ಆಗುಂಬೆ | ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು

worker was struck and killed by lightning while working in an areca nut orchard in Bidaragodu village, Agumbe, Thirthahalli taluk, Shivamogga district.  

ಆಗುಂಬೆ | ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು
Bidaragodu village, Agumbe, Thirthahalli taluk, Shivamogga district

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪದ ಬಿದರಗೋಡು ಗ್ರಾಮದ ಗುಜುಗೊಳ್ಳಿ ಎಂಬಲ್ಲಿ ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರಿಗೆ ಸಿಡಿಲು ಬಡಿದ ಪರಿಣಾಮ ಅವರು ಸ್ಥಳದಲ್ಲಿ ಮೃತರಾಗಿದ್ದಾರೆ. 

ನಾಗೇಂದ್ರ (45) ಮೃತರಾದ ದುರ್ದೈವಿ. ಆಗುಂಬೆ ಭಾಗದಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ಭಾರಿ ಮಳೆಯಾಗುತ್ತಿದೆ. ಗುಜಗೊಳ್ಳಿ ಕೇಶವ ಕಿಣಿ ಎಂಬವರ ಅಡಕೆ ತೋಟದಲ್ಲಿ ಕೆಲಸ ಮಾಡುವ ವೇಳೆ ಮರಕ್ಕೆ ಬಡಿದ ಸಿಡಿಲು ಸಮೀಪದಲ್ಲಿದ್ದ ನಾಗೇಂದ್ರರಿಗೆ ತಾಗಿ ಅವರು ಸ್ಥಳದಲ್ಲೇ ಮೃತರಾಗಿದ್ದಾರೆ. 

ಇವರೊಂದಿಗೆ ಇನ್ನೂ ಮೂರ್ನಾಲ್ಕು ಮಂದಿ ಕೆಲಸ ಮಾಡುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ. ಆಗುಂಬೆ ಠಾಣೆ ಪ್ರಕರಣ ದಾಖಲಾಗಿದೆ.

A worker was struck and killed by lightning while working in an areca nut orchard in Bidaragodu village, Agumbe, Thirthahalli taluk, Shivamogga district.