ಇನ್ನೂ ನಾಲ್ಕು ದಿನಗಳ ಮಲೆನಾಡಲ್ಲಿ ಭಾರೀ ವರ್ಷಧಾರೆ | ಹವಾಮಾನ ಇಲಾಖೆ ಮನ್ಸೂಚನೆಯಲ್ಲಿ ಏನಿದೆ

weather department has predicted rain in the Malnad and coastal districts of Karnataka

ಇನ್ನೂ ನಾಲ್ಕು ದಿನಗಳ ಮಲೆನಾಡಲ್ಲಿ ಭಾರೀ ವರ್ಷಧಾರೆ | ಹವಾಮಾನ ಇಲಾಖೆ ಮನ್ಸೂಚನೆಯಲ್ಲಿ ಏನಿದೆ
Malnad and coastal districts of Karnataka

SHIVAMOGGA | MALENADUTODAY NEWS | Jul 4, 2024  ಮಲೆನಾಡು ಟುಡೆ   

ಹವಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮಲೆನಾಡು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಜುಲೈ 8 ವರೆಗೂ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ನೀಡಲಾಗಿದೆ. ಮಲೆನಾಡು ಶಿವಮೊಗ್ಗದಲ್ಲಿಯು ಹಳದಿ ಮನ್ಸೂಚನೆ  ನೀಡಲಾಗಿದೆ. 

ಇನ್ನೂ ರಾಜ್ಯ ಸರ್ಕಾರದ ಪ್ರಕಟಣೆಯ ಪ್ರಕಾರ,  ರಾಜ್ಯದ ಕರಾವಳಿ, ಮಲೆನಾಡು ಹಾಗೂ ಮಲೆನಾಡಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಅಲ್ಲಲ್ಲಿ ಅಧಿಕ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಜಿಲ್ಲೆಗಳ ಅಲ್ಲಲ್ಲಿ ಚದುರಿದಂತೆ ವ್ಯಾಪಕವಾಗಿ ಹಗುರ ಮಳೆಯಾಗಲಿದೆ.



weather department has predicted rain in the Malnad and coastal districts of Karnataka until July 8th. A yellow alert has been issued for these districts, including Shivamogga. The state government has also announced that widespread light to moderate rain is expected in coastal, Malnad, and adjoining districts, with heavy to very heavy rainfall in some areas. Light to moderate rain is expected in some parts of northern inland districts, with heavy rain in some places. Scattered light rain is expected in southern inland districts.