ಷ, ವಾಸ: ಹುಬ್ಬಳ್ಳಿ ನಗರ.

  • 4) ಅರುಣ್ ಕುಮಾರ 28 ವರ್ಷ, ಕುರುಬ ಜಾತಿ, ವಾಸ ಕೆಸಿ ಪಾರ್ಕ. ನವ ಅಯೋದ್ಯನಗರ, 2ನೇ ಕ್ರಾಸ್, ವಾಟರ್ ಟ್ಯಾಂಕ್ ಹತ್ತಿರ, ಹುಬ್ಬಳ್ಳಿ

  • 5) ಹೇಮಂತ ಸಾಯಿ, 24 ವರ್ಷ, ವಾಸ: ಸಿಂದನೂರು, ರಾಯಚೂರು ಜಿಲ್ಲೆ

ಆರೋಪಿಗಳ ಜೊತೆ ಜೊತೆಗೆ ಕೃತ್ಯಕ್ಕೆ ಬಳಸಿದ ಡಸ್ಟರ್ ಕಾರನ್ನ ಸಹ ವಶಕ್ಕೆ ಪಡೆಯಲಾಗಿದೆ. ಸಿಂಗಲ್​ ಮ್ಯಾಟರ್​ ಸಹ ಹೊರಕ್ಕೆ ಬರದಂತೆ, ಪ್ರಕರಣವನ್ನು ಪೊಲೀಸರು ಭೇದಿಸಿದ್ದು ವಿಶೇಷ  ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಪಿಎಸ್‌ಐ ಆರ್ ಹೆಚ್ ಸಂಗೊಳ್ಳಿ ಹಳೇನಗರ ಪೊಲೀಸ್ ಠಾಣೆಯ ಪಿಎಸ್‌ಐ ಶರಣಪ್ಪ ಹಂಡ್ರಗಲ್ ಸಿಬ್ಬಂದಿಗಳಾದ ಆದರ್ಶ ಶೆಟ್ಟಿ. ಲೋಹಿತ್ ಹೆಚ್ ಪಿ, ಸುನೀತಾ, ಹನಮಂತ ಅಮಾತಿ, ತೇಜಕುಮಾರ ಈ ತನಿಖೆಯಲ್ಲಿದ್ರು.