ತುಮಕೂರಿಗೆ ಮಗಳನ್ನು ಬಿಡಲು ಹೊರಟಿದ್ದಾಗ ಹೊನ್ನಾಳಿ ರಸ್ತೆಯಲ್ಲಿ ನಡೀತು ದುರಂತ | ಶಿಕಾರಿಪುರದ ತಂದೆ ಮಗಳ ಸಾವು

Car on its way to Tumakuru collides with tractor on Honnali Road | Father-daughter death in Shikaripura

ತುಮಕೂರಿಗೆ ಮಗಳನ್ನು ಬಿಡಲು ಹೊರಟಿದ್ದಾಗ ಹೊನ್ನಾಳಿ ರಸ್ತೆಯಲ್ಲಿ ನಡೀತು ದುರಂತ | ಶಿಕಾರಿಪುರದ ತಂದೆ ಮಗಳ ಸಾವು
Shikaripura, car collides with tractor , Honnali Road, Tumakuru

SHIVAMOGGA | MALENADUTODAY NEWS | May 12, 2024  

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಹೊನ್ನಾಳಿ ರಸ್ತೆಯಲ್ಲಿ ನಿನ್ನೆ ಶನಿವಾರ ಕಾರು ಹಾಗೂ ನೀರಿನ ಟ್ಯಾಂಕರ್‌ ಸಾಗಿಸ್ತಿದ್ದ ಟ್ರ್ಯಾಕ್ಟರ್‌ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 

ಶಿಕಾರಿಪುರ ತಾಲ್ಲೂಕು ಸಿದ್ದನಪುರದಲ್ಲಿ ಈ ಘಟನೆ ಸಂಭವಿಸಿದೆ. ಶಿಕಾರಿಪುರ ನಿವಾಸಿ ಸೈಯ್ಯ ಎಂಬವರು ತಮ್ಮ ಮಗಳನ್ನು ತುಮಕೂರಿನ ವಸತಿಶಾಲೆಯೊಂದಕ್ಕೆ ಸೇರಿಸಲು ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಕಾರು ಸಿದ್ದನಪುರ ಗ್ರಾಮದ ಸಮೀಪ ಬರುತ್ತಿದ್ದಾಗ ಟ್ರ್ಯಾಕ್ಟರ್‌ ಹಾಗೂ ಕಾರಿನ ನುಡವೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ತಂದೆ ಹಾಗೂ ಮಗಳು ಸಾವನ್ನಪ್ಪಿದ್ದಾರೆ. ಇನ್ನೂ ಕಾರಿನಲ್ಲಿದ್ದ ಉಳಿದವರಿಗೆ ಗಾಯಗಳಾಗಿದ್ದು ಅವರನ್ನ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಅಡ್ಮಿಟ್‌ ಮಾಡಲಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.