ಧರ್ಮಸ್ಥಳ ಸಂಘದ ಯುವತಿ ಮತ್ತು ಮಣಿಕಂಠ | ಆಗುಂಬೆಯಲ್ಲಿ ನಡೆದಿದ್ದೇನು? ನಾಪತ್ತೆ ಕೇಸ್‌, ಕೊಲೆಯಾಗಿದ್ದೇಗೆ?

Full details of a woman's co-case in Agumbe

ಧರ್ಮಸ್ಥಳ ಸಂಘದ ಯುವತಿ ಮತ್ತು ಮಣಿಕಂಠ | ಆಗುಂಬೆಯಲ್ಲಿ ನಡೆದಿದ್ದೇನು? ನಾಪತ್ತೆ ಕೇಸ್‌, ಕೊಲೆಯಾಗಿದ್ದೇಗೆ?
agumbe case

SHIVAMOGGA | MALENADUTODAY NEWS | Jul 8, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆಯಲ್ಲಿ ಧರ್ಮಸ್ಥಳ ಸಂಘಕ್ಕೆ ಹೋಗಬೇಕಿದ್ದ ಯುವತಿ  ನಾಪತ್ತೆ ಎಂಬ ಸುದ್ದಿಯನ್ನು ಇದೇ ಮಲೆನಾಡು ಟುಡೆ ಯಲ್ಲಿ ಓದಿರುತ್ತೀರಿ ಇದೀಗ ಈ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ತಾರ್ಕಿಕ ಅಂತ್ಯಕ್ಕೆ ತಂದಿದ್ದಾರೆ. ನಾಪತ್ತೆ ಕೇಸ್‌ ಕೊಲೆಯ ಕೇಸ್‌ನಲ್ಲಿ ಕೊನೆಯಾಗಿದೆ. ಇಷ್ಟಕ್ಕೂ ನಡೆದಿದ್ದು ಏನು ಎಂಬುದನ್ನ ನೋಡುವುದಾದರೆ. 

Agumbe murder story

ಧರ್ಮಸ್ಥಳ ಸಂಘದ ಕೆಲಸಕ್ಕೆ ಅಂತಾ ಹೋದ ಯುವತಿ ಆಗುಂಬೆಯಿಂದ ಮಿಸ್ಸಿಂಗ್!‌

 

ಕಳೆದ ಜೂನ್‌ ಮೂವತ್ತರಂದು ಮನೆಯಿಂದ ಹೋಗಿದ್ದ ಯುವತಿ ವಾಪಸ್‌ ಬಂದಿಲ್ಲ ಅಂತಾ ಕುಟುಂಬಸ್ಥರು ಕಂಪ್ಲೆಂಟ್‌ ಕೊಟ್ಟಿದ್ದರು. ಆನಂತರ ಜುಲೈ ಎರಡಕ್ಕೆ ಪೊಲೀಸ್‌ ಪ್ರಕಟಣೆ ಹೊರಬಿದ್ದಿತ್ತು. ಮಾಧ್ಯಮಗಳು ನಾಪತ್ತೆ ಪ್ರಕರಣವನ್ನು ವರದಿ ಮಾಡಿದ್ದವು. ಆದರೆ ಪ್ರಕರಣ ಬರಬರುತ್ತಾ ಬೇರೆಯದ್ದೆ ಸ್ವರೂಪ ಪಡೆದುಕೊಂಡಿತ್ತು. ಎರಡು ದಿನಗಳ ಹಿಂದೆ ಅಂದರೆ ಮೊನ್ನೆ ದಿನ ಆಗುಂಬೆಯ  ನಾಲೂರು-ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಮನೆ ಎಂಬ ಗ್ರಾಮದ ಕಾಡಿನಲ್ಲಿ ಯುವತಿಯೊಬ್ಬಳ ಶವ  ಶನಿವಾರ ರಾತ್ರಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ಶವವನ್ನು ನೋಡಿದ ಪೊಲೀಸರಿಗೆ ಇದು ಕಾಣೆಯಾದ ಪೂಜಾ ಎ.ಕೆ. (24) ಎಂದು ಗುರುತಿಸಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಏಕೆಂದರೆ, ಮೃತದೇಹ ಅಲ್ಲಿದೆ ಎಂದು ತೋರಿಸಿದ್ದೆ ಕೊಲೆಗಾರ ನಾಗಿದ್ದ. ಆಗುಂಬೆ ಪೊಲೀಸ್‌ ಠಾಣೆ ಪೊಲೀಸರು ಅಪರೂಪಕ್ಕೆ ಎದುರಾದ ಕೊಲೆ ಕೇಸ್‌ನ್ನ ಬಗೆಹರಿಸಿದ್ದರು. ಅದರ ವಿವರ ಹೀಗಿದೆ. 

Agumbe murder story

 

ನಾಲೂರಿನ ಮಣಿ ಕಂಠ ಎಂಬಾಂತ ವಿವಾಹಿತ ಮಹಿಳೆ ಪೂಜಾಳನ್ನ ಇಷ್ಟಪಟ್ಟಿದ್ದ. ಆಕೆಗೆ ಮದುವೆಯಾಗಿದ್ದರೂ ಸಂಸಾರದಿಂದ ದೂರವಿದ್ದಳು. ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಮಣಿಕಂಠ ಹತ್ತಿರವಾಗಿದ್ದ. ಹೀಗೆ ಕೆಲವು ದಿನಗಳು ನಡೆದಿತ್ತು. ಈ ನಡುವೆ ಪೂಜಾ ಅವೈಡ್‌ ಮಾಡುತ್ತಿದ್ದಾಳೆ ಎಂದು ಮಣಿಕಂಠನಿಗೆ ಅನಿಸಿತ್ತು. ಅದರ ನಡುವೆ ಮಣಿಕಂಠನ ಪೂಜಾಳ ಹುಟ್ಟುಹಬ್ಬದ ದಿನ ಕೇಕ್‌ ಕೊಡಿಸಿದ್ದ. ಆ ಕೇಕ್‌ನ್ನ ಕತ್ತರಿಸಿದ ಯುವತಿ ಮಣಿಕಂಠನಿಗೆ ಬದಲಾಗಿ ಇನ್ನೊಬ್ಬನಿಗೆ ತಿನ್ನಿಸಿದ್ದಳು. ಇದು ಮಣಿಕಂಠನ ಹೊಟ್ಟೆಯಲ್ಲಿ ಕೆಂಡ ಸುಡಲು ಆರಂಭವಾಗಿದೆ. ಇದೇ ಕಾರಣಕ್ಕೆ ಪೂಜಾಳ ಅಂತ್ಯಕ್ಕೆ ಮುಹೂರ್ತ ನಿಗದಿ ಪಡಿಸಿದ ಮಣಿಕಂಡ ಕಳೆದ ಜೂನ್‌ 30 ರಂದು ಆಕೆಯನ್ನು ಕರೆದುಕೊಂಡು ಕವಲೇಗುಡ್ಡಕ್ಕೆ ಕರೆದೊಯ್ದು ಅವಳ ಕುತ್ತ ಹಿಸುಕಿ ಕೊಲೆ ಮಾಡಿ ಶವವನ್ನ ತಗ್ಗಿಗೆ ಬಿಸಾಡಿ ಬಂದಿದ್ದ. ಆ ಬಳಿಕ ಏನೂ ಸಹ ಗೊತ್ತಿಲ್ಲವೆಂಬಂತಿದ್ದ. ಅಲ್ಲದೆ ತನಗೆ ಕೊಡಬೇಕಾದ ದುಡ್ಡು ವಾಪಸ್‌ ಕೊಡು ಎಂದು ಪೂಜಾಳ ಮೊಬೈಲ್‌ಗೆ ಸಾಲು ಸಾಲು ಮೆಸೇಜ್‌ ಹಾಕಿದ್ದ. 

Agumbe murder story

 

ಇತ್ತ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಸಿಡಿಆರ್‌ ತೆಗೆಸಿದ್ದರು. ಪೂಜಾಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಯಾರಿದ್ದರೂ ಎಂದು ನೋಡಿದ ಪೊಲೀಸರಿಗೆ ಮಣಿಕಂಠನ ನಂಬರ್‌ ಸಿಕ್ಕಿದೆ ತಕ್ಷಣ ಆತನ ಹೆಗಲಿಗೆ ಕೈ ಹಾಕದ ಪೊಲೀಸರು ಮಣಿಕಂಠನ ಸ್ನೇಹಿತನೋರ್ವನ ಮೇಲೆ ಅನುಮಾನಗೊಂಡು ಆತನನ್ನ ವಿಚಾರಿಸಿದ್ದರು. ಆ ವೇಳೆ ಮಣಿಕಂಠನ ವಿವರ ತಿಳಿದುಕೊಂಡು ಪೊಲೀಸರು ಆತನನ್ನ ಕರೆತಂದು ಆತಿಥ್ಯ ನೀಡಿದ್ದಾರೆ. ಆಗುಂಬೆ ಘಾಟಿಯ ತುದಿಯಲ್ಲಿರುವ ಪೊಲೀಸ್‌ ಸ್ಟೇಷನ್‌ನಲ್ಲಿ ನಡೆದ ಪೊಲೀಸ್‌ ಟ್ರೀಟ್ಮೆಂಟ್‌ನಲ್ಲಿ ಮಣಿಕಂಠ ನಡೆದಿದ್ದೆಲ್ಲವನ್ನು ಬಾಯ್ಬಿಟ್ಟಿದ್ದಾನೆ. 

Agumbe murder story

 

ವಿಚಾರ ತಿಳಿಯುತ್ತಲೇ ಮಣಿಕಂಠನನ್ನ ಜೊತೆಗೆ ಕರೆದುಕೊಂಡು ಹೋಗಿ ಪೊಲೀಸರು ಮೃತದೇಹವನ್ನು ಪತ್ತೆ ಮಾಡಿ, ಅದನ್ನ ಎಫ್‌ಎಸ್‌ಎಲ್‌ ಹಾಗೂ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

Agumbe murder story

 

ಮಣಿಕಂಠ ಪೂಜಾ ಕಾಣೆಯಾದಗಿನಿಂದ ಅವರ ಕುಟುಂಸ್ಥರ ಜೊತೆಗೆ ಓಡಾಡಿಕೊಂಡಿದ್ದ. ತನ್ನ ಕೃತ್ಯ ಹೇಗೆ ಬಯಲಾಗುತ್ತದೆ, ಅದರ ಸುಳಿವು ಪೊಲೀಸರಿಗೆ ಹೇಗೆ ಸಿಗುತ್ತದೆ ಎಂದು ಸೂಕ್ಷ್ಮ ಗಮನಿಸ್ತಿದ್ದ ಆತ. ಹೊಸಹೊಸ ಪ್ಲಾನ್‌ ಮಾಡುತ್ತಿದ್ದ. ಆದರೆ ಪೊಲೀಸರು ಒಂದೇ ಸುಳಿವಿನಲ್ಲಿ ಆತನ ಬೆನ್ನು ಬಿದ್ದಿದ್ದರು. ಇದನ್ನ ಗಮನಿಸಿದೇ ಮಣಿಕಂಠ ಖಾಕಿ ತೋಡಿದ ಗುಂಡಿಗೆ ಬಿದ್ದಿದ್ದ. ಆದರೆ ತನ್ನನ್ನ ಅವೈಡ್‌ ಮಾಡುತ್ತಾಳೆ ಎಂಬ ವಿಚಾರಕ್ಕೆ ಜಿದ್ದಿಗೆ ಬಿದ್ದು ಜಗಳವಾಡಿ ಯುವತಿಯನ್ನ ಕೊಂದಿದ್ದು ನಿಜಕ್ಕೂ ಅಮಾನುಷ