ಝಿಕಾ ವೈರಸ್‌ ಅಪಾಯಕಾರಿಯೆ? ಹೇಗೆ ಹರಡುತ್ತದೆ? ಲಕ್ಷಣವೇನು? ಕುತೂತಲಕಾರಿ ಅಂಶ ಇಲ್ಲಿದೆ

ಝಿಕಾ ವೈರಸ್‌ ಎಂದರೇ ಏನು? ಅದರ ಲಕ್ಷಣಗಳೇನು? ಹೇಗೆ ಹರಡುತ್ತದೆ ಎಂಬಿತ್ಯಾದಿ ಬಗೆಗಿನ ಮಾಹಿತಿ ಇಲ್ಲಿದೆ

ಝಿಕಾ ವೈರಸ್‌ ಅಪಾಯಕಾರಿಯೆ? ಹೇಗೆ ಹರಡುತ್ತದೆ? ಲಕ್ಷಣವೇನು? ಕುತೂತಲಕಾರಿ ಅಂಶ ಇಲ್ಲಿದೆ
ಝಿಕಾ ವೈರಸ್‌

SHIVAMOGGA | MALENADUTODAY NEWS | Jul 6, 2024  ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಡೆಂಗ್ಯೂ ಭೀತಿ ವಿಪರೀತವಾಗಿದೆ, ಇದು ಸಾಲದು ಎಂದು ಇದೀಗ ಝಿಕಾ ವೈರಸ್‌ ಶುರುವಾಗಿದೆ. ಜಿಲ್ಲೆಯಲ್ಲಿ ಎರಡು ಶಂಕಿತ ಪ್ರಕರಣಗಳು ದಾಖಲಾಗಿರುವ ಬಗ್ಗೆ ಇವತ್ತು ಮಾಹಿತಿ ಹೊರಬಿದ್ದಿದೆ. ಇನ್ನೂ ಏನಿದು ಝಿಕಾ ವೈರಸ್‌ ಹೇಗೆ ತಗಲುತ್ತದೆ ಎಂಬುದನ್ನ ಗೂಗಲ್‌ ಮಾಡಿ ನೋಡಿದರೆ ಹಲವು ವಿಚಾರಗಳು ಲಭ್ಯವಾಗುತ್ತದೆ. 

 ಝಿಕಾ ವೈರಸ್‌ ಅಂದರೆ ಏನು?

ಝಿಕಾ ವೈರಸ್‌ ಎಂಬುದು ಈಡಿಸ್‌ ಹಾಗೂ ಈಡಿಸ್‌ ಅಲ್ಬೋಪಿಕ್ಟಸ್‌ ಎಂಬ ಜಾತಿಯ ಸೊಳ್ಳೆಗಳಿಂದ ಬರುವಂತ ಡೆಂಗ್ಯೂ ರೀತಿಯದ್ದೆ ಆದ ಜ್ವರವಾಗಿದೆ. ಈ ವೈರಸ್‌ ಪರಾವಲಂಬಿ ಜೀವಿಯಾಗಿದ್ದೂ, ಸೊಳ್ಳೆಗಳ ಮೂಲಕ ದೇಹ ಸೇರಿದಾಗ ಅಲ್ಲಿ ತನ್ನ ಉತ್ಪತ್ತಿಯನ್ನು ಜಾಸ್ತಿ ಮಾಡಿಕೊಳ್ಳುತ್ತದೆ. ಆಗ ಮನುಷ್ಯ ಕಾಯಿಲೆ ಬೀಳುತ್ತಾನೆ. 

ಗರ್ಭಿಣಿಯರಿಗೆ ಹೆಚ್ಚು ಅಪಾಯ

ವಿಶೇಷ ಅಂದರೆ ಈ ಸೋಂಕು ತಗುಲಿದೆ ಎಂಬುದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಆದರೆ ಗರ್ಭಿಣಿಯರಿಗೆ ಈ ಸೋಂಕು ಚೂರು ಜಾಸ್ತಿ ಅಪಾಯ ಉಂಟು ಮಾಡುತ್ತದೆ. ಬ್ರೂಣದಲ್ಲಿರುವ ಮಗುವಿನ ಬೆಳವಣಿಗೆಗೆ ಅಡ್ಡಿ ಉಂಟುಮಾಡುತ್ತದೆಯಂತೆ. 

ಝಿಕಾ ವೈರಸ್‌  ಲಕ್ಷಣಗಳೇನು?

ಹತ್ತು ವರ್ಷಗಳ ಹಿಂದೆ ಅಮೆರಿಕಾದಲ್ಲಿ ಹಲ್‌ಚಲ್‌ ಉಂಟುಮಾಡಿದ್ದ ವೈರಸ್‌ ಇದೀಗ ಶಿವಮೊಗ್ಗದಲ್ಲಿ ಕಾಣಿಸಿಕೊಂಡಿದೆ. ಈ ಸೋಂಕು ತಗುಲಿದವರ ಪೈಕಿ ಕೆಲವರಿಗೆ ಜ್ವರ, ತಲೆನೋವು, ಮಂಡಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಕಣ್ಣು ಕೆಂಪಾಗುವ ಸಾಧ್ಯತೆ ಇರುತ್ತದೆ. ಚರ್ಮದಲ್ಲಿ ದದ್ದಾಗುವ ಸಾಧ್ಯತೆ ಇರುತ್ತದೆ. ತಿಳಿದುಕೊಳ್ಳಬೇಕಾದ ಮಾಹಿತಿ ಅಂದರೆ ಈ ಸೋಂಕು ಪ್ರಾಣಹಾನಿ ಮಾಡುವುದಿಲ್ಲ ಎನ್ನುತ್ತದೆ ವೈದ್ಯಲೋಕ 

ಲೈಂಗಿಕ ಕ್ರಿಯೆಯಿಂದಲೂ ಹರಡುತ್ತೆ

ಇನ್ನೂ ಕೇವಲ ಸೊಳ್ಳೆ ಕಡಿಯುವುದರಿಂದಷ್ಟೆ ಅಲ್ಲದೆ ಈ ವೈರಸ್‌ ಸೋಂಕಿತ ವ್ಯಕ್ತಿಯ ಜೊತೆಗಿನ ಮಿಲನದಿಂದಲೂ ಇನ್ನೊಬ್ಬರಿಗೆ ಹಡರುತ್ತದೆ. ಅಥವಾ ಸೋಂಕಿತ ವ್ಯಕ್ತಿಯನ್ನ ಕಚ್ಚಿದ ಸಾಮಾನ್ಯ ಸೊಳ್ಳೆ ಇನ್ನೊಬ್ಬರಿಗೆ ಕಚ್ಚುವುದರಿಂದಲೂ ಹರಡುತ್ತದೆ.  ಸೋಂಕಿತ ವ್ಯಕ್ತಿಯಿಂದ ರಕ್ತ ವರ್ಗಾವಣೆ ಆದರೂ ಈ ಸೋಂಕು ತಗಲುವ ಸಾಧ್ಯತೆ ಇರುತ್ತದೆ. 

 

Two suspected cases of the Zika virus have been reported in Shivamogga, India. Zika is a mosquito-borne virus similar to dengue fever. It is spread by the Aedes and Aedes albopictus species of mosquitoes.Symptoms of Zika include fever, headache, joint pain, red eyes, and skin rashes.