ಬಿಎಸ್‌ ಯಡಿಯೂರಪ್ಪರಿಗೆ ಸಮನ್ಸ್‌, ಜುಲೈ 15 ರಂದು ಕೋರ್ಟ್‌ಗೆ ಖುದ್ದು ಹಾಜರಾಗಬೇಕು!

Former Chief Minister B.S. Yediyurappa and three other accused individuals have been summoned by the Bangalore POCSO Special Court

ಬಿಎಸ್‌ ಯಡಿಯೂರಪ್ಪರಿಗೆ ಸಮನ್ಸ್‌,  ಜುಲೈ 15 ರಂದು ಕೋರ್ಟ್‌ಗೆ ಖುದ್ದು ಹಾಜರಾಗಬೇಕು!
Former Chief Minister B.S. Yediyurappa , ಬಿಎಸ್‌ ಯಡಿಯೂರಪ್ಪರಿಗೆ ಸಮನ್ಸ್‌, ಪೋಕ್ಸೋ ಕೇಸ್‌

SHIVAMOGGA | MALENADUTODAY NEWS | Jul 5, 2024  ಮಲೆನಾಡು ಟುಡೆ   

ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಇದೇ ಜುಲೈ 15ರಂದು ವಿಚಾರಣೆಗೆ ಹಾಜರಾಗುವಂತೆ  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪ್ರಕರಣದ ಇತರೆ ಮೂವರು ಆರೋಪಿಗಳಿಗೆ  ಬೆಂಗಳೂರು ನಗರದ ಪೋಕ್ಸೋ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಮಾಡಿದೆ 

ಕಳೆದ ಜೂನ್ 27ರಂದು‌ ಈ ಕುರಿತಾಗಿ  ಯಡಿಯೂರಪ್ಪ ವಿರುದ್ಧ ಸಿಐಡಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಸದ್ಯ ಇದರ ವಿಚಾರಣೆ   51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ 1ನೇ ತ್ವರಿತಗತಿ ನ್ಯಾಯಾಲಯದ (ಪೋಕ್ಲೋ  ಕೋರ್ಟ್) ನಲ್ಲಿ ನಡೆಯುತ್ತಿದೆ. 

ಯಡಿಯೂರಪ್ಪ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ–2012ರ ಕಲಂ 8ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ, ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 354 (ಎ) ಅಡಿಯಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಲಾಗಿದೆ. ಅವರ ಸಹಚರರಾದ ಇತರ ಮೂವರ ವಿರುದ್ಧ ಐಪಿಸಿ ಕಲಂ 204 ಮತ್ತು 214ರ ಅಡಿಯಲ್ಲಿ ಸಾಕ್ಷ್ಯ ನಾಶ  ಮತ್ತು ಆಮಿಷವೊಡ್ಡಿದ ಆರೋಪ ಹೊರಿಸಲಾಗಿದೆ. 

 

Former Chief Minister B.S. Yediyurappa and three other accused individuals have been summoned by the Bangalore POCSO Special Court to appear on July 15th in connection with sexual harassment charges. The CID police filed a chargesheet against Yediyurappa on June 27th, and the case is currently being heard in the 51st Civil and Additional Sessions Court and 1st Fast Track Court (POCSO Court).